ShareChat
click to see wallet page
#📜ಪ್ರಚಲಿತ ವಿದ್ಯಮಾನ📜 ನೂತನ ವಾರ್ಡ್ ಗಳಿಗೆ ಸಾಹಿತಿ, ರಾಜಕೀಯ ಮುತ್ಸದ್ಧಿಗಳ ಹೆಸರಿಡಿ ನೂತನವಾಗಿ ವಿಂಗಡಿಸಿರುವ ವಾರ್ಡ್ ಗಳಲ್ಲಿ ಅ ನ ಕೃಷ್ಣರಾಯರು, ಮಾ ರಾಮಮೂರ್ತಿ, ಜಿ ನಾರಾಯಣ್, ಪುಟ್ಟಣ್ಣ ಶೆಟ್ಟರು, ಶ್ರೀ ರಾಮಕೃಷ್ಣ ಹೆಗಡೆ ಇವರ ಹೆಸರುಗಳು ನಾಮಕರಣ ಮಾಡಬೇಕು. ಕರ್ನಾಟಕದಲ್ಲಿ ಕನ್ನಡ ಚಳವಳಿಯನ್ನು ಹುಟ್ಟು ಹಾಕಿದಂತಹ ಅ ನ ಕೃಷ್ಣರಾಯ, ಕನ್ನಡದ ಬಾವುಟವನ್ನು ಕೊಟ್ಟಂತಹ ಮ ರಾಮಮೂರ್ತಿ, ಬೆಂಗಳೂರು ನಗರದ ಪುರಸಭೆಯ ಅಧ್ಯಕ್ಷರಾಗಿ ಬೆಂಗಳೂರು ನಗರದ ಪ್ರಗತಿಗೆ ಕಾರಣಕರ್ತರಾದ ಪುಟ್ಟಣ್ಣ ಶೆಟ್ಟರು, ಬೆಂಗಳೂರು ನಗರದ ಮಹಾಪೌರರಾಗಿ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆಯನ್ನ ಅನಾವರಣ ಮಾಡಿ, ಬೆಂಗಳೂರು ನಗರದ ಜನರಿಗೆ ಕಾವೇರಿ ಮೊದಲ ಹಂತದ ಕುಡಿಯುವ ನೀರಿನ ಯೋಜನೆಗೆ ಚಾಲನೆಯನ್ನು ನೀಡಿದವರು ಮತ್ತು ನಗರ ಪಾಲಿಕೆಯಲ್ಲಿ ಕನ್ನಡದಲ್ಲಿ ಆಡಳಿತದ ನಡೆಸಲು ಬದ್ಧತೆಯನ್ನು ತೋರಿದಂತಹ ಹಿರಿಯ ಗಾಂಧಿ ವಾದಿ ಜಿ ನಾರಾಯಣ್ ರವರು ಹಾಗೂ 1972 ರಲ್ಲಿ ಸೂಪರ್ ಸೀಡ್ ಆಗಿದ್ದ ಬೆಂಗಳೂರು ನಗರ ಪಾಲಿಕೆಗೆ 1983ರಲ್ಲಿ ಚುನಾವಣೆಯನ್ನು ನಡೆಸಿ ಅಧಿಕಾರ ವಿಕೇಂದ್ರೀಕರಣಕ್ಕೆ ಮಹತ್ವವನ್ನು ಕೊಟ್ಟವರು, ಬೆಂಗಳೂರು ನಗರದ ಅಭಿವೃದ್ಧಿಗೆ ನೀಲಿ ನಕ್ಷೆಯನ್ನ ನೀಡಿದವರು ಮತ್ತು ಬೆಂಗಳೂರು ನಗರದಲ್ಲಿ ಲಕ್ಷಾಂತರ ಸಸಿಗಳನ್ನು ನಡೆಸಿ ಉದ್ಯಾನಗಳ ನಗರವೆಂಬ ಬೆಂಗಳೂರಿನ ಹೆಸರನ್ನು ಉಳಿಸುವಂತೆ ಶ್ರಮ ಪಟ್ಟವರು, ಪ್ರತಿ ಶನಿವಾರ ಬೆಂಗಳೂರು ನಗರದ ವಿವಿಧ ಬಡಾವಣೆಗಳಿಗೆ ಅನಿರೀಕ್ಷಿತವಾಗಿ ಭೇಟಿಯನ್ನು ನೀಡಿ ಜನರ ಸಮಸ್ಯೆಗಳನ್ನ ಕೇಳುತ್ತಿದ್ದವರು ಹಾಗೂ ಬೆಂಗಳೂರು ನಗರದಲ್ಲಿ ಮೆರೆಯುತ್ತಿದ್ದ ಗೂಂಡ ಸಂಸ್ಕೃತಿಯನ್ನು ಮಟ್ಟ ಹಾಕಿ ಜನರಿಗೆ ನೆಮ್ಮದಿಯ ಬದುಕನ್ನು ಕೊಟ್ಟವರು ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು ಹಾಗೂ ಮಾಜಿ ಯೋಜನಾ ಆಯೋಗದ ಉಪಾಧ್ಯಕ್ಷರು, ಮಾಜಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರು ಹಾಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ರಾಮಕೃಷ್ಣ ಹೆಗಡೆಯವರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ನೂತನವಾಗಿ ವಿಂಗಡಿಸಿರುವ ವಾರ್ಡ್ ಗಳಲ್ಲಿ ಇವರ ಹೆಸರುಗಳನ್ನು ನಾಮಕರಣ ಮಾಡಿ ಇವರ ಸೇವೆಗೆ ಮನ್ನಣೆ ನೀಡಬೇಕೆಂದು ಕೋರಿಕೊಳ್ಳುತ್ತೇವೆ. ಈಗಾಗಲೇ ಕೆಲವು ಮಹನೀಯರ ಹೆಸರುಗಳನ್ನ ವಾರ್ಡ್ ಗಳಿಗೆ ನಾಮಕರಣ ಮಾಡಿ ಕನ್ನಡಿಗರು ಮತ್ತು ನಾಡಿನ ಜನರಿಗೆ ಸಂತೋಷವನ್ನುಂಟು ಮಾಡಿರುತ್ತೀರಿ ಅದೇ ರೀತಿಯಲ್ಲಿ ಉಳಿದಿರುವ ಇವರು ಹೆಸರುಗಳನ್ನು ಸೂಕ್ತವೆನಿಸುವ ವಾರ್ಡ್ ಗಳಿಗೆ ನಾಮಕರಣ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಬೆಂಗಳೂರು ನಗರ ಪಾಲಿಕೆಗಳು ಕನ್ನಡ ಮಯದ ವಾತಾವರಣವಿರುವಂತೆ ಬದಲಾಗಲಿ ಎನ್ನುವುದು ನಮ್ಮೆಲ್ಲರ ಆಶಯ. - ಕೆ ಎಸ್ ನಾಗರಾಜ್, ಬೆಂಗಳೂರು #Name #new #wards #literary #figures #politicians #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - మది ೦ಯ್ 0 Soqel EXPRESS ನೂತನ ವಾರ್ಡ್ ಗಳಿಗೆ ಸಾಹಿತಿ ರಾಜಕೀಯ ಮುತ್ಸದ್ಧಿಗಳ ಹೆಸರಿಡಿ మది ೦ಯ್ 0 Soqel EXPRESS ನೂತನ ವಾರ್ಡ್ ಗಳಿಗೆ ಸಾಹಿತಿ ರಾಜಕೀಯ ಮುತ್ಸದ್ಧಿಗಳ ಹೆಸರಿಡಿ - ShareChat

More like this