#🌞ಸೂರ್ಯಗ್ರಹಣ🌞🌇
ಮೀನುಗಾರರ ಬದುಕು
ರಾಜ್ಯದಲ್ಲಿ ಸುಮಾರು 320 ಕಿಮೀ ಕರಾವಳಿ ಪ್ರದೇಶವಿದೆ.ಕರಾವಳಿಯ ಮೀನುಗಾರರ ಬದುಕು ಸಮುದ್ರದ ಅಲೆಗಳಂತೆ ಏರುಪೇರುಗಳಲ್ಲೇ ಸಾಗುತ್ತದೆ. ಬೆಳಗಿನ ನಸುಕಿನ ಕತ್ತಲಲ್ಲಿ ಅವರು ದೋಣಿಯನ್ನು ಸಮುದ್ರಕ್ಕೆ ಇಳಿಸುತ್ತಾರೆ. ಅಲೆಗಳ ನಾದವೇ ಅವರ ಸಂಗೀತ, ಗಾಳಿಯ ವೇಗವೆ ಅವರ ಪಥ ನಿರ್ಧರಿಸುವುದು. ಬದುಕು ಎಂದರೆ ಅವರಿಗೊಂದು ಬಲೆ, ಬಲೆಯೊಳಗೆ ಬರುವಷ್ಟು ಮೀನು ಅಷ್ಟೇ. ರೈತನಂತೆಯೆ ಮೀನುಗಾರಿಕೆಯು ಒಂದು ಕಷ್ಟದ ಬದುಕು.
ಆದರೆ ಈ ಬದುಕು ಸುಲಭವಲ್ಲ. ಮಳೆಗಾಲ ಬಂದರೆ ಸಮುದ್ರವೇ ಬೀಗ ಹಾಕಿದಂತೆ. ಆ ಹೊತ್ತಿನಲ್ಲಿ ಬಲೆಯ ಬದಲು ಹೊಟ್ಟೆಯೊಳಗೆ ಹಸಿವಿನ ಅಲೆಗಳು ಎದ್ದಾಡುತ್ತವೆ. ತೂಫಾನು ಎದ್ದರೆ, ಸಣ್ಣ ದೋಣಿಗಳಲ್ಲಿ ಜೀವವನ್ನೇ ಪಣಕ್ಕಿಟ್ಟು ಸಮುದ್ರಕ್ಕೆ ಇಳಿಯುವವರು. ಗಾಳಿಯ ಹೊಡೆತದಲ್ಲಿ ದೋಣಿ ಆಡಾಡಿದಾಗ, ಪ್ರತಿ ಕ್ಷಣವೂ ಜೀವ-ಸಾವುಗಳ ಹೋರಾಟ.
ಮೀನಿಲ್ಲದ ಒಂದು ದಿನವೆಂದರೆ ಅವರ ಮನೆಗೆ ಹೊಟ್ಟೆಪಾಡಿಲ್ಲದ ದಿನ. ಹೀಗೆ ಸಮುದ್ರದ ದಯೆಯ ಮೇಲೇ ಅವರ ಬದುಕು ಕಟ್ಟಿಕೊಂಡಿದೆ. ಹೊರಗಿಂದ ನೋಡುವವರಿಗೆ ಸಮುದ್ರ ಸುಂದರ, ಅಲೆಗಳು ಮನಮೋಹಕ, ಆದರೆ ಆ ಅಲೆಗಳ ಒಳಗಿರುವ ಮೀನುಗಾರನ ಬದುಕು ನೋವಿನ ಸಮುದ್ರವೇ.
ಅವರ ಕೈಗಳಲ್ಲಿ ಬಲೆಯಿದ್ದರೂ, ಹೃದಯದಲ್ಲಿ ಹಂಬಲವಿದೆ , ಮಕ್ಕಳ ಹೊಟ್ಟೆತುಂಬಿಸಲು, ಕುಟುಂಬದ ಮುಖದಲ್ಲಿ ನಗುವು ಮೂಡಿಸಲು. ಮಳೆ, ಗಾಳಿ, ಅಲೆಗಳೊಂದಿಗೆ ಹೋರಾಡುತ್ತಾ ಸಾಗುತ್ತದೆ.
ರಾಂ ಅಜೆಕಾರು ಕಾರ್ಕಳ
http://ramajekar.travel.blog/2025/09/21/daily-stories-10/ #ಶುಭ ರವಿವಾರ #ರವಿವಾರ....ರಜಾವಾರ.... ##💐ಶುಭ ರವಿವಾರ 🌄 #ಶುಭ ರವಿವಾರ ಶುಭೋದಯ
#MalpeBeach #SeaBreeze #CoastalVibes #OceanWhispers #SunsetGlow #WaveChasing #BeachMood #FishermenLife #SeafoodLove #TravelMalpe #SandAndSea #OceanDiaries #CoastalCharm #BeachEscape #NatureCanvas #SeasideSoul #TideAndTime #BlueHorizon #ShoreStories #SereneShores
