#🏏ಐಪಿಎಲ್ ಗೆ ವಿರಾಟ್ ಕೊಹ್ಲಿ ನಿವೃತಿ ; RCB ಫ್ಯಾನ್ಸ್ ಗೆ ಶಾಕ್ 😱 ವಿರಾಟ್ ಕೊಹ್ಲಿ ಐಪಿಎಲ್ನಿಂದ ನಿವೃತ್ತರಾಗುವ ಸಾಧ್ಯತೆ ಇದೆ ಎಂಬ ವರದಿ ಹರಿದಾಡುತ್ತಿದೆ. ವಿರಾಟ್ ಕೊಹ್ಲಿ ಐಪಿಎಲ್ಗೆ ಸಂಬಂಧಿಸಿದ ವಾಣಿಜ್ಯ ಒಪ್ಪಂದವನ್ನು ನವೀಕರಿಸಲು ನಿರಾಕರಿಸಿದ್ದಾರಂತೆ. ಇನ್ನು, ರೆವ್‌ಸ್ಪೋರ್ಟ್ಜ್ ಪತ್ರಕರ್ತ ರೋಹಿತ್ ಜುಗ್ಲಾನ್ ಪ್ರಕಾರ , IPL 2026ಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ಮುಂದಿನ ಮುಂದಿನ ಸೀಸನ್ಗೆ ಮುಂದುವರೆಯುವ ಒಪ್ಪಂದವನ್ನು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.ಕೊಹ್ಲಿ ಭಾರತದ ಅತಿದೊಡ್ಡ ಕ್ರಿಕೆಟ್ ಐಕಾನ್. ರಾಯಲ್ ಚಾಲೆಂಜರ್ಸ್ಗೂ ಅಷ್ಟೇ. ಆಟದಲ್ಲಿನ ಅವರ ಸ್ಥಿರತೆ, ಪ್ರದರ್ಶನ, ಫಿಟ್ನೆಸ್ ಎಲ್ಲವೂ ಕೂಡ ಬ್ರ್ಯಾಂಡ್ ಆಗಿದೆ. ಆ ಮೂಲಕ ಆರ್ಸಿಬಿಗೆ ಲಾಭದಾಯಕ ಬ್ರಾಂಡ್ ಡೀಲ್ಗಳನ್ನು ಕುದರಿಸುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಕೆಲವು ವರದಿಗಳ ಪ್ರಕಾರ, ಕೊಹ್ಲಿ ನಿರ್ದಿಷ್ಟ ಬ್ರಾಂಡ್‌ನೊಂದಿಗೆ ಒಪ್ಪಂದವನ್ನು ನವೀಕರಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ಆರ್ಸಿಬಿ ಕೊಹ್ಲಿಗೆ ಪರ್ಯಾಯ ಮುಖ ಹುಡುಕುತ್ತಿದೆ. ಇದು ಕೊಹ್ಲಿ ಐಪಿಎಲ್ನಿಂದ ಹಿಂದೆ ಸರಿಯುತ್ತಿರುವ ಸೂಚನೆ ಎಂದು ಅರ್ಥೈಸಲಾಗುತ್ತಿದೆ. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰 #🫂ಕಿಂಗ್ ಕೊಹ್ಲಿ❤️️🫂 #🏏 ಕ್ರಿಕೆಟ್
