#📢ದೀಪಾವಳಿ ಗಿಫ್ಟ್ : ಗೃಹ ಲಕ್ಷ್ಮಿಫಲಾನುಭವಿಗಳಿಗೆ 6000 ರೂಪಾಯಿ 🤩 ತುಳುನಾಡಿನ ದೀಪಾವಳಿಯ ಮೂರನೇ ದಿನದ ಸಂಭ್ರಮ ಸಂಸ್ಕೃತಿ, ಸಂಪ್ರದಾಯ ಮತ್ತು ಮಾಂಕಾಳಿ ನೃತ್ಯ
ತುಳುನಾಡಿನ ಸಂಸ್ಕೃತಿ ವೈವಿಧ್ಯಮಯವಾದದ್ದು. ಇಲ್ಲಿಯ ಆಚರಣೆಗಳು ಪ್ರತಿ ನದಿ ತೀರ, ಪ್ರತಿ ಊರಿನಲ್ಲಿ ಸ್ವಲ್ಪ ಸ್ವಲ್ಪ ಬದಲಾಗುತ್ತವೆ. ಆದರೆ ಎಲ್ಲೆಡೆ ಕಾಣಿಸಿಕೊಳ್ಳುವ ಸಂಸ್ಕೃತಿಯ ಸುವಾಸನೆ ಒಂದೇ — ಪರಂಪರೆಯ ಗೌರವ ಮತ್ತು ಭಕ್ತಿಯ ನಿಷ್ಠೆ.
ದೀಪಾವಳಿಯ ಅಮಾವಾಸ್ಯೆಯಂದು ಹಲವೆಡೆ “ಸಯಿತಿನಕ್ಲೆನೆ ಪರ್ಬ” (ಅಂದರೆ ಪೂರ್ವಜರ ಸ್ಮರಣೆಯ ಹಬ್ಬ) ಆಚರಣೆ ಮಾಡುತ್ತಾರೆ. ಕರಾವಳಿ ಪ್ರದೇಶವಾಗಿರುವುದರಿಂದ ತುಳುನಾಡಿನಲ್ಲಿ ಮೀನುಗಾರಿಕೆ ಜೀವನದ ಅವಿಭಾಜ್ಯ ಭಾಗವಾಗಿದೆ. ಈ ದಿನ ಮನೆಗಳಲ್ಲಿ ಪಲ್ಯ, ಒಣಮೀನು ಚಟ್ನಿ, ಮೀನಿನ ಸಾರು, ಕುಚ್ಚಲಕ್ಕಿ ಅನ್ನ ಸೇರಿದಂತೆ ವಿವಿಧ ವಿಧದ ಅಡುಗೆಗಳು ತಯಾರಾಗುತ್ತವೆ. ನಂತರ ಅಗೆಲಿಗೆ ಬಡಿಸಿ ಪ್ರಾರ್ಥನೆ ಸಲ್ಲಿಸಿ, ಕುಟುಂಬದವರು ಊಟ ಮಾಡುತ್ತಾರೆ.
ಗುತ್ತಿನ ಮನೆಗಳಲ್ಲಿ ಈ ದಿನ ಮಾಂಕಾಳಿ ನೃತ್ಯ ನಡೆಯುವುದು ವಿಶಿಷ್ಟ ಪರಂಪರೆ. ಕಾರ್ಕಳ ಹಾಗು ಹೆಬ್ರಿ ತಾಲುಕಿನ ಕೆಲವು ಭಾಗಗಳಲ್ಲಿಮಾತ್ರ ಕಾಣಸಿಗುತ್ತದೆ.
ಮಾಂಕಾಳಿ ನೃತ್ಯಗಾರರು ಮನೆ ಮನೆಗೆ ತೆರಳಿ ನೃತ್ಯ ಪ್ರದರ್ಶಿಸುತ್ತಾರೆ. ಅವರನ್ನು ಸ್ವಾಗತಿಸುವಾಗ ತಟ್ಟೆಯ (ತಡಪೆ) ಮೇಲೆ ಅಕ್ಕಿ ಅಥವಾ ಭತ್ತ, ಮೆಣಸು, ಉಪ್ಪು, ವಿಳ್ಯದೆಲೆ, ಅಡಿಕೆ, ತೆಂಗಿನಕಾಯಿ ಹಾಗೂ ಅಡಿಗೆಯ ಸಾಮಾಗ್ರಿಗಳನ್ನು ಇಟ್ಟು ಕೊಡುತ್ತಾರೆ.
ಮಾಂಕಾಳಿ ಮುಖವಾಡವು ಕಣ್ಣು, ಮೂಗು, ತೆರೆದ ಬಾಯಿ ಮತ್ತು ಚಾಚಿದ ನಾಲಿಗೆಯೊಂದಿಗೆ ಬಿಳಿ, ಹಳದಿ, ಕಪ್ಪು, ಹಸಿರು ಹಾಗೂ ಕೆಂಪು ಬಣ್ಣಗಳಿಂದ ಅಲಂಕರಿಸಲ್ಪಟ್ಟಿರುತ್ತದೆ. ಪಾರ್ದನದ ಹಾಡುಗಳು ತೆಂಬರೆ (ತಂತಿ ವಾದ್ಯ) ನಾದದೊಂದಿಗೆ ಹಾಡಲ್ಪಡುತ್ತವೆ. ತೆಂಬರೆಯ ತಾಳಕ್ಕೆ ಅನುಗುಣವಾಗಿ ನೃತ್ಯಗಾರನು ಸಣ್ಣ ಹೆಜ್ಜೆಗಳನ್ನು ಹಾಕುತ್ತಾ ಸುತ್ತುತ್ತಾ ನರ್ತಿಸುತ್ತಾನೆ.
ದೀಪಾವಳಿಯ ಸಂದರ್ಭದಲ್ಲಿಯೇ ಇನ್ನೊಂದು ವಿಶಿಷ್ಟ ಆಚರಣೆ ಎಂದರೆ ಕೋಳಿ ಅಂಕ. ಇದು ಸ್ಥಳೀಯ ಕೋಳಿ ಪೈಲ್ವಾನರ ನಡುವೆ ನಡೆಯುವ ಕೋಳಿ ಹೋರಾಟ. ಅಧಿಕೃತವಾಗಿ ಇಲಾಖೆಯಿಂದ ಕೋಳಿ ಅಂಕ ನಿಷೇಧಿಸಲ್ಪಟ್ಟಿದ್ದರೂ, ಕೆಲವು ಕಾಡು ಹಾಗೂ ಹೊಲ ಪ್ರದೇಶಗಳಲ್ಲಿ ಇಂದಿಗೂ ರಹಸ್ಯವಾಗಿ ನಡೆಯುವುದುಂಟು. ಗೆದ್ದ ಕೋಳಿಯನ್ನು ಬಂಟ ಕೋಳಿ ಎಂದು, ಸೋತು ಸತ್ತ ಕೋಳಿಯನ್ನು ಒಟ್ಟೆ ಕೋಳಿ ಎಂದು ಕರೆಯುತ್ತಾರೆ. ಸೋತ ಕೋಳಿಯನ್ನು ಬಾಜಿ ಕಟ್ಟಿದ ನಂತರ ಗೆದ್ದ ಕೋಳಿಯ ಮಾಲೀಕರು ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಬಾಣಲೆಯಲ್ಲಿ ಬೇಯಿಸಿ ಸಣ್ಣ ಪಾರ್ಟಿ ನಡೆಸುವ ಪರಂಪರೆಯೂ ಇದೆ..
ರಾಂ ಅಜೆಕಾರು ಕಾರ್ಕಳ
https://wp.me/pcXa3R-4p
#🪕✨ದೀಪಾವಳಿಯ ಟ್ರೆಂಡಿಂಗ್ ಹಾಡುಗಳು 🎶 #ಸ್ಪೂರ್ತಿ ದಾಯಕ ಮಾತು ಗಳು👌👍 #💐ಗುರುವಾರದ ಶುಭಾಶಯಗಳು #ಶುಭ ಬುಧವಾರ

