#ಆಷಾಢ ನವರಾತ್ರಿ 🙏 #🙏ಶ್ರೀ ದುರ್ಗಾ ದೇವಿ🙏 #ಆಧ್ಯಾತ್ಮ
ನಾಳೆ ನವರಾತ್ರಿ ವಿಶೇಷ
ಘಟಸ್ಥಾಪನೆ, ಅಂಣೆ ಹಾಗೂ ಮಾಲಾ ಬಂಧನ
ನವರಾತ್ರಿಯಲ್ಲಿ ದೇವಿಯನ್ನು ಕಲಶದಲ್ಲಿ ಆವಾಹಿಸಿ ಪೂಜಿಸುವುದು ಪದ್ಧತಿ. ಇದಕ್ಕಾಗಿ ಮಣ್ಣಿನ ಅಥವಾ ತಾಮ್ರ/ಬೆಳ್ಳಿ ಯ ಕಲಶದಲ್ಲಿ ದೇವಿ ಆವಾಹನೆ ಮಾಡಲಾಗುತ್ತದೆ.
ಒಂದು ಪ್ರತ್ಯೇಕ ಪಾತ್ರೆಯಲ್ಲಿ ಹೊಲ ಗದ್ದೆಯಿಂದ ತಂದ ಮಣ್ಣು ತುಂಬಿಸಿ ಸಪ್ತ ಧಾನ್ಯ ಅಥವಾ ಬರಿ ಗೋಧಿ, ಭತ್ತ, ಜವೆಗೋಧಿ ಅಥವಾ ಬರಿ ಗೋಧಿ ಬಿತ್ತಲಾಗುತ್ತದೆ. ನೀರು ಚಿಮುಕಿಸಿ ಒಂಭತ್ತು ದಿನಗಳಲ್ಲಿ ಮೊಳಕೆ ಬರುವಂತೆ ನೋಡಿಕೊಳ್ಳಲಾಗುತ್ತದೆ. ದೇವಿ ಘಟವನ್ನು ಈ ಪಾತ್ರೆಯಲ್ಲಿ ಇರಿಸಲಾಗುತ್ತದೆ ಅಥವಾ ದೇವಿ ಘಟದ ಬಳಿ ಅಂಕುರಪಾತ್ರೆ ಇರಿಸಲಾಗುತ್ತದೆ. ಇದೇ ಅಂಕುರಾರ್ಪಣೆ ವಿಧಿ.
ನದಿ ಸರೋವರ ಬಾವಿ ಇತ್ಯಾದಿ ಜಲಮೂಲದಿಂದ ತಂದ ನೀರು ಕಲಶದಲ್ಲಿ ತುಂಬಿಸಿ, ಅರಿಶಿನ ಕೊಂಬು, ಅಡಿಕೆ ಬೆಟ್ಟ, ಕುಂಕುಮ, ಗಂಧ, ಪುಷ್ಪ, ಪಂಚರತ್ನ ಅಥವಾ ಮುತ್ತು-ಹವಳ, ಪಂಚಪಲ್ಲವ,ಗರಿಕೆ, ಅಕ್ಷತೆ, ಚಿನ್ನ ಅಥವಾ ಬೆಳ್ಳಿ ನಾಣ್ಯ ಪ್ರತ್ಯೇಕ ವೇದ-ಪುರಾಣ ಮಂತ್ರಗಳೊಂದಿಗೆ ಕಲಶದಲ್ಲಿ ಹಾಕಲಾಗುತ್ತದೆ. ಈ ಕಲಶದ ಮೇಲೆ ಅಕ್ಕಿ ತುಂಬಿದ ಪಾತ್ರೆ ಇರಿಸ ಅದರ ಮೇಲೆ ದುರ್ಗೆಯ ಚಿಕ್ಕ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ . ಕೆಲವರು ಪಾತ್ರೆಯ ಬದಲಾಗಿ ಅರಿಶಿನ ಲೇಪಿತ ತುಂಬಿದ ತೆಂಗಿನಕಾಯಿ ಇಡಲಾಗುತ್ತದೆ. ಕೆಲವರು ಪೂರ್ಣಪಾತ್ರೆ ಅಥವಾ ಪೂರ್ಣಫಲದ ಬದಲಾಗಿ ಬರಿ ಸುಗಂಧಿತ ಹೂಗಳ ಮಾಲಿಕೆ ಇರಿಸುತ್ತಾರೆ. ಈ ಕಲಶಕ್ಕೆ ವಸ್ತ್ರ ಸೂತ್ರ ಸುತ್ತಲಾಗುತ್ತದೆ.
ಕೆಲವು ಕುಟುಂಬಗಳಲ್ಲಿ ಈ ಕಲಶದ ತುದಿಗೆ ತಾಗುವಂತೆ ಮೇಲ್ಛಾವಣಿ ಅಥವಾ ಮಂಟಪದ ಮೇಲಿಂದ ಹೂಮಾಲೆಯನ್ನು ಕಟ್ಟಲಾಗುತ್ತದೆ. ಇನ್ನೂ ಕೆಲವರು ಮಾಲಿಕೆಗಳನ್ನು ಕಲಶಕ್ಕೆ ಕಟ್ಟುತ್ತಾರೆ. ಈ ವಿಧಿಯೇ ಮಾಲಾಬಂಧನ.
ಈಗ ಶ್ರೀದೇವಿಯನ್ನು ಕಲಶದಲ್ಲಿ ಆವಾಹನೆ ಮಾಡಲಾಗುತ್ತದೆ.
ಘಟಸ್ಥಾಪನೆಯ ವಿಧಿ ಪ್ರದೇಶದಿಂದ ಪ್ರದೇಶಕ್ಕೆ, ಕುಟುಂಬದಿಂದ ಕುಟುಂಬಕ್ಕೆ ಕುಲಾಚಾರ ರೀತ್ಯಾ ಬದಲಾಗುತ್ತದೆ.
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
