ShareChat
click to see wallet page
ನಮ್ಮ ದೇಶದ ಪ್ರಯಾಣಿಕ ವಿಮಾನಗಳ ಅಪಘಾತಗಳ ವಿವರ.. ಹಾಗೂ ಬೇರೆ ದೇಶದ ವಿಮಾನ ನಮ್ಮಲ್ಲಿ ಪತನವಾದ ವಿವರ..!! ವರ್ಷ:-1976 ಅಕ್ಟೋಬರ್ 12. ವಿಮಾನ:- Air India Flight 171 ದುರ್ಘಟನೆ ಸ್ಥಳ:- ಬಾಂಬೆ(ಈಗಿನ ಮುಂಬೈ)(ಮಹಾರಾಷ್ಟ್ರ) ಮರಣ ಹೊಂದಿದವರು:- 95 ಜನ. ದುರಂತಕ್ಕೆ ಕಾರಣ:- ದುಬೈನಿಂದ ಬಾಂಬೆಗೆ(ಮುಂಬೈಗೆ) ಬರುತ್ತಾ ಇದ್ದ ವಿಮಾನ ಇಂಜಿನ್ ಪೈಲೂರು ನಿಂದ ಅರೇಬಿಯನ್ ಸಮುದ್ರಕ್ಕೆ ಬಿದ್ದದ್ದು.. __________________________ ವರ್ಷ:-1978 ಜನವರಿ 1 ವಿಮಾನ :- ಏರ್ ಇಂಡಿಯಾ ಪ್ಲೈಟ್ 855(Boeing 747) ದುರ್ಘಟನೆ ಸ್ಥಳ :- ಮುಂಬೈ(ಮಹಾರಾಷ್ಟ್ರ) ಮರಣ ಹೊಂದಿದವರ ಸಂಖ್ಯೆ:- 213 ಜನ ದುರಂತಕ್ಕೆ ಕಾರಣ :- ಸಂತ ಕ್ರೂಜ್ ಏರ್ ಪೋರ್ಟ್ ( ಈಗಿನ ಛತ್ರಪತಿ ಶಿವಾಜಿ ಏರ್ ಪೋರ್ಟ್)ವಿಮಾನ ಟೇಕ್ ಆಫ್ ಆಗಿ ಕೆಲವೇ ಸಮಯದಲ್ಲಿ ಇನ್ಸ್ಟ್ರುಮೆಂಟಲ್ ಫೈಲ್ಯೂರ್ ಆಗಿ ಅರೇಬಿಯನ್ ಸೀ ಗೆ ಬಿದ್ದದ್ದು..!! _________________________ ವರ್ಷ:-1985 ಜೂನ್ 23 ವಿಮಾನ :- ಏರ್ ಇಂಡಿಯಾ ಪ್ಲೈಟ್ 182(Boeing 747) ದುರ್ಘಟನೆ ಸ್ಥಳ :- ಆಫ್ ಐರಿಷ್ ಕೋಸ್ಟ್ (ಐರ್ಲ್ಯಾಂಡ್).. ಮರಣ ಹೊಂದಿದವರ ಸಂಖ್ಯೆ:- 329 ಜನ ದುರಂತಕ್ಕೆ ಕಾರಣ :- 9/11 ಮೊದಲು ನಡೆದ ಅತಿ ದೊಡ್ಡ ವಿಮಾನ ಭಯೋತ್ಪಾದನಾ ಕೃತ್ಯ ಎನ್ನಲಾದ ಈ ಕೃತ್ಯ ಇದು.. ಮಾಂಟ್ರಿಯಲ್ ನಿಂದಾ ಲಂಡನ್ ಮೂಲಕ ದೆಹಲಿಗೆ ಪ್ರಯಾಣಿಸುತ್ತಾ ಇದ್ದ ವಿಮಾನವನ್ನ ಆಫ್ ಐರಿಷ್ ಕೋಸ್ಟ್ ಬಳಿ ಬಾ*ಬ್ ನಿಂದ ಸ್ಫೋ*ಸಿ ವಿಮಾನ ಪತನ ಮಾಡಲಾಗಿತ್ತು..!! _______________________ ವರ್ಷ:-1990 ಫೆಬ್ರವರಿ 14 ವಿಮಾನ :- ಏರ್ ಇಂಡಿಯಾ ಪ್ಲೈಟ್ 605(Airbus A 320) ದುರ್ಘಟನೆ ಸ್ಥಳ :- ಬೆಂಗಳೂರು(ಕರ್ನಾಟಕ) ಮರಣ ಹೊಂದಿದವರ ಸಂಖ್ಯೆ:- 92 ದುರಂತಕ್ಕೆ ಕಾರಣ :- HAL Airport ಲ್ಯಾಂಡಿಂಗ್ ನಲ್ಲಿ ರನ್ ವೇ ಶಾರ್ಟ್ ನಿಂದಾಗಿ ವಿಮಾನ ದುರಂತ ಸಂಭವಿಸಿದೆ.. ಪ್ರಯಾಣಿಕರು ಎಲ್ಲರೂ ಮೃತ ಪಟ್ಟಿದ್ದರು..!! _________________________ ವರ್ಷ:-1991ಆಗಸ್ಟ್ 16 ವಿಮಾನ :- ಏರ್ ಇಂಡಿಯಾ ಪ್ಲೈಟ್ IC 257(Boeing 737) ದುರ್ಘಟನೆ ಸ್ಥಳ :- ಇಂಫಾಲ್ (ಮಣಿಪುರ) ಮರಣ ಹೊಂದಿದವರ ಸಂಖ್ಯೆ:- 69(ಎಲ್ಲಾ ಪ್ರಯಾಣಿಕರು) ದುರಂತಕ್ಕೆ ಕಾರಣ :- ಆಗಿನ ಕಲ್ಕತ್ತಾ(ಕೊಲ್ಕತ್ತಾ) ನಿಂದ ಇಂಫಾಲ್ ಗೆ ಹೊರಟಿದ್ದ ವಿಮಾನ ಲ್ಯಾಂಡಿಂಗ್ ಮೊದಲು ಅನಾನುಕೂಲ ಹವಾಮಾನವಿದ್ದಾಗ ಲ್ಯಾಂಡ್ ಮಾಡಲು ಪ್ರಯತ್ನಿಸಿ ಬೆಟ್ಟಕ್ಕೆ ವಿಮಾನ ಡಿಕ್ಕಿಯಾಗಿ ದುರಂತ ಸಂಭವಿಸಿತ್ತು..!! ____________________________ ವರ್ಷ:-1993 ಏಪ್ರಿಲ್ 26 ವಿಮಾನ :- ಏರ್ ಇಂಡಿಯಾ ಪ್ಲೈಟ್ 491 257(Boeing 737) ದುರ್ಘಟನೆ ಸ್ಥಳ :- ಔರಂಗಾಬಾದ್(ಈಗಿನ ಛತ್ರಪತಿ ಶಿವಾಜಿನಗರ)(ಮಹಾರಾಷ್ಟ್ರ) ಮರಣ ಹೊಂದಿದವರ ಸಂಖ್ಯೆ:- 55(ಎಲ್ಲಾ ಪ್ರಯಾಣಿಕರು) ದುರಂತಕ್ಕೆ ಕಾರಣ :- ರನ್ ವೆ ಗೆ ಪ್ರವೇಶ ಮಾಡಿದ ಏರ್ಪೋರ್ಟ್ ಟ್ರಕ್ ಒಂದಕ್ಕೆ ಡಿಕ್ಕಿಯಾದ ವಿಮಾನ ಕ್ಕೆ,ಬೆಂಕಿ ಹಿಡಿದು ದುರಂತ ಸಂಭವಿಸಿತ್ತು.. ______________________________ ವರ್ಷ:-1996 ನವೆಂಬರ್ 12 ವಿಮಾನ :- ಸೌದಿ ಅರೇಬಿಯ ಏರ್ ಲೈನ್ ಹಾಗೂ ಕಜಾಕಸ್ತಾನ್ ಏರ್ಲೈನ್ಸ್.. ದುರ್ಘಟನೆ ಸ್ಥಳ :- ಚರ್ಕಿ ದಾದ್ರಿ (ಹರ್ಯಾಣ) ಮರಣ ಹೊಂದಿದವರ ಸಂಖ್ಯೆ:- 349(ಎಲ್ಲಾ ಪ್ರಯಾಣಿಕರು) ದುರಂತಕ್ಕೆ ಕಾರಣ :- ದೆಹಲಿಯಿಂದ ಹೊರಟಿದ್ದ ಸೌದಿ ಬೋಯಿಂಗ್ 747 ವಿಮಾನವು, ದೆಹಲಿಗೆ ಲ್ಯಾಂಡ್ ಆಗುತ್ತಾ ಇದ್ದ ಕಜಾಕಿಸ್ತಾನ್ ಏರ್ ಲೈನ್ ಗೆ ಡಿಕ್ಕಿಯಾಗಿ ದುರಂತ ಸಂಭವಿಸಿತ್ತು,ಇದಕ್ಕೆ ಅಲ್ಟಿಟ್ಟುಡ್ ಮಿಸ್ ಕಮ್ಯುನಿಕೇಶನ್ ಕಾರಣವಾಗಿತ್ತು, ಏವಿಯೇಷನ್ ಇತಿಹಾಸದಲ್ಲಿ ನಡೆದ ಅತ್ಯಂತ ಭಯಾನಕ ಆಕಾಶದಲ್ಲಿನ ಅಪಘಾತ ಎನ್ನಲಾಗಿದೆ..!! ___________________________ ವರ್ಷ:-1998 ಜೂಲೈ 17 ವಿಮಾನ :- ಆಲಿಯನ್ಸ್ ಏರ್ ಫ್ಲೈಟ್ 7412 ದುರ್ಘಟನೆ ಸ್ಥಳ :- ಪಾಟ್ನಾ(ಬಿಹಾರ) ಮರಣ ಹೊಂದಿದವರ ಸಂಖ್ಯೆ:- 60(ಎಲ್ಲಾ ಪ್ರಯಾಣಿಕರು) ದುರಂತಕ್ಕೆ ಕಾರಣ :- ಪಾಟ್ನಾ ನಲ್ಲಿ ಸುತ್ತುತ್ತಾ ಇದ್ದ ವಿಮಾನ ನಿಯಂತ್ರಣ ತಪ್ಪಿ ವಿಮಾನ ಸಿಬ್ಬಂದಿ ಸೇರಿ 55 ಜನ ಪ್ರಯಾಣಿಕರು ಇದ್ದ ವಿಮಾನ ಜನಜಂಗುಳಿ ಇದ್ದ ಜಾಗದ ಮೇಲೆ ಬಿದ್ದಾಗ 5 ಜನ ನಾಗರೀಕರು ಸೇರಿ ಒಟ್ಟು 60 ಜನ ಮರಣ ಹೊಂದಿದ್ದರು..! _____________________________ ವರ್ಷ:-2010 ಮೇ 22 ವಿಮಾನ :- ಏರ್ ಇಂಡಿಯಾ ಎಕ್ಸಪ್ರೆಸ್ IX 812 ದುರ್ಘಟನೆ ಸ್ಥಳ :- ಮಂಗಳೂರು(ಕರ್ನಾಟಕ) ಮರಣ ಹೊಂದಿದವರ ಸಂಖ್ಯೆ:- 158,(8 ಜನ ಬದುಕಿ ಉಳಿದ ಪ್ರಯಾಣಿಕರು) ದುರಂತಕ್ಕೆ ಕಾರಣ :- ಟೇಬಲ್ ಟಾಪ್ ರನ್ ವೇ ಆಗಿರುವ ನಿಲ್ದಾಣದಲ್ಲಿ ದುಬೈ ನಿಂದ ಬಂದ ವಿಮಾನ ಲ್ಯಾಂಡಿಂಗ್ ಆಗುವ ವೇಳೆ ರನ್ ವೆ ನಿಂದ ಮುಂದೆ ಹೋಗಿ ದೊಡ್ಡ ಪ್ರಪಾತಕ್ಕೆ ಬಿದ್ದು ಘಟನೆ ಸಂಭವಿಸಿತ್ತು..!! ಇದು ನಮ್ಮ ರಾಜ್ಯದಲ್ಲಿ ನಡೆದ ಒಂದು ಮರೆಯಲಾಗದ ಕಹಿ ಘಟನೆ..!! ______________________________ ವರ್ಷ:-2020 ಆಗಸ್ಟ್ 7 ವಿಮಾನ :- ಏರ್ ಇಂಡಿಯಾ ಎಕ್ಸಪ್ರೆಸ್ IX 1344(Boeing 737) ದುರ್ಘಟನೆ ಸ್ಥಳ :- Kozhikode (ಕೇರಳ) ಮರಣ ಹೊಂದಿದವರ ಸಂಖ್ಯೆ:- 21,(100 ಹೆಚ್ಚು ಜನ ಗಾಯಗೊಂಡು ಬದುಕಿ ಉಳಿದ ಪ್ರಯಾಣಿಕರು) ದುರಂತಕ್ಕೆ ಕಾರಣ :- ಇದೂ ಕೂಡ ಟೇಬಲ್ ಟಾಪ್ ರನ್ ವೆ ಆಗಿರುವ ನಿಲ್ದಾಣ,ಅಂದಿನ ದಿನ ಹೆಚ್ಚು ಮಳೆ ಇದ್ದದ್ದರಿಂದ ಲ್ಯಾಂಡ್ ಆಗುವ ವೇಳೆ ವಿಮಾನ ಜಾರಿ 30 ಅಡಿ ಕೊರಕಲಿನ ಕೆಳಗೆ ಬಿದ್ದು ಎರಡು ಭಾಗವಾಗಿತ್ತೂ, ಇಬ್ಬರು ಪೈಲಟ್ ಗಳು ಮರಣ ಹೊಂದಿದ್ದರು.. _____________________________ ವರ್ಷ:- 2025 ಜೂನ್ 12 ವಿಮಾನ:- ಏರ್ ಇಂಡಿಯಾ ಡ್ರೀಮ್ ಲೈನರ್ (ಬೋಯಿಂಗ್ 787) ದುರ್ಘಟನೆ ಸ್ಥಳ:- ಅಹಮದಾಬಾದ್ (ಗುಜರಾತ್) ಮರಣ ಹೊಂದಿದವರ ಸಂಖ್ಯೆ:- ಪ್ರಯಾಣಿಕರು ನಾಗರೀಕರು ಎಷ್ಟು ಎನ್ನುವ ಮಾಹಿತಿ ನಿರೀಕ್ಷಿಸಲಾಗುತ್ತಿದೆ (ಅಧಿಕೃತ ಮಾಹಿತಿ ಬಂದಿಲ್ಲ)ಇಲ್ಲಿಯವರೆಗೆ ಉಳಿದವರು ಒಬ್ಬರು ಎನ್ನಲಾಗುತ್ತಿದೆ!! ದುರಂತಕ್ಕೆ ಕಾರಣ :- ವಲ್ಲಭಬಾಯ್ ಪಟೇಲ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಇಂಜಿನ್ ಫೇಲ್ಯೂರ್ ( ಸ್ಪಷ್ಟ ಮಾಹಿತಿ ಬಂದಿಲ್ಲ)ನಿಂದ ಮೆಡಿಕಲ್ ಹಾಸ್ಟೆಲ್ ಮೇಲೆ ಪತನವಾಗಿದೆ..!! 242(12 ಕ್ರೂ ಮೆಂಬರ್) ನತದೃಷ್ಟ ಪ್ರಯಾಣಿಕರು ಮಧ್ಯಾನ್ಹ ಅಹಮದಾಬಾದ್ ನಿಂದಾ ಲಂಡನ್ ನ ಗ್ಯಾಟ್ವಿಕ್ ಏರ್ ಪೋರ್ಟ್ನತ್ತ ಪ್ರಯಾಣ ಬೆಳೆಸಿದ್ದರು.. ಹಾನಿಯಾದ ಕಟ್ಟಡ ನಲ್ಲಿ ಇದ್ದವರ ಬಗ್ಗೆ ಇನ್ನಷ್ಟೇ ಸಂಪೂರ್ಣ ಮಾಹಿತಿ ಬರಬೇಕು..!! #😥 ಭಾವನಾತ್ಮಕ ಘಟನೆಗಳು #😔Miss You #✈️ ವಿಮಾನ ದುರಂತ🛬
😥 ಭಾವನಾತ್ಮಕ ಘಟನೆಗಳು - JNDIAT AP JNDIAT AP - ShareChat

More like this