ShareChat
click to see wallet page
ಮಂಗಳೂರು: ಕ್ಯಾಬ್ ಚಾಲಕನ ಟೆರರಿಸ್ಟ್ ಎಂದ ಮಲಯಾಳಂ ನಟ ಜಯಕೃಷ್ಣನ್ ಬಂಧನಸೆ.09ರಂದು ಮಂಗಳೂರಿಗೆ ಬಂದಿದ್ದ ಜಯಕೃಷ್ಣನ್, ಸಂತೋಷ್ ಅಬ್ರಾಹಂ, ವಿಮಲ್ ಊಬರ್ ಬುಕ್ ಮಾಡಿದ್ದರು. ಊಬರ್ ಕ್ಯಾಬ್ ಚಾಲಕ ಶಫೀಕ್ ಕಾರು ಬುಕ್ ಆಯಿತು. ಕರೆ ಮಾಡಿ ಎಲ್ಲಿಗೆ ಬರಬೇಕು ಎಂದು ಕೇಳಿದಾಗ, ಬೈದಿದ್ದರು. ಕುಟುಂಬದವರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದರು. ಇದರಿಂದ ಕುಪಿತಗೊಂಡ ಶಫೀಕ್ ದೂರು ದಾಖಲು ಮಾಡಿದ್ದರು. ಕೇರಳ ಚಿತ್ರರಂಗದ ಹಿರಿಯ ನಟ ಜಯಕೃಷ್ಣನ್ ಬಂಧನ ಆಗಿದೆ. ಮಂಗಳೂರಿನಲ್ಲಿ ಕ್ಯಾಬ್ ಚಾಲಕನಿಗೆ ಟೆರರಿಸ್ಟ್ ಎಂದು ನಿಂದಿಸಿದ ಆರೋಪ ಅವರ ಮೇಲೆ ಇದೆ. ಜಯಕೃಷ್ಣನ್ ಸೇರಿ ಮೂವರ ಮೇಲೆ ದೂರು ದಾಖಲು ಮಾಡಲಾಗಿತ್ತು. ಈಗ ಪೊಲೀಸರು ನಟನ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.ಸೆ.09ರಂದು ಮಂಗಳೂರಿಗೆ ಬಂದಿದ್ದ ಜಯಕೃಷ್ಣನ್, ಸಂತೋಷ್ ಅಬ್ರಾಹಂ, ವಿಮಲ್ ಊಬರ್ ಬುಕ್ ಮಾಡಿದ್ದರು. ಊಬರ್ ಕ್ಯಾಬ್ ಚಾಲಕ ಶಫೀಕ್ ಕಾರು ಬುಕ್ ಆಯಿತು. ಕರೆ ಮಾಡಿ ಎಲ್ಲಿಗೆ ಬರಬೇಕು ಎಂದು ಕೇಳಿದಾಗ, ಅವರು ಮೊದಲು ಹಿಂದಿಯಲ್ಲಿ ಮಾತನಾಡಿದ್ದರು. ಶಫೀಕ್ ಕನ್ನಡದಲ್ಲಿ ಮಾತನಾಡಿದಾಗ, ಮಲಯಾಳಂನಲ್ಲಿ ಮಾತನಾಡುವಂತೆ ಜಯಕೃಷ್ಣನ್ ಸೂಚಿಸಿದ್ದರು.ಕರೆ ಮಾಡಿದಾಗ ಅಪ್ಪ-ಅಮ್ಮನಿಗೆ ಬೈದಿದ್ದಾರೆ. ಮುಸ್ಲಿಂ ಟೆರರಿಸ್ಟ್ ಎಂದೆಲ್ಲ ಹೇಳಿದ್ದಾರೆ ಎಂಬುದು ರಫೀಕ್ ಆರೋಪ. ‘ಮುಸ್ಲಿಂ ತೀರ್ವವಾದಿ, ಟೆರರಿಸ್ಟ್ ಅಂತಾ ಅಪಹಾಸ್ಯ ಮಾಡಿದ್ದಾರೆ. ಅವರಿಗೆ ಕಾರು ಬೇಡ. ಕ್ಯಾಬ್​ನವರನ್ನು ಆಟ ಆಡಿಸೋಕೆ ಈ ರೀತಿ ಮಾಡಿದ್ದಾರೆ’ ಎಂದು ರಫೀಕ್ ದೂರಿದ್ದಾರೆ. ಅನೇಕ ಕ್ಯಾಬ್ ಚಾಲಕರಿಗೆ ಜಯಕೃಷ್ಣನ್ ಇದೇ ರೀತಿ ಆಟ ಆಡಿಸಿದ್ದಾರೆ ಎನ್ನಲಾಗಿದೆ. ಕ್ಯಾಬ್ ಬುಕ್ ಮಾಡಿದ ಬಳಿಕ ಕಾರು ಚಾಲಕ 500 ಮೀಟರ್ ದೂರದಲ್ಲಿರುವಾಗ ರೈಡ್​ನ ಕ್ಯಾನ್ಸಲ್ ಮಾಡುತ್ತಿದ್ದರು. ಇದನ್ನು ದಕ್ಷಿಣ ಕನ್ನಡ ಜಿಲ್ಲೆಯ ಆನ್ಲೈನ್ ಟ್ಯಾಕ್ಸಿ ಚಾಲಕರ ಸಂಘ ಮಾಡಿತ್ತು. ಈಗ ಜಯಕೃಷ್ಣನ್ ಅವರ ಬಂಧನ ಆಗಿದೆ.ಜಯಕೃಷ್ಣನ್ ಅವರು 1994ರಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈಗ ಅವರು ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಕಿರುತೆರೆಯಲ್ಲೂ ಆ್ಯಕ್ಟೀವ್ ಆಗಿದ್ದು, ಧಾರಾವಾಹಿಗಳಲ್ಲಿ ನಟಿಸಿದ್ದಾರೆ #❌ಕ್ಯಾಬ್ ಚಾಲಕನ ಮೇಲೆ ಖ್ಯಾತ ನಟನಿಂದ ದೌರ್ಜನ್ಯ : ಖ್ಯಾತ ನಟ ಅರೆಸ್ಟ್
❌ಕ್ಯಾಬ್ ಚಾಲಕನ ಮೇಲೆ ಖ್ಯಾತ ನಟನಿಂದ ದೌರ್ಜನ್ಯ : ಖ್ಯಾತ ನಟ ಅರೆಸ್ಟ್ - ShareChat

More like this