#💐ಮಂಗಳವಾರದ ಶುಭಾಶಯಗಳು ತುಳುನಾಡಿನ ಸಂಸ್ಕೃತಿಯ ವೈಶಿಷ್ಟ್ಯ ...
ತುಳುನಾಡಿನ ಸಂಸ್ಕೃತಿಯ ವಿಶೇಷತೆ ಎಂದರೆ ಅಕ್ಟೋಬರ್ ಅಂತ್ಯದಿಂದ ಮೇ ಮೊದಲ ವಾರದವರೆಗೆ ನಡೆಯುವ ಕಂಬಳ ಮತ್ತು ಕೋಲಗಳ ಋತು. ಈ ಅವಧಿಯಲ್ಲಿ ಗ್ರಾಮಗಳ ಗರಡಿಗಳಲ್ಲಿ ವಾರ್ಷಿಕ ಕೋಲ ಮತ್ತು ಜಾತ್ರೆಗಳು ಜೋರಾಗಿ ನಡೆಯುತ್ತವೆ. ಈ ಸಂದರ್ಭಕ್ಕೆ ಮುಂಬಯಿ, ಗೋವಾ ಅಥವಾ ಬೇರೆ ಊರುಗಳಲ್ಲಿ ವಾಸಿಸುತ್ತಿರುವ ತುಳುನಾಡಿನ ಜನರು ತಮ್ಮ ಮೂಲ ಗ್ರಾಮಗಳಿಗೆ ಬಂದು ಭಾಗವಹಿಸುತ್ತಾರೆ. ವಿಶೇಷವಾಗಿ ಮದುವೆಯಾಗಿ ಹಳ್ಳಿಯ ಹೊರಗೆ ಹೋದ ಮದುಮಕ್ಕಳು ಕೋಲಕ್ಕೆ ಬರಬೇಕು ಎನ್ನುವ ಪುರಾತನ ವಾಡಿಕೆ ಇಂದಿಗೂ ಜೀವಂತವಾಗಿದೆ.
ಹಳೆಯ ಮನೆಗಳಲ್ಲಿ ಹೊಸ ಬಟ್ಟೆ ತೊಟ್ಟು ಜಾತ್ರೆಗೆ ಬರುವ ಸಂಪ್ರದಾಯದ ಚಂದ ಇಂದಿಗೂ ಮಾಸಿಲ್ಲ.
ಪ್ರತಿಯೊಂದು ಗರಡಿಯ ಕೋಲ ಮುಗಿದ ನಂತರ ಕೋಳಿ ಅಂಕಗಳು ನಡೆಯುವುದು ಸಹ ಸಾಮಾನ್ಯ. ಕೆಲವು ಕಡೆಗಳಲ್ಲಿ ಇವು ನಾಮಕಾವಸ್ಥೆಯಂತೆ ನಡೆಯುತ್ತವೆ. ಸರ್ಕಾರ ಕೋಳಿ ಅಂಕ (ಜೂಜು)ಗಳನ್ನು ನಿಷೇಧಿಸಿದ್ದರೂ, ಕೆಲವು ಪ್ರದೇಶಗಳಲ್ಲಿ ಇನ್ನೂ ಗುಪ್ತವಾಗಿ ಹಳ್ಳಿಯೊಳಗೆ ಅಥವಾ ಕಾಡಂಚಿನ ಜಾಗಗಳಲ್ಲಿ ಇಂತಹ ಆಟಗಳು ನಡೆಯುತ್ತಲೇ ಇರುತ್ತವೆ.
ಒಮ್ಮೆ ಇಂತಹ ಒಂದು ಘಟನೆ ತುಳುನಾಡಿನ ಹಳ್ಳಿಯೊಂದರಲ್ಲಿ ನಡೆಯಿತು. ಅಂದು ಎರಡು ರಾಜಕೀಯ ಪಕ್ಷಗಳ ನಡುವೆ ಜಂಗಿ ಕುಸ್ತಿ ನಡೆಯುತ್ತಿತ್ತು. ಸ್ಥಳೀಯ ಆಡಳಿತ ಪಕ್ಷದ ಒಬ್ಬ ನಾಯಕ ಕೋಳಿ ಅಂಕವನ್ನು ನಡೆಸಿದ್ದ. ಆದರೆ ವಿರೋಧ ಪಕ್ಷದ ಯುವಕನೊಬ್ಬ ಆ ಕೋಳಿ ಅಂಕದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡಿ ಹಂಚಿಕೊಂಡ.
ಆ ವೀಡಿಯೋ ಇಲಾಖಾ ಅಧಿಕಾರಿಗಳ ಕಣ್ಣಿಗೆ ಬಿದ್ದ ತಕ್ಷಣ ಅವರು ಸ್ಥಳಕ್ಕೆ ಧಾವಿಸಿದರು. ಪೋಲೀಸರು ಬಂದು ಕೋಳಿ ಅಂಕವನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ಆ ಸಮಯದಲ್ಲಿ ಬಾಜಿ ಕಟ್ಟಿದ್ದ ಜನರು ದಿಕ್ಕುಪಾಲಾಗಿ ಓಡಿಹೋದರು. ಯಾರು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ವಿಚಾರಿಸಿದಾಗ ಯಾರೂ ಬಾಯಿಬಿಟ್ಟಿರಲಿಲ್ಲ. ಆದರೆ ನಂತರ ಸಾಮಾಜಿಕ ಜಾಲತಾಣದ ಲೈವ್ ಮೂಲಕ ಎಲ್ಲಾ ಗೊತ್ತಾಯಿತು.
ಪರಿಶೀಲನೆ ನಡೆಸಿದಾಗ, ಆ ವೀಡಿಯೋ ಹಾಕಿದ ಯುವಕನೇ ಕೋಳಿ ಅಂಕದಲ್ಲಿ ಸೋತು ಹಣ ಕಳೆದುಕೊಂಡಿದ್ದಾನೆಂಬುದು ಬಹಿರಂಗವಾಯಿತು. ಆತನೇ ಆಡಳಿತ ಪಕ್ಷದ ಸದಸ್ಯನಾಗಿದ್ದರಿಂದ ಈ ವಿಷಯಕ್ಕೆ ರಾಜಕೀಯ ಬಣ್ಣ ತಗುಲಿತು.
ಅಂತಿಮವಾಗಿ ಪೋಲೀಸರು ಕೋಳಿಯನ್ನೂ, ಅಂಕದ ಆಯೋಜಕರನ್ನೂ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು. ಕೋಳಿ ಅಂಕವನ್ನು ನಿಲ್ಲಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾದರು.
ಸಂಸ್ಕೃತಿಯ ಉತ್ಸವಗಳು ಅಗತ್ಯ, ಆದರೆ ಜೂಜಾಟಗಳು ತಪ್ಪು.
ಸಂಸ್ಕೃತಿಯನ್ನು ಕಾಪಾಡುವುದು ನಮ್ಮ ಕರ್ತವ್ಯ,
ಹಾಸ್ಯದ ಮಾತು ಏನೆಂದರೆ ಕೋಳಿ ಅಂಕ ನಿಲ್ಲಿಸಲು ಓಡಿಬಂದ ಕೆಲವು ಇಲಾಖಾ ಅಧಿಕಾರಿಗಳ ಮನೆಗಳಲ್ಲಿ ಅಲ್ಲಿಯ ನಾಟಿ ಕೋಳಿಯು ಬಣಲೆಯಲ್ಲಿ ಬೇಯುತ್ತಿತ್ತು .
ರಾಂ ಅಜೆಕಾರು ಕಾರ್ಕಳ
http://ramajekar.travel.blog/2025/10/14/daily-stories-13/ #ಮಂಗಳವಾರ #ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗದವರಿಗೆ ಉನ್ನತ ಸ್ಥಾನ ಭಾಗ್ಯ - ಮಂಗಳವಾರ ರಾಶಿ ಭವಿಷ್ಯ -ಜನವರಿ-9,2024 #ಶುಭ ಮಂಗಳವಾರ #ಶುಭ ಮಂಗಳವಾರ
