Ind Vs Aus- ಸದಾ ಕೂಲ್ ಆಗಿರುವ ಸೂರ್ಯಕುಮಾರ್ ಯಾದವ್ ತಾಳ್ಮೆ ಕಳೆದುಕೊಂಡದ್ದೇಕೆ? ಶಿವ ದುಬೆಯನ್ನು ದಬಾಯಿಸಿದ್ದೇಕೆ?
Suryakumar Yadav Loses Temper- ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸಿಟ್ಟು ಮಾಡಿಕೊಂಡಿದ್ದನ್ನು ಯಾವತ್ತಾದರೂ ನೋಡಿದ್ದೀರಾ? ಕೋಪದಿಂದ ಸಹ ಆಟಗಾರನನ್ನು ಬೈದಿದ್ದು ಇದ್ಯಾ? ಇಲ್ಲ ತಾನೇ? ಸದಾ ನಗುನಗುತ್ತಾ ಕೂಲಾಗಿರುವ ಅವರು ಗುರುವಾರ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ತಾಳ್ನೆ ಕಳೆದುಕೊಂಡು ಶಿವಂ ದುಬೆಯನ್ನು ದಬಾಯಿಸಿದ್ದು ಎಲ್ಲರಿಗೂ ಅಚ್ಚರಿ ತಂದಿದೆ. ಆತಿಥೇಯ ಆಸ್ಟ್ರೇಲಿಯಾ ಇನ್ನಿಂಗ್ಸ್ ನ 12ನೇ ಓವರ್ ನಲ್ಲಿ ಈ ಘಟನೆ ನಡೆದಿದ್ದು ತೀವ್ರ ಅಚ್ಚರಿಗೆ ಕಾರಣಲವಾಗಿದೆ.