"ಉದಯ, ಮಧ್ಯಾಹ್ನ, ಸಂಧ್ಯಾ ಕಾಲವ ನೋಡಿ ಮಾಡುವ ಕರ್ಮಿ ನೀ ಕೇಳಾ; ಉದಯವೆಂದೇನೊ ಶರಣಂಗೆ, ಮಧ್ಯಾಹ್ನವೆಂದೇನೊ ಶರಣಂಗೆ, ಅಸ್ತಮಾನವೆಂದೇನೊ ಶರಣಂಗೆ, ಮಹಾ ಮೇರುವಿನ ಮರೆಯಲ್ಲಿರ್ದು ತಮ್ಮ ನೆಳಲನರಸುವ ಭಾವ ಭ್ರಮಿತರ ಮೆಚ್ಚ, ನಮ್ಮ ಕೂಡಲಸಂಗಮದೇವ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
