#📜ಪ್ರಚಲಿತ ವಿದ್ಯಮಾನ📜
ಬಿಜೆಪಿ ವಾಷಿಂಗ್ ಮಿಷಿನ್ ನಲ್ಲಿ ಭ್ರಷ್ಟಾಚಾರಿಗಳು ಸ್ವಚ್ಛಗೊಳ್ಳುತ್ತಾರೆ: ಸಂತೋಷ್ ಲಾಡ್
ವೀರೇಂದ್ರ ಪಪ್ಪಿ ಅವರನ್ನು ಬಿಜೆಪಿ ತನ್ನತ್ತ ಸೆಡೆಯಲು ಪ್ರಯತ್ನ ನಡೆಸಿದೆ
ಬೆಂಗಳೂರು: ಅಕ್ರಮ ಬೆಟ್ಟಿಂಗ್ ದಂಧೆ ಹಾಗೂ ಆನ್ ಲೈನ್ ಗೇಮಿಂಗ್ ಸಂಬಂಧ ಬಂಧಿತರಾಗಿರುವ ಕಾಂಗ್ರೆಸ್ ಶಾಸಕ ಹಾಗೂ ಚಿತ್ರ ನಟ ದೊಡ್ಡಣ್ಣ ಅವರ ಅಳಿಯ ವೀರೇಂದ್ರ ಪಪ್ಪಿ ಅವರನ್ನು ಬಿಜೆಪಿ ತನ್ನತ್ತ ಸೆಡೆಯಲು ಪ್ರಯತ್ನ ನಡೆಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಯಾರನ್ನು ಯಾವಾಗ ಸೆಳೆಯುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ. ಅವರಿಗೆ ಅವರದೇ ಆದಂತಹ ತಂತ್ರಗಾರಿಕೆ ಇದೆ. ಕಾಂಗ್ರೆಸ್‌ನ ಶಾಸಕ ವೀರೇಂದ್ರ ಪಪ್ಪಿ ವಿರುದ್ಧವೂ ಅಂತಹ ಪ್ರಯತ್ನ ನಡೆದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‌ನ ಶಾಸಕ ವೀರೇಂದ್ರ ಪಪ್ಪಿ ಅವರ ವಿರುದ್ಧ ಆರೋಪ ಮಾಡಿರುವುದು ರಾಜಕೀಯ ಕಾರಣಕ್ಕೆ. 40 ಕೆ.ಜಿ. ಚಿನ್ನ ಸಿಕ್ಕಿದೆ ಎಂದು ಹೇಳಲಾಗಿದೆ. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಹಿಮಂತ್ ಬಿಸ್ವಾಶರ್ಮ ಅವರ ವಿರುದ್ಧ ಶಾರದಾ ಚಿಟ್‌ಫಂಡ್ ಹಗರಣ ಇತ್ತು. ಅದೇ ರೀತಿ ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ವಿರುದ್ಧ ಸಾವಿರಾರು ಕೋಟಿ ರೂ.ಗಳ ಹಗರಣದ ಆರೋಪವಿತ್ತು. ಅವರನ್ನು ಬಿಜೆಪಿಗೆ ಸೇರಿಸಿಕೊಂಡರು ಈಗ ವಾಷಿಂಗ್‌ಪೌಡರ್ ನಿರ್ಮಾ ಹಾಕಿ ಸ್ವಚ್ಛಗೊಳಿಸಿದ್ದಾರೆಯೇ? ಎಂದು ಪ್ರಶ್ನಿಸಿದರು.
ವೀರೇಂದ್ರ ಪಪ್ಪಿ ಬಿಹಾರ ವಿಧಾನಸಭೆಯ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷಕ್ಕೆ ದುಡ್ಡು ಕೊಟ್ಟಿಲ್ಲ. ಒಂದು ವೇಳೆ ಯಾರಾದರೂ ಆ ರೀತಿ ದುಡ್ಡು ಕೊಟ್ಟಿದ್ದರೆ ಪತ್ತೆ ಹಚ್ಚುವ ವ್ಯವಸ್ಥೆಗಳು ಮತ್ತು ಸಾಮರ್ಥ್ಯ ಕೇಂದ್ರ ಸರ್ಕಾರದ ಬಳಿ ಇವೆ. ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯ ಪೂರ್ಣ ಖರ್ಚನ್ನು ಅಜಿತ್ ಪವಾರ್ ನೋಡಿಕೊಂಡಿದ್ದರು ಎಂದರು.
ಫೆಮಾ, ಇಡಿ ದಾಳಿ ಮಾಡಿಸಿ, ದುಡ್ಡು ಇರುವವರನ್ನು ಪತ್ತೆ ಹಚ್ಚಿ ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ. ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳೇ ಅಜಿತ್ ಪವಾರ್ ವಿರುದ್ಧ ಆರೋಪ ಮಾಡಿದ್ದವು. ಈಗ ಅಜಿತ್ ಪವಾರ್ ಆರೋಪಿ ಅಲ್ಲವೇ ಎಂದು ಪ್ರಶ್ನಿಸಿದರು.
ಭ್ರಷ್ಟಚಾರದ ಆರೋಪ ಇರುವವರನ್ನು ಬಿಜೆಪಿಗೆ ಸೇರಿಸಿಕೊಂಡು ತಮ ಬಳಿಯಿರುವ ವಾಷಿಂಗ್‌ಮೆಷಿನ್‌ವೊಂದಕ್ಕೆ ಹಾಕುತ್ತಾರೆ. ಅಲ್ಲಿಗೆ ಅವರು ಪ್ರಾಮಾಣಿಕರಾಗಿ ಸ್ವಚ್ಛಗೊಳ್ಳುತ್ತಾರೆ. ಭ್ರಷ್ಟಚಾರಿಗಳಾಗಿ ಉಳಿಯುವುದಿಲ್ಲ. ಈ ರೀತಿ 25 ನಾಯಕರನ್ನು ಸ್ವಚ್ಛಗೊಳಿಸಲಾಗಿದೆ ಎಂದರು.
ವಿಶ್ವದಲ್ಲಿ ಭಾರತ ಭ್ರಷ್ಟಚಾರ, ಆಭಿವ್ಯಕ್ತಿ ಸ್ವಾತಂತ್ರ್ಯ, ಹಸಿವಿನ ಸೂಚ್ಯಂಕ, ಪಾಸ್‌ಪೋರ್ಟ್ ರ್ಯಾಂಕಿಂಗ್ ಎಲ್ಲದರಲ್ಲೂ ಯಾವ ಸ್ಥಾನಮಾನದಲ್ಲಿದೆ ಎಂದು ಬಿಜೆಪಿಯವರು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
#Corrupt #people #get #cleaned #BJP #washingmachine #SantoshLad #malgudiexpress #malgudinews #news #TopNews
