ನಟಿ ಐಶ್ವರ್ಯಾ ಸಾಲೀಮಠ ರಾಮಾಚಾರಿ ಧಾರಾವಾಹಿ ಬಿಡಲು ಅಸಲಿ ಕಾರಣ ಈಗ ಹೊರಬಂತು! ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ನಟಿ ಕವಿತಾ ಗೌಡ, ನೇಹಾ ಗೌಡ ಈಗ ತಾಯ್ತನದ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗೆ ನಟಿ ರಶ್ಮಿ ಪ್ರಭಾಕರ್ ಕೂಡ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಷಯವನ್ನು ತಿಳಿಸಿದ್ದರು. ಅಂದಹಾಗೆ ಕನ್ನಡ ಕಿರುತೆರೆಯ ಇನ್ನೋರ್ವ ನಟಿ ಕೂಡ ಮಗುವಿನ ನಿರೀಕ್ಷೆಯಲ್ಲಿದ್ದಾರಂತೆ. ನಟಿ ಐಶ್ವರ್ಯಾ ಸಾಲೀಮಠ ಅವರು ‘ರಾಮಾಚಾರಿ’ ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ. ಅವರು ಸೀರಿಯಲ್‌ನಲ್ಲಿ ಕಾಣಿಸದೆ ಕೆಲವು ತಿಂಗಳುಗಳು ಆಗಿತ್ತು. ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಅವರು ‘ರಾಮಾಚಾರಿ’ ಧಾರಾವಾಹಿಯಲ್ಲಿ ಕೊನೆಯ ದಿನ ಎಂದು ವಿಡಿಯೋ ಶೇರ್ ಮಾಡಿಕೊಳ್ಳುವುದರ ಮೂಲಕ ಸೀರಿಯಲ್‌ನಿಂದ ಹೊರಬಂದಿರೋದಾಗಿ ಹೇಳಿಕೊಂಡಿದ್ದರು. ಇಂದು ಅವರು ಗಣೇಶ ಚತುರ್ಥಿ ಪ್ರಯುಕ್ತ ಗುಡ್‌ನ್ಯೂಸ್ ನೀಡಿದ್ದಾರೆ.ಐಶ್ವರ್ಯಾ ಸಾಲೀಮಠ ಹೇಳಿದ್ದೇನು?ಐಶ್ವರ್ಯಾ ಸಾಲೀಮಠ ಹಾಗೂ ವಿನಯ್ ಯುಜೆ ಅವರು ಪಾಲಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಐಶ್ವರ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ, “ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ನಮ್ಮ ಸಣ್ಣ ಸೀಕ್ರೇಟ್‌ನ್ನು ಹಂಚಿಕೊಳ್ಳುವ ಸಮಯವಿದು. ಈ ವಿಶೇಷ ದಿನದಂದು ನಾವು ಪಾಲಕರಾಗುತ್ತಿದ್ದೇವೆ ಎಂದು ಘೋಷಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ. ನಾವು ಪಾಲಕರಾಗುತ್ತಿದ್ದೇವೆ. ದೇವರು ನಾವು ಕೇಳಿದ್ದಕ್ಕಿಂತ ಹೆಚ್ಚಿನದನ್ನು ನಮಗೆ ಆಶೀರ್ವದಿಸಿದ್ದಾನೆ. ಕೊನೆಗೂ ನಮ್ಮ ಕುಟುಂಬ ಬೆಳೆಯುತ್ತಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳನ್ನು ನಮಗೆ ನೀಡಿ, ದೃಷ್ಟಿ ಹಾಕಬೇಡಿ” ಎಂದಿದ್ದಾರೆ.ಶುಭಾಶಯ ತಿಳಿಸಿದ ತಾರೆಯರುನಟ ವಿನಯ್ ಗೌಡ, ಐಶ್ವರ್ಯಾ ಶಿಂಧೋಗಿ, ಸುಕೃತಾ ನಾಗ್, ನಿಧಿ ಹೆಗಡೆ, ಸ್ಪಂದನಾ ಸೋಮಣ್ಣ, ಅನ್ವಿತಾ ಸಾಗರ್, ಧನರಾಜ್ ಆಚಾರ್ ಮುಂತಾದವರು ಐಶ್ವರ್ಯಾ ಸಾಲೀಮಠ ಹಾಗೂ ವಿನಯ್ ಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. #🤰ಬೇಬಿ ಬಂಪ್ ಫೋಟೋಸ್ ಹಂಚಿಕೊಂಡ ಕನ್ನಡದ ಖ್ಯಾತ ನಟಿ😍
