#💐ಗುರುವಾರದ ಶುಭಾಶಯಗಳು
ತೆರೆಮರೆಯ ಕಂಬಳ ಸಾಧಕರ ಕಥೆ
ಅದೊಂದು ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕಂಬಳ ರಾಜ್ಯದಲ್ಲೇ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿರುವ ಕಂಬಳವೆಂದರೆ ಮಿಯ್ಯಾರಿನ ಲವಕುಶ ಕಂಬಳ. ಈ ಕಂಬಳ ಆಧುನಿಕ ಕಂಬಳಗಳಲ್ಲಿ ಅಗ್ರಗಣ್ಯವಾಗಿದ್ದು, ಅನೇಕ ದಾಖಲೆಗಳನ್ನು ತನ್ನ ಹೆಸರಿಗೆ ಬರೆದಿದೆ. ಸುಮಾರು 290 ಕ್ಕೂ ಹೆಚ್ಚು ಕಂಬಳ ಕೋಣಗಳು ಒಂದೇ ಕಂಬಳದಲ್ಲಿ ಭಾಗವಹಿಸಿದ್ದವು ಎಂಬ ದಾಖಲೆ ಇದೇ ಕಂಬಳದ ಹೆಮ್ಮೆ.
ಸುಮಾರು11 ವರ್ಷಗಳ ಹಿಂದಿನ ಮಿಯ್ಯಾರು ಕಂಬಳದ ನೆನಪುಗಳು ಇಂದಿಗೂ ಜನರ ಮನದಲ್ಲಿ ತಾಜಾ. ಆ ವೇಳೆಯಲ್ಲಿ ಇಬ್ಬರು ಚಿಕ್ಕ ಮಕ್ಕಳು ಕಂಬಳ ಕರೆಯಲ್ಲಿ ಓಟಕ್ಕೆ ಇಳಿದಿದ್ದರು. ಅವರ ಹೃದಯದಲ್ಲಿ ಒಂದೇ ಕನಸು “ನಾವು ಕಂಬಳದ ಉಸೇನ್ ಬೋಲ್ಟ್ ಆಗಬೇಕು, ಕಂಬಳದ ಶ್ರೀನಿವಾಸ ಗೌಡನಂತೆ ವೇಗದ ದಾಖಲೆ ಬರೆಯಬೇಕು.” ಎಂಬುದು ಅವರಲ್ಲಿತ್ತು.
ಕಂಬಳ ನೋಡುತ್ತಾ ಅದರ ಅರೈಕೆಯ ಮಾಡುವವರು, ಅವರು ಕೋಣಗಳ ನಿಜವಾದ ಗೆಳೆಯರು. ಕೋಣಗಳಿಗೆ ನೀರು ತರುವುದು, ಮೈಮೇಲೆ ನೀರು ಎರಚುವುದು, ಮಲಗಿದಾಗ ಅದರ ದೇಹಕ್ಕೆ ಮೈ ತುರಿಸುವುದು,
ಇವೆಲ್ಲವೂ ಅವರ ಜೀವನದ ಭಾಗವಾಗಿದ್ದವು. ಅವರ ಬಾಲ್ಯದ ಆ ಸಣ್ಣಪುಟ್ಟ ಕ್ಷಣಗಳೇ ಮುಂದೆ ಕಂಬಳ ಸಂಸ್ಕೃತಿಯ ದೊಡ್ಡ ಪ್ರೇರಣೆಯಾಗಿದವು.
ಕಂಬಳದ ಓಟ ಪ್ರಾರಂಭವಾದಾಗ ಬಾಲಕರಿಗೆ ಗದ್ದೆಗೆ ಇಳಿಯಲು ಅವಕಾಶ ಇರಲಿಲ್ಲ. ಯಾಕೆಂದರೆ ಕಂಬಳ ಕೋಣಗಳ ವೇಗ ಕ್ಷಣಗಳಲ್ಲಿ ಗೆಲುವು ನಿರ್ಧರಿಸುವಂಥದ್ದು. ಆದರೆ ಸ್ಪರ್ಧೆ ಮುಗಿದ ಬಳಿಕ ವಿಜೇತರಿಗೆ ಬಹುಮಾನ ವಿತರಣೆ ನಡೆಯುತ್ತಿದ್ದಾಗ, ಆ ಇಬ್ಬರು ಮಕ್ಕಳು ತಮ್ಮ ಯಜಮಾನರ ಹಾಗೂ ಆಯೋಜಕರ ಅನುಮತಿಯಿಂದ ಗದ್ದೆಗೆ ಇಳಿದರು. ಅದು ಅವರಿಗೊಂದು ಕನಸಿನ ಕ್ಷಣ ಮೊದಲ ಬಾರಿಗೆ ಕಂಬಳದ ಗದ್ದೆಯ ಮಣ್ಣನ್ನು ಪಾದಗಳಿಂದ ಅನುಭವಿಸಿದ ಸಂತೋಷ. ಅವರಲ್ಲಿತ್ತು
ಶಾಲೆಯಿಂದ ವಾಪಸ್ಸಾದ ತಕ್ಷಣ ಹತ್ತಿರದ ಮನೆಯ ಕಂಬಳ ಕೋಣಗಳತ್ತ ಓಡಿ ಹೋಗುವುದು, ಅವುಗಳನ್ನು ಈಜುಕೊಳದಲ್ಲಿ ಸ್ನಾನ ಮಾಡಿಸುವುದು, ಆಹಾರ ನೀಡುವುದು ಈ ಎಲ್ಲವೂ ಅವರ ಪ್ರೀತಿಯ ಕಾಯಕ. ಕೋಣಗಳೊಂದಿಗೆ ಅವರು ಬೆಳೆಯುತ್ತಿದ್ದರೆಂದರೆ ತಪ್ಪಾಗದು. ಆದರೆ ಅದರ ಮಧ್ಯೆಯೂ ಓದನ್ನು ಕಡೆಗಣಿಸಲಿಲ್ಲ. ಇಬ್ಬರೂ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ತಮ್ಮ ಊರಿನಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದರು. ದ್ವಿತಿಯ ಪಿಯುಸಿ ಯಲ್ಲೂ ಇಬ್ಬರು ಅಗ್ರಗಣ್ಯರಾದರು, ಜೊತೆಗೆ ಇಬ್ಬರಿಗು ಸಾಪ್ಟ್ವೆರ್ ಇಂಜಿನಿಯರ್ ಆಗಿ ಕೆಲಸವು ದಕ್ಕಿತು ವರ್ಷಕ್ಕೆ 8 ಲಕ್ಷದ ಪ್ಯಾಕೆಜ್ ಒಂದೆ ಕಂಪೆನಿಯಲ್ಲಿ ಉದ್ಯೋಗ . ಆದರೆ ಶನಿವಾರ ರವಿವಾರ ಕಂಬಳನಡೆಯುವ ಕಾರಣ ಬೆಂಗಳೂರಿನಿಂದ ಬಸ್ ಹತ್ತಿ ಊರಿಗೆ ಬರುತಿದ್ದಾರೆ .
ಖುಷಿಯಲ್ಲು ಉತ್ತಮ ಬಂಧವಿದೆ ಸಂಸ್ಕೃತಿಯ ಸೆಳೆತವಿದೆ. ದಿಗಂತ್ ಹಾಗು ರಾಕೇಶ್ ಈ ಯುವಕರು ಈ ಸ್ಪೂರ್ತಿಯ ಸಾಧಕರು
ಮಿಯ್ಯಾರು ಲವಕುಶ ಕಂಬಳ ಹಿಂದಿನ ಕಥೆ . ಕಷ್ಟಪಟ್ಟು ದುಡಿದರೆ ಸಾಧನೆ ಸಾಧ್ಯ, ಸಂಸ್ಕೃತಿಯನ್ನು ಕಾಪಾಡಿದರೆ ಗೌರವ ಶಾಶ್ವತ ಈ ಇಬ್ಬರು ವಿದ್ಯಾರ್ಥಿಗಳ ಕಥೆಯೇ ಅದಕ್ಕೆ ಜೀವಂತ ಸಾಕ್ಷಿ.
ರಾಂ ಅಜೆಕಾರು ಕಾರ್ಕಳ
http://ramajekar.travel.blog/2025/10/16/daily-stories-14/ #ಶುಭ ಗುರುವಾರ #ಶುಭ ಗುರುವಾರ #ಶುಭ ಗುರುವಾರ
#KantaraKambala #TulunadSpirit #RishabShettyMagic #KantaraLegacy #TulunadCulture #KambalaChronicles #DivineKantara #SpiritOfTulunad #DaivaAndNature #RishabShettyVibes #KantaraReturns #TulunadPride #KambalaFever #RishabShettyUniverse #KantaraCulture #TulunadTradition #RuralRoyalty #DaivaBelaku #KantaraSaga #TulunadDaiva #RishabShettyRising #TulunadKambala #KantaraRoar #TulunadHeritage #DivineLegacy #KantaraGlory #TulunadCinema #KantaraRevolution #SpiritOfDaiva #RishabShettyKantara
