ShareChat
click to see wallet page
ನನ್ನ ಕಥೆ ನನ್ನ ಶ್ರೇಷ್ಠತೆಯೆಂತು ನನಗೆ ತಿಳಿದಿಲ್ಲ, ಸೂರ್ಯೋದಯದೊಡನೆ ಜೇಸಿಬಿಯ ಗರ್ಜನೆ ಕಿವಿಗೆ ಬಡಿದಾಗ, ನನ್ನ ಹೃದಯದ ಭೂಮಿ ಕಂಪಿಸಿತು. ಏನು ಮಾಡಲಿ ,ನನ್ನನ್ನು ಕಿತ್ತು, ಮಣ್ಣಿನಡಿ ಹಾಕಿ, ಗೊಬ್ಬರ ಮಾಡಿಬಿಟ್ಟರು ಮನುಜರು. ನನ್ನ ಕುಟುಂಬಗಳು ಕುಸಿಯುತ್ತಿವೆ ನಗರಗಳಲ್ಲಿ ನಾನು ಕಾಣೆಯಾದೆ, ಹಳ್ಳಿಗಳಲ್ಲೂ ನನ್ನ ನೆನಪು ಮಾತ್ರ ಉಳಿದಿದೆ. ಕಾಡುಗಳನ್ನು ಕಿತ್ತು, ಗುಡ್ಡಗಳನ್ನು ತೆಗೆದು ಅದೆಯ ಜಾಗದಲ್ಲಿ ಮನೆ, ತೋಟ, ರಬ್ಬರ್ ತೋಟ, ಅಡಿಕೆ ತೋಟಮಾಡಿಬಿಟ್ಟರು, ಅಲ್ಲಿ ನಾನು ಗೊಬ್ಬರವಾಗಿದ್ದೆ. ಒಮ್ಮೆ ಮೇಧಾವಿ ಮನುಜನೊಬ್ಬ ಊರಿಗೆ ಹೇಳಿದ್ದ ದೈವರಾಧನೆಗೆ ಕೇಪುಳ ಹೂ ಬೇಕಂತೆ, ಅದರಲ್ಲೂ ಗುಳಿಗ ಮತ್ತು ಪಂಜುರ್ಲಿ ದೈವಗಳಿಗೆ ಅದು ಪವಿತ್ರ ಎಂದಂತೆ. ಆದರೆ ಊರು ಸುತ್ತಿ ಹುಡುಕಿದರೂ ಸಿಕ್ಕಿಲ್ಲ. ಒಬ್ಬ ಗರ್ಭಿಣಿಗೆ ಮಗುವಿನ ಆರೋಗ್ಯಕ್ಕಾಗಿ ಆಯುರ್ವೇದ ಪಂಡಿತರು ಕೇಪುಳ ಬೇರಿನ ಕಷಾಯ ನೀಡಬೇಕೆಂದರು. ಜ್ವರ ಕಾಡಿದಾಗ ಜನರು ನನ್ನ ಬೇರುಗಳಿಂದ ಕಷಾಯ ಮಾಡಿ ಕುಡಿದರು “ರೋಗನಿರೋಧಕ ಶಕ್ತಿ ಹೆಚ್ಚುತ್ತದೆ” ಎಂದರು. ಆ ಪಂಡಿತನೇ ನನ್ನ ಉಳಿವಿಗೋಸ್ಕರ ತನ್ನ ಮನೆಗೆ ಹೋಗಿ ಒಂದು ಗಿಡ ನೆಟ್ಟನು ಪುನರ್ಜನ್ಮ ನೀಡಿದಂತಾಗಿತ್ತು.. ಕಾಡಿನ ರಸ್ತೆಯ ಬದಿಯಲ್ಲಿ ಬೆಳೆದಾಗ, ನನ್ನ ಕಾಯಿಗಳನ್ನು ಮಂಗಗಳು, ಪಕ್ಷಿಗಳು, ಮಕ್ಕಳು ತಿನ್ನುತ್ತಿದ್ದರು. ಆ ನೋಟ ನನಗೆ ಸಂತೋಷವಾಗಿತ್ತು. ಆದರೆ ಇಂದು ಕಿತ್ತು ಬಿಸಾಡುವವರ ಕೈಯಲ್ಲಿ ನನ್ನ ಮನಸ್ಸು ನೋವಿನಿಂದ ಕಹಿಯಾಗುತ್ತದೆ. ಆ ಪಂಡಿತರು ನನ್ನಿಂದ ಹಣ ಮಾಡಿದರು, ಆದರೆ ಅದರಲ್ಲಿ ನನ್ನ ಉಳಿವಿದೆ ಎಂದು ನಾನು ಸಮಾಧಾನಪಡುತ್ತೇನೆ. ದೈವಗಳ ಆರಾಧನೆಗೆ ಇಂದು ಹೈಬ್ರಿಡ್ ಬಾಂಬೆ ಕೇಪುಳ ಹೂ ಕಾಲಿಟ್ಟಿದೆ ಆದರೆ ನಾನು? ನೋವಿನಿಂದ ಕೂಡಿದರೂ,ಕೂಡ ಸೌಂದರ್ಯದಿಂದ ಬದುಕುತ್ತಿರುವೆ.ಅದರೆ ಕೆಲವು ದಿನಗಳಿಗೆ ಮಾತ್ರ,ಅವರವರ ಭಾವಕ್ಕೆ ಅವರವರ ಭಕ್ತಿ ಎಂದು ಸುಮ್ಮನೆ ಕೂರಬೇಕಷ್ಟೆ ರಾಂ ಅಜೆಕಾರು ಕಾರ್ಕಳ http://ramajekar.travel.blog/2025/10/13/daily-stories-12/ #ಸೋಮವಾರ #ಶುಭೋದಯ ಶುಭ ಸೋಮವಾರ #ಶುಭ ಸೋಮವಾರ #ಶುಭನುಡಿ 🌹 ಶುಭದಿನ #ಶುಭನುಡಿ #Kantara #KantaraSpirit #KantaraLegend #KantaraMovie #KantaraCulture #KantaraDivine #KantaraVibes #KantaraRishabShetty #KantaraLegacy #KantaraFestival #KantaraDaiva #KantaraMagic #KantaraPride #KantaraRevolution #KantaraSensation
ಸೋಮವಾರ - Ram Ajekar official Ram Ajekar official - ShareChat

More like this