`ಹನುಮಾನ್ ಟ್ಯಾಟೂ ನಿಮಗೆ ಹೇಗೆ ಸಹಾಯ ಮಾಡುತ್ತೆ?' ಎಂಬ ಮೋದಿ ಪ್ರಶ್ನೆಗೆ ಹೀಗಿತ್ತು ದೀಪ್ತಿ ಶರ್ಮಾ ಪ್ರತಿಕ್ರಿಯೆ!
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಬುಧವಾರ ಭೇಟಿ ನೀಡಿತ್ತು. ಈ ವೇಳೆ ನಡೆದ ಸಂವಾದದಲ್ಲಿ ಮೋದಿ ಅನೇಕ ಸ್ವಾರಸ್ಯಕರ ಪ್ರಶ್ನೆಗಳನ್ನು ಚಾಂಪಿಯನ್ ತಂಡದ ಆಟಗಾರ್ತಿಯರಿಗೆ ಕೇಳಿದರು. ಅದರಲ್ಲಿ ಸರಣಿಶ್ರೇಷ್ಠ ಆಟಗಾರ್ತಿ ದೀಪ್ತಿ ಶರ್ಮಾ ಅವರಿಗೆ ಕೇಳಿದ್ದ ಪ್ರಶ್ನ ಬಹಳ ಗಮನ ಸೆಳೆಯಿತು. ದೀಪ್ತಿ ಶರ್ಮಾ ಅವರು ಹಾಕಿಕೊಂಡಿರುವ ಲಾರ್ಡ್ ಹನುಮಾನ್ ಟ್ಯಾಟೂ ಬಗ್ಗೆ ಮೋದಿ ಪ್ರಶ್ನಿಸಿದರು. ನಿಮಗೆ ಅದರಿಂದ ಯಾವ ರೀತಿ ಅನುಕೂಲ ಆಗುತ್ತಿದೆ ಎಂದು ಕೇಳಿದರು. ಅದಕ್ಕೆ ದೀಪ್ತಿ ಶರ್ಮಾ ನೀಡಿದ ಉತ್ತರ ಹೀಗಿತ್ತು.