ShareChat
click to see wallet page
#ಆಷಾಢ ನವರಾತ್ರಿ 🙏 #🙏ಶ್ರೀ ದುರ್ಗಾ ದೇವಿ🙏 ಶ್ರೀನವರಾತ್ರಿ ಸಂಕಲ್ಪ ಮತ್ತು ಅಖಂಡ ದೀಪಸ್ಥಾಪನವಿಧಿ.*. ಶ್ರೀನವರಾತ್ರಿ ಉತ್ಸವವನ್ನು ಆಶ್ವೀನ ಶುಕ್ಲ ಪ್ರತಿಪದೆಯ ದಿನ ಸಂಕಲ್ಪ ಪೂರ್ವಕವಾಗಿ ಪ್ರಾರಂಭಿಸಬೇಕು . ಅಚಮನ ಪ್ರಾಣಾಯಾಮ ಸಂಕಲ್ಪ - ಶುಭೆ ಶೋಭನೆ ಮಹೂರ್ತೆ - ಏವಂಗುಣವಿಶೆಷಣವಿಶಿಷ್ಟಯಾಂ ಆಶ್ವೀನ ಪ್ರತಿಪತ್ ಪುಣ್ಯತಿಥೌ ಶ್ರೀಭಾರತಿರಮಣಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀವೆಂಕಟೇಶ ಫ್ರೇರಣಯಾ ತತ್ಪ್ರೀತ್ಯರ್ಥಂ ಶ್ರೀ -ಭೂ -ದುರ್ಗಾ ಬ್ರಹ್ಮಾ ,ಪ್ರಾಣ ,ಸರಸ್ವತಿ , ಭಾರತೀ ಶೇಷ ಗರುಡಾದಿ ಸಹಿತಸ್ಯ ಶ್ರೀನಿವಾಸಸ್ಅದ್ಯ ಪ್ರಾತರಾರಭ್ಯ ಆಗಮಿ ದಶಮಿ ಪರ್ಯಂತಂ (ತ್ರಿರಾತ್ರೋತ್ಸವ ,ಪಂಚರಾತ್ರೋತ್ಸವ ,ಸಪ್ತ ರಾತ್ರೋತ್ಸವ) ನವರಾತ್ರೋತ್ಸವಾಖ್ಯಂ ಕರ್ಮಕರಿಷ್ಯಮಾಣಃ ಘೃತದೀಪಸಂಯೋಜನಂ ,(ಅಖಂಡದೀಪ ಸ್ಥಾಪನಂ) ತೈಲದೀಪ ಸಂಯೋಜನಂ ,ಪ್ರತಿದಿನಂ ಮಧ್ಯಾಹ್ನೇ ಮಹಾಪೂಜಾಂ ,ಸಾಯಾಹ್ನೇ ಸಚ್ಛಾಸ್ತ್ರಶ್ರವಣಂ ,ಶ್ರೀನಿವಾಸಕಲ್ಯಾಣ ಪಾರಯಣಂ ಚ ಕರಿಷ್ಯೇ | ಘಟಸ್ಥಾಪನಂ ಚ ಕರಿಷ್ಯೇ | ಎಂದು ಸಂಕಲ್ಪಮಾಡಿ ಮಂತ್ರಾಕ್ಷತೆ ನೀರು ಬಿಡುವುದು . ಘಟಸ್ಥಾಪನ ಸಂಪ್ರದಾಯವಿದ್ದವರು ಆಕಲಶೇಷುಧಾವತಿ , ಗೃಹವೈಪ್ರತಿಷ್ಠಾ ಸೂಕ್ತಂ ಮುಂತಾದ ಕಲಶಸ್ಥಾಪನ ಮತ್ತು ಪ್ರಾಣಪ್ರತಿಷ್ಠಾಪನ ಮಂತ್ರಗಳಿಂದ ಘಟಸ್ಥಾಪನೆಮಾಡಿ ಕುಲದೇವರನ್ನು ಸ್ಥಾಪಿಸಿ ನವರಾತ್ರಿ ಯಲ್ಲಿ ಪ್ರತಿನಿತ್ಯ ಷೋಡಶೋಪಚಾರದಿಂದ ಪೂಜಿಸಿ ನೈವೇದ್ಯ ಮಹಾನಿರಾಜನಾದಿಗಳನ್ನು ಮಾಡಬೇಕು. ದೀಪಸ್ಥಂಭಪೂಜಾ ಸ್ಥಂಭಾಗ್ರೇ ಸಪ್ತವಿಂಶತಿ ಕೃತ್ತಿಕಾನಕ್ಷತ್ರದೇವತಾಭ್ಯೋನಮಃ | ನಾಲೇ.ವಾಸುಕಿ ದೇವತಾಯೈನಮಃ |ಪಾದೇ ಚಂದ್ರಾರ್ಕಭ್ಯಾಂ ನಮಃ | ಎಂದು ದೀಪಸ್ಥಂಭವನ್ನು ಪೂಜಿಸಿ.ಮಂತ್ರಾಕ್ಷತೆ ಹಾಕಿ ದೀಪಸ್ಥಂಭಕ್ಕೆ ಶಾವಂತಿಕೆ ಹೂವಿನ ಹಾರವನ್ನು ಸುತ್ತಿ ಒಂದು ಎಣ್ಣೆ ಯ ದೀಪ ಇನ್ನೋಂದು ತುಪ್ಪದ ದೀಪವನ್ನು ಅಗ್ನಿ ನಾಗ್ನಿಃ ಸಮಿಧ್ಯತೆ ಎಂಬ ಮಂತ್ರದಿಂದ ಹಚ್ಚಬೇಕು ಈದೀಪಗಳನ್ನು ನಂದದಂತೆ ನೋಡಿ ಕೂಳ್ಳಬೇಕು .ಇದನ್ನೇ ಅಖಂಡದೀಪವೆನ್ನಲಾಗಿದೆ . ಅಖಂಡ ದೀಪಕಂ ದೇವ್ಯಾಃ ಪ್ರೀತಯೇ ನವರಾತ್ರಕಂ | ಉಜ್ವಲಯೇದ್ ಅಹೋರಾತ್ರಮೆಕಚಿತ್ತೋ ಧೃತವೃತಃ ।। ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಆಷಾಢ ನವರಾತ್ರಿ 🙏 - ShareChat

More like this