Gruhalakshmi Yojane: ಗೃಹಲಕ್ಷ್ಮಿ ಹಣದ ಬಗ್ಗೆ ಮಾಹಿತಿ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್!.. ಈ ದಿನದಂದು ಜಮೆ?: ಗೃಹಲಕ್ಷ್ಮಿ ಹಣ (Gruhalakshmi Money)ಯಾವಾಗ ಬರುತ್ತದೆ, ಸಾಲು ಸಾಲು ಹಬ್ಬಗಳು ಬರುತ್ತಾ ಇವೆ. ಸರ್ಕಾರ ಹಣ ಹಾಕುತ್ತಿಲ್ಲವಲ್ಲ ಎಂದು ರಾಜ್ಯದ ಮಹಿಳೆಯರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಹಣ ಜಮೆ ಮಾಡುತ್ತೆವೆ, ಕೆಲವೇ ದಿನಗಳಲ್ಲಿ ಹಣ ಹಾಕುತ್ತೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಹೇಳುತ್ತಲೇ ಇದ್ದಾರೆ.ಹೌದು, ನಾಲ್ಕು ಸಾವಿರ ಹಣ ಯಾವಾಗ ಜಮೆ ಆಗುತ್ತದೆ ಎಂದು ಕಾದು ಕುಳಿತಿರುವ ರಾಜ್ಯದ ಮಹಿಳೆಯರಿಗೆ ಮತ್ತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಸಂತಸ ಮೂಡುವ ಹೇಳಿಕೆ ನೀಡಿದ್ದಾರೆ. ಬೀದರ್‌ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, ಇನ್ನೊಂದು ವಾರದಲ್ಲಿ ಎರಡು ತಿಂಗಳ ಹಣವನ್ನು ಗೃಹಲಕ್ಷ್ಮಿಯರ ಖಾತೆಗೆ ಜಮೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಈ ಮೂಲಕ ಎಲ್ಲಿ ಈ ಯೋಜನೆ ನಿಲ್ಲಿಸಿಬಿಡುತ್ತಾರೋ ಎಂಬ ಆತಂಕದಲ್ಲಿದ್ದ ಮಹಿಳೆಯರಿಗೆ ಸಂತಸ ಉಂಟಾಗಿದೆ. ಇದೇ ಸಮಯದಲ್ಲಿ ಅವರು 'ಅಕ್ಕ ಪಡೆ' ಬಗ್ಗೆಯೂ ಮಾತನಾಡಿದ್ದಾರೆ. ಮಹಿಳೆಯರ ಸುರಕ್ಷೆಗಾಗಿ ಬೀದರ್ ಜಿಲ್ಲಾ ಪೊಲೀಸ್ ಇಲಾಖೆ ಆರಂಭಿಸಿರುವ ಅಕ್ಕ ಪಡೆ ಮಾದರಿಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಜೊತೆಗೆ ಅಕ್ಕ ಪಡೆಯ ಕೆಲಸವನ್ನು ಶ್ಲಾಘಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆ ರಾಜ್ಯದಾದ್ಯಂತ ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಪ್ರಮುಖ ಕಲ್ಯಾಣ ಉಪಕ್ರಮವಾಗಿದೆ. ಯೋಜನೆಯಡಿಯಲ್ಲಿ, ಅರ್ಹ ಮಹಿಳಾ ಮನೆ ಮುಖ್ಯಸ್ಥರು ತಿಂಗಳಿಗೆ ₹2,000 ನೇರ ಆರ್ಥಿಕ ಸಹಾಯವನ್ನು ಪಡೆಯುತ್ತಾರೆ.ಈ ಯೋಜನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದರೂ, ಕೆಲವರು ಅದರ ದೀರ್ಘಕಾಲೀನ ಆರ್ಥಿಕ ಸುಸ್ಥಿರತೆಯ ಬಗ್ಗೆ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಸಮಾನಾಂತರ ಹೂಡಿಕೆಗಳಿಲ್ಲದೆ ನೇರ ನಗದು ವರ್ಗಾವಣೆ ಮಾತ್ರ ಮಹಿಳಾ ಸಬಲೀಕರಣವನ್ನು ಖಚಿತಪಡಿಸುತ್ತದೆಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. #🤩ಗೃಹಲಕ್ಷ್ಮಿ ಹಣದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್!
