#😍ಸಧ್ಯದಲ್ಲೇ ಡಿಂಪಲ್ ಕ್ವೀನ್ ಮದುವೆ😍 ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ರಚ್ಚು, ಕೊನೆಗೂ ತಮ್ಮ ಮದುವೆ ಬಗ್ಗೆ ಮಾತನಾಡಿದ್ದು, ತಮ್ಮ ಫ್ಯಾನ್ಸ್ಗೆ ಡಬಲ್ ಧಮಾಕಾ ನೀಡಿದ್ದಾರೆ. ನವರಾತ್ರಿ ವೇಳೆ ಮೂಗುತಿ ಚುಚ್ಚಿಸಿಕೊಂಡಿದ್ದ ರಚಿತಾ ರಾಮ್ ಮದುವೆಗೆ ತಯಾರಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.ತಮ್ಮ ಹುಟ್ಟುಹಬ್ಬದಂದೇ ಮದುವೆ ವಿಚಾರವನ್ನು ಅವರು ಸ್ಪಷ್ಟಪಡಿಸಿದ್ದು, ತಮ್ಮ ಭಾವಿ ಪತಿಯ ಬಗ್ಗೆಯೂ ಅಚ್ಚರಿ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.ಇಲ್ಲಿವರೆಗೆ ಮದುವೆ ಯಾವಾಗ? ಎಂಬ ಪ್ರಶ್ನೆಗೆ ರಚಿತಾ ರಾಮ್ ನಗುತ್ತಿದ್ದರು. ನೋಡೋಣ, ಆದಾಗ ಹೇಳ್ತೀನಿ ಎಂದು ಜಾರಿಕೊಳ್ಳುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ತಮ್ಮ ಮದುವೆ ವಿಚಾರದ ಬಗ್ಗೆ ರಚಿತಾ ರಾಮ್ ನೇರವಾಗಿ ಮಾತನಾಡಿದ್ದಾರೆ. 'ನಾನು ಖಂಡಿತವಾಗಿಯೂ ಮದುವೆ ಆಗಲೇಬೇಕು ಅಂತ ಡಿಸೈಡ್ ಮಾಡಿದ್ದೀನಿ ಎಂದಿದ್ದಾರೆ ಡಿಂಪಲ್. ಖಂಡಿತವಾಗಿಯೂ ಮದುವೆ ಆಗುತ್ತೇನೆ. ಆದಷ್ಟು ಬೇಗ ಸಿಹಿಸುದ್ದಿ ಕೊಡ್ತೀನಿ ಎಂದಿದ್ದಾರೆ. ಮನೆಯವರು ಹುಡುಗನನ್ನ ಹುಡುಕಲು ಶುರು ಮಾಡಿದ್ದಾರೆ. ನಂದು 100 ಪರ್ಸೆಂಟ್ ಅರೇಂಜ್ ಮ್ಯಾರೇಜ್' ಎಂದೂ ರಚಿತಾ ರಾಮ್ ಕ್ಲಾರಿಟಿ ಕೊಟ್ಟಿದ್ದಾರೆ.ಹುಡುಗ ಸಿಕ್ಕ ಕೂಡಲೇ ನಾನೇ ಮೊದಲು ನಿಮಗೆಲ್ಲ ರಿವೀಲ್ ಮಾಡ್ತೀನಿ. ಅದು ನನ್ನ ಮದುವೆ. ಈ ವರ್ಷ ಮುಗಿಯಲು ಇನ್ನೆರಡು ತಿಂಗಳಷ್ಟೇ ಇದೆ. ಈ ವರ್ಷದಲ್ಲೇ ಮದುವೆ ಆಗಲ್ಲ, ಮುಂದೆ ಹೇಳ್ತೀನಿ. ಮದುವೆ ಯೋಚನೆ ಬಂದಿದೆ. ಅಪ್ಪ-ಅಮ್ಮನಿಗೂ ಹೇಳಿದ್ದೀನಿ. ನೋಡೋಕೆ ಶುರು ಮಾಡಿದ್ದಾರೆ. ಹುಡುಗ ಹೇಗಿರಬೇಕು ಅನ್ನೋದು ಆ ಭಗವಂತನಿಗೆ ಬಿಟ್ಟಿದ್ದು, ಯಾರನ್ನ ಕರೆದುಕೊಂಡು ಬಂದು ಇವನನ್ನ ಮದುವೆಯಾಗು ಅಂತ ನನಗೆ ಹೇಳುತ್ತಾನೋ, ಆ ಹಿಂಟ್ ಸಿಕ್ಕಾಗ ಮದುವೆ ಆಗೇ ಆಗ್ತೀನಿ' ಎಂದಿದ್ದಾರೆ. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲 #🍿ಸ್ಯಾಂಡಲ್ ವುಡ್ #👩ನಟಿಯರು
