ಜಾತಿ ಗಣತಿಗೆ ಬಂದಾಗ ಎಲ್ಲ ಮಾಹಿತಿಗಳನ್ನೂ ಕೊಟ್ಟರೆ ರೇಷನ್ ಕಾರ್ಡ್, ಗೃಹಲಕ್ಷ್ಮಿ 2000 ರೂ.ಕಟ್ !; ಏನಿದು ಹೊಸ ವಿಷಯ..?
ರಾಜ್ಯ ಸರ್ಕಾರವು (State Congress Government) ಸದ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ. ಆದರೆ ಇದನ್ನ ಜಾತಿ ಗಣತಿ (Caste Census) ಎಂದೇ ಕರೆಯಲಾಗುತ್ತಿದೆ. ಜಾತಿ ಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇರೋದಿಲ್ಲ. ಹೀಗಾಗಿ ರಾಜ್ಯ ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಸಮೀಕ್ಷೆ ಹೆಸರಲ್ಲಿ ಜಾತಿ ಗಣತಿ ನಡೆಸುತ್ತಿದೆ ಎಂದು ಬಿಜೆಪಿಗರು ಆರೋಪ ಮಾಡುತ್ತಿದ್ದಾರೆ. ಇದೀಗ ವಿಪಕ್ಷ ನಾಯಕ ಆರ್.ಅಶೋಕ್ ಅವರು ಈ ಗಣತಿ ಬಗ್ಗೆ ಅಚ್ಚರಿಯ ವಿಷಯವೊಂದನ್ನ ಹೇಳಿದ್ದಾರೆ.
ಆರ್.ಅಶೋಕ್ ಹೇಳಿದ್ದೇನು?
ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸಿದ ಆರ್.ಅಶೋಕ್ ಅವರು ʼಗ್ಯಾರಂಟಿಗಳಿಂದಾಗಿ ಸರ್ಕಾರದ ಬಳಿ ಹಣ ಇಲ್ಲ. ಎರಡೂವರೆ ವರ್ಷಕ್ಕೇ ಸರ್ಕಾರ ನಡೆಸೋಕೆ ಆಗದ ಸ್ಥಿತಿ ಬಂದಿದೆ. ಎಲ್ಲ ನಿಗಮಗಳಿಗೂ ಹಣ ಕಟ್ ಮಾಡಿದ್ದಾರೆ. ಸುಮಾರು 1600 ಕೋಟಿ ರೂಪಾಯಿ ಕಟ್ ಮಾಡಿದ್ದಾರೆ. ಪ್ರವಾಹ ಪರಿಸ್ಥಿತಿ ಬಂದಿದೆ..ಆದರೆ ಅಲ್ಲಿನ ಜನರಿಗೆ ಕೊಡಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ಕೇಂದ್ರ ಸರ್ಕಾರಕ್ಕೆ ಮನವಿ ಮಾಡ್ತೇವೆ..ಕೋರ್ಟ್‌ಗೆ ಹೋಗ್ತೇವೆ ಎನ್ನುತ್ತಾರೆ. ಆದರೆ ಇಲ್ಲಿ ಹಣ ಇಲ್ಲದಂತೆ ಆಗಿದ್ದು, ಇವರ ಅಚಾತುರ್ಯದಿಂದ. ಆದರೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇವರಿಗೆ ಪ್ರವಾಹಕ್ಕೆ ಪರಿಹಾರ ಕೊಡಲು ದುಡ್ಡಿಲ್ಲ..ಆದರೆ ಜಾತಿ ಗಣತಿ ನಡೆಸೋಕೆ ಮಾತ್ರ 400 ಕೋಟಿ ರೂಪಾಯಿ ಹಣ ಇದೆʼ ಎಂದು ವ್ಯಂಗ್ಯವಾಡಿದ್ದಾರೆ.
ಕುತಂತ್ರ ಮಾಡ್ತಿದೆ ಸರ್ಕಾರ..!
ʼರಾಜ್ಯ ಸರ್ಕಾರ ಜಾತಿ ಗಣತಿ ನಡೆಸ್ತಿರೋದ್ರ ಹಿಂದೆ ಕುತಂತ್ರ ಇದೆ. ಗ್ಯಾರಂಟಿ ಹೆಸರಲ್ಲಿ ಕೊಡ್ತಿರೋ 2000 ರೂಪಾಯಿಗಳನ್ನ, ರೇಷನ್ ಕಾರ್ಡ್, ಸರ್ಕಾರದಿಂದ ಕೊಡುವ ಸಾಲಗಳನ್ನೆಲ್ಲ ಕಟ್ ಮಾಡಲು ಈ ಜಾತಿ ಗಣತಿಯನ್ನ ಸರ್ಕಾರ ನಡೆಸುತ್ತಿದೆ. ಇದು ಸಿಎಂ ಸಿದ್ದರಾಮಯ್ಯ ಮಾಡುತ್ತಿರುವ ಕುತಂತ್ರʼ ಎಂದು ಆರ್.ಅಶೋಕ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ʼಸಮೀಕ್ಷೆ, ಗಣತಿಗೆ ಮನೆಗೆ ಬರುವವರಿಗೆ ನಿಮ್ಮ ಬಗ್ಗೆ ಮಾಹಿತಿಯನ್ನ ಕೊಟ್ಟಿದ್ದೇ ಆದ್ರೆ ನಿಮ್ಮ ರೇಷನ್ ಕಾರ್ಡ್, ನಿಮಗೆ ಸಿಗುವಂಥ ಲೋನ್, ಬೆಳೆ ಪರಿಹಾರ, ಅವರೇ ಕೊಡುತ್ತಿರುವ 2000 ರೂಪಾಯಿಗಳೆಲ್ಲವನ್ನೂ ಕಡಿತಗೊಳಿಸುತ್ತಾರೆ. ಇದೀಗ ಗ್ಯಾರಂಟಿ ಯೋಜನೆಗಳಿಗೆ ಹಣ ಸಾಕಾಗುತ್ತಿಲ್ಲ. ಅದನ್ನ ಸರಿದೂಗಿಸಲು ಈ ಸಮೀಕ್ಷೆ ಮಾಡುತ್ತಿದ್ದಾರೆ. ಯಾರ ಬಳಿ ಸೌಕರ್ಯ ಇರುತ್ತದೆಯೋ, ಅವರಿಗೆ ಸೌಲಭ್ಯಗಳನ್ನ ಕಟ್ ಮಾಡುವ ಹುನ್ನಾರ ಸರ್ಕಾರದ್ದುʼ ಎಂದೂ ಆರ್.ಅಶೋಕ್ ತಿಳಿಸಿದ್ದಾರೆ. ʼನಿಮ್ಮ ಮಾಹಿತಿಯನ್ನ ನೀವೇ ಕೊಟ್ಟಿರ್ತೀರಿ..ಸೌಲಭ್ಯ ಯಾಕೆ ಕೊಡ್ತಿಲ್ಲ ಎಂದು ಪ್ರಶ್ನೆ ಮಾಡಿದರೆ, ನೀವೇ ಕೊಟ್ಟ ಮಾಹಿತಿಯನ್ನ ನಿಮಗೆ ತೋರಿಸ್ತಾರೆ. ಇದು ಸರ್ಕಾರಕ್ಕೆ ನೀವು ಕೊಡುವ ಅಫಿಡಿವಿಟ್ ಇದ್ದಂತೆʼ ಎಂದು ಅವರು ತಿಳಿಸಿದರು.
ʼಸಮೀಕ್ಷೆಗೆ ಬಂದಾಗ ಜನರು ನೋಡಿಕೊಂಡು ಮಾಹಿತಿ ಕೊಡಿ. ನನ್ನತ್ರ ಚೈನು ಇದೆ, ಉಂಗುರ ಇದೆ..ನನ್ನತ್ರ ಓಲೆ ಇದೆ ಎಂದು ಮಾಹಿತಿ ಕೊಟ್ಟರೆ, ಖಂಡಿತ ರೇಷನ್ ಕಾರ್ಡ್, 2000 ರೂಪಾಯಿ ಎಲ್ ತೆಗೆದುಹಾಕ್ತಾರೆ. ಸಮೀಕ್ಷೆಗೆ ಬಂದಾಗ ಮಾಹಿತಿ ಕೊಡಬೇಕು ಅನ್ಸಿದ್ರೆ ಕೊಡಿ..ಬಿಟ್ರೆ ಬಿಡಿ ಎಂದು ಈಗಾಗಲೇ ಹೈಕೋರ್ಟ್ ಹೇಳಿದೆ. ಇನ್ನು ಯಾವುದೇ ಕಾಲಂ ನಲ್ಲಿ ಇರುವ ಪ್ರಶ್ನೆಗೆ ನೀವು ಉತ್ತರ ಕೊಡಬಾರದು ಅನ್ನಿಸಿದ್ರೆ, ಕೊಡಬೇಡಿ. ನಾನೂ ಹಾಗೇ ಮಾಡ್ತೇನೆ..ನೀವೂ ಹಾಗೇ ಮಾಡಿʼ ಎಂದು ಆರ್.ಅಶೋಕ್ ಕಿವಿಮಾತು ಹೇಳಿದ್ದಾರೆ. #🚨ಯಜಮಾನಿಯರಿಗೆ ಬಿಗ್ ಶಾಕ್ : ಗೃಹಲಕ್ಷ್ಮಿಯರ 2000 ಹಣಕ್ಕೆ ಬ್ರೇಕ್ ❌
