BSNL ದೀಪಾವಳಿ ಭರ್ಜರಿ ಆಫರ್: ಕೇವಲ 1 ರೂ.ಗೆ ಅನ್‌ಲಿಮಿಟೆಡ್ ಕಾಲ್,ಇಂಟರ್ನೆಟ್.!
BSNL ದೀಪಾವಳಿ ಭರ್ಜರಿ ಆಫರ್, ಕೇವಲ 1ರೂ.ಗೆ ಅನ್‌ಲಿಮಿಟೆಡ್ ಕಾಲ್, ಡೇಟಾ ಘೋಷಿಸಲಾಗಿದೆ. ಬಿಎಸ್‌ಎನ್‌ಎಲ್ ಬಳಕೆದಾರರು, ಹೊಸ ಗ್ರಾಹಕರಿಗೆ ದೀಪಾವಳಿ ಬೊನಾನ್ಜಾ ಆಫರ್ ನೀಡಲಾಗಿದೆ.
ದೀಪಾವಳಿಗೆ ಬಿಎಸ್‌ಎನ್‌ಎಲ್ ಭರ್ಜರಿ ಆಫರ್ ಘೋಷಿಸಿದೆ:
ದೀಪಾವಳಿ ಬೊನಾನ್ಜಾ ಆಫರ್ ಮೂಲಕ ಗ್ರಾಹಕರಿಗೆ ಕೇವಲ 1 ರೂಪಾಯಿಗೆ ಅನ್‌ಲಿಮಿಚೆಡ್ ಡೇಟಾ ಹಾಗೂ ಕಾಲ್ ಆಫರ್ ನೀಡಲಾಗಿದೆ. 1 ರೂಪಾಯಿಗೆ ಇಡೀ ತಿಂಗಳು ಬಿಎಸ್‌ಎನ್‌ಎಲ್ ಆಫರ್ ಅನುಭವಿಸಬಹುದು. ಇದು ಸೀಮಿತ ಅವಧಿಯ ಆಫರ್.
ಒಂದು ತಿಂಗಳವರೆಗೆ ಇರಲಿದೆ ಆಫರ್:
ಬಿಎಸ್‌ಎನ್‌ಎಲ್ ದೀಪಾವಳಿ ಬಂಪರ್ ಆಫರ್ ಅಕ್ಟೋಬರ್ 15 ರಿಂದ ನವೆಂಬರ್ 15 ರವರೆಗೆ ಇರಲಿದೆ. ಒಂದು ತಿಂಗಳು ಈ ಆಫರ್ ರೀಚಾರ್ಜ್ ಮಾಡಲು, ಆಕ್ಟಿವೇಟ್ ಮಾಡಲು ಅವಕಾಶವಿದೆ. ಅಗಸ್ಟ್ ತಿಂಗಳಲ್ಲೇ ಇದೇ ರೀತಿ ಬಿಎಸ್‌ಎನ್‌ಎಲ್ ಫ್ರೀಡಂ ಆಫರ್ ಘೋಷಣೆ ಮಾಡಿತ್ತು.
ಬಿಎಸ್‌ಎನ್‌ಎಲ್ 1 ರೂಪಾಯಿ ಆಫರ್:
ದೀಪಾವಳಿ ಆಫರ್ ಮೂಲಕ ಹೊಸ ಗ್ರಾಹಕರಿಗೆ ಬಿಎಸ್‌ಎನ್‌ಎಲ್ 4G ಸಿಮ್ ಕೇವಲ 1 ರೂಪಾಯಿಗೆ ಸಿಗಲಿದೆ. 1 ರೂಪಾಯಿ ನೀಡಿ ಬಿಎಸ್‌ಎನ್‌ಎಲ್ ಸಿಮ್ ಖರೀದಿಸಿದ ಬಳಿಕ ಆಕ್ಚಿವೇಟ್ ಆಗಲಿದೆ. ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್ ಸೇವೆ ಸಿಗಲಿದೆ. ಪ್ರತಿ ದಿನ 2GB ಹೈಸ್ಪೀಡ್ ಡೇಟಾ ಸಿಗಲಿದೆ.
ವ್ಯಾಲಿಟಿಡಿ ಎಷ್ಟು.?
ಬಿಎಸ್‌ಎನ್‌ಎಲ್ 1 ರೂಪಾಯಿ ಪ್ಲಾನ್‌ನಲ್ಲಿ 30 ದಿನ ವ್ಯಾಲಿಟಿಡಿ ಇರಲಿದೆ. ದೀಪಾವಳಿ ಆಫರ್ ಮುಗಿದ ಬಳಿಕ ಬಿಎಸ್‌ಎನ್‌ಎಲ್ ಸಾಮಾನ್ಯ ರೀಚಾರ್ಜ್ ಮೂಲಕ ಸಿಮ್ ಸಕ್ರಿಯವಾಗಿಡಲು ಸಾಧ್ಯವಿದೆ. ಇಷ್ಟೇ ಅಲ್ಲ ಅವಶ್ಯಕತೆಗೆ ತಕ್ಕಂತೆ ಕಡಿಮೆ ಬೆಲೆಯ ಉತ್ತಮ ಪ್ಲಾನ್ ರೀಚಾರ್ಜ್ ಮಾಡಿಕೊಳ್ಳಬಹುದು.
1 ರೂಪಾಯಿ ಆಫರ್ ಪಡೆಯುವುದು ಹೇಗೆ.?
ಹೊಸ ಗ್ರಾಹಕರು ಹತ್ತಿರದ ಬಿಎಸ್‌ಎನ್‌ಎಲ್ ಕೇಂದ್ರಕ್ಕೆ ತೆರಳಿ ಹೊಸ ಸಿಮ್ ಖರೀದಿಸಬೇಕು. 1 ರೂಪಾಯಿ ನೀಡಿ ಸಿಮ್ ಖರೀದಿಸಿದರೆ ಸಾಕು, ಇನ್ನು KYC ಸೇರಿದಂತೆ ಅಗತ್ಯ ದಾಖಲೆ ಸಲ್ಲಿಕೆ ಮಾಡಿದರೆ ಗಂಟೆಗಳ ಅವಧಿಯಲ್ಲಿ ಸಿಮ್ ಆಕ್ಟಿವೇಟ್ ಆಗಲಿದೆ. ಇದು ಲಿಮಿಟೆಡ್ ಪಿರೀಯೆಡ್ ಆಫರ್, ಹೀಗಾಗಿ ಹೊಸದಾಗಿ ಸಿಮ್ ಖರೀದಿಸಿದರೆ ಅಕ್ಟೋಬರ್ 15 ರಿಂದ ನವೆಂಬರ್ 15 ರ ಒಳಗೆ ಆಕ್ಟಿವೇಟ್ ಮಾಡಿಕೊಳ್ಳಬೇಕು.
ಬಿಎಸ್‌ಎನ್‌ಎಲ್ ಸಹಾಯವಾಣಿ:
ದೀಪಾವಳಿ ಆಫರ್‌ನಲ್ಲಿ ಸಮಸ್ಯೆ ಎದುರಾದರೆ ಬಿಎಸ್‌ಎನ್‌ಎಲ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಬಿಎಸ್‌ಎನ್‌ಎಲ್ ಅಧಿಕೃತ ವೆಬ್‌ಸೈಟ್ ಅಥವಾ 1800-180-1503 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
#LATEST #DOT #BUSINESS #BSNL4G #DEEPAVALI #BONANZAOFFER
