ಅಮೃತವರ್ಷಿಣಿ ಖ್ಯಾತಿಯ ಸೀರಿಯಲ್ ನಟಿ ರಜನಿಯವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರುಣ್ ಗೌಡ ಅವರನ್ನು ಒರಸಿರುವ ಅವರು ತಮ್ಮಿಬ್ಬರ ನಡುವಿನ ಸ್ನೇಹಕ್ಕೆ ಪ್ರೀತಿಯ ಹೆಸರು ನೀಡಿದ್ದ ಅವರು ಈಗ ಕೊನೆಗೂ ದಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಿರುತರೆ ನಟಿ ರಜನಿಯವರು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮೃತವರ್ಷಿಣಿ ಮತ್ತು ಜೀ ಕನ್ನಡ ವಾಹಿನಿಯ ಹಿಟ್ಲರ್ ಕಲ್ಯಾಣ ಧಾರಾವಾಹಿ ಸೇರಿದಂತೆ ಅನೇಕ ಸೀರಿಯಲ್‌ಗಳಲ್ಲಿ ನಟಿಸಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಎರಡು ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿಕೊಂಡಿದ್ದ ಈ ಜೋಡಿ, ಎಲ್ಲರಿಗೂ ಇಷ್ಟವಾಗಿತ್ತು ಈಗ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರುವುದು ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದೆ. ಇನ್ನು ಇವರಿಬ್ಬರ ಅನ್ಯೂನ್ಯತರಯನ್ನು ನೋಡಿದವರೆಲ್ಲ ಕೆಲವು ಬಾರಿ ಲವ್ ಮಾಡ್ತಿದ್ದೀರಾ ಎಂಬ ಪ್ರಶ್ನೆಗೆ ಸ್ನೇಹಿತರು ಎಂದು ಉತ್ತರಿಸಿದ್ದ ನಟಿ ರಜಿನಿ ಈಗ ಕೊನೆಗೂ ಆ ಸ್ನೇಹಕ್ಕೆ ಮದುವೆ ಮೂಲಕ ಅರ್ಥ ನೀಡಿದ್ದಾರೆ. ಅರುಣ್ ಗೌಡ ಅವರು ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದು ಫಿಟ್‌ನೆಸ್ ಪ್ರಿಯರಾಗಿದ್ದಾರೆ. #💖ಜಿಮ್ ಟ್ರೈನರ್ ಜೊತೆ ಸಪ್ತಪದಿ ತುಳಿದ ಖ್ಯಾತ ನಟಿ 😍

