Anvay Dravid- ವಿನೂ ಮಂಕಡ್ ಟ್ರೋಫಿಯಲ್ಲಿ ಸೆಣಸಲಿರುವ ಕರ್ನಾಟಕ ತಂಡಕ್ಕೆ ರಾಹುಲ್ ದ್ರಾವಿಡ್ ಪುತ್ರನ ಸಾರಥ್ಯ!
Karnataka Team Announcement- ರಾಹುಲ್ ದ್ರಾವಿಡ್ ಅವರ ಇಬ್ಬರು ಮಕ್ಕಳು ಸಹ ಕ್ರಿಕೆಟ್ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಹಿರಿಯ ಪುತ್ರ ಸಮಿತ್ ಅವರು ಇತ್ತೀಚೆಗೆ ಭಾರತ ಅಂಡರ್ 19 ತಂಡಕ್ಕೆ ಆಯ್ಕೆ ಆಗಿದ್ದರು. ಇದೀಗ ಕಿರಿಯ ಪುತ್ರ ಅನ್ವಯ್ ಅವರು ವಿನೂ ಮಂಕಡ್ ಟ್ರೋಫಿಯಲ್ಲಿ ಕರ್ನಾಟಕ ತಂಡದ ಸಾರಥ್ಯ ವಹಿಸಲಿದ್ದಾರೆ. ಇನ್ನು ರಣಜಿ ತಂಡವನ್ನು ಸಹ ಪ್ರಕಟಿಸಲಾಗಿದ್ದು ಕರುಣಾ ನಾಯರ್ ಅವರು 3 ವರ್ಷಗಳ ಬಳಿಕ ತಂಡಕ್ಕೆ ಮರಲಿದ್ದಾರೆ.