ನಮ್ಮ‌ ಧಾರವಾಡ:: ಧಾರವಾಡ ಬಹುಮಹಡಿ ಕಟ್ಟಡ ದುರಂತಕ್ಕೆ‌ ಸಂಬಂಧಿಸಿದಂತೆ ಆರ್ಕಿಟೆಕ್ಟ್ ಇಂಜಿನಿಯರ್ ವಿವೇಕ್ ಪವಾರ್ ಲೈಸೆನ್ಸ್ ರದ್ದು.
ಧಾರವಾಡದ ಕಟ್ಟಡ ಕುಸಿತ - ಎಂ . ಎಚ್ಡಿ ಎಂಸಿ / 60 / 05 / ಪ್ರಕಟಣೆ / 18 - 19 ಅಧೀಕ್ಷಕ ಇಂಜಿನೀಯರ್ ಕಚೇರಿ , ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ , ಹುಬ್ಬಳ್ಳಿ , ದಿನಾಂಕ : 20 / 03 / 2019 ಸಾರ್ವಜನಿಕ ಪ್ರಕಟಣೆ ಧಾರವಾಡ ತಾಲ್ಲೂಕು , ಸೈದಾಪೂರ ( ಎ ) ಗ್ರಾಮದ ರಿ . ಸ . ನಂ . 01 ನಿವೇಶನ ಸಂಖ್ಯೆ : 11ಎ , 1ಬಿ , 11 , 11ಡಿ ಹಾಗೂ 11ಇ ನೇದ್ದರಲ್ಲಿ ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಟ್ಟಡವು ಕುಸಿದು , ದುರ್ಘಟನೆ ಸಂಭವಿಸಿ , ಜೀವಹಾನಿ ಉಂಟಾಗಿರುತ್ತದೆ . ಪ್ರಾಥಮಿಕವಾಗಿ ಪರಿಶೀಲಿಸಲಾಗಿ ಮೇಲ್ನೋಟಕ್ಕೆ ಸದರ ಕಟ್ಟಡದ ಉಸ್ತುವಾರಿಯನ್ನು ಸರ್ಮಪಕವಾಗಿ ನಿರ್ವಹಿಸದೇ ಇರುವುದು ಕಾರಣವಾಗಿರುವುದಾಗಿ ಕಂಡುಬಂದಿರುತ್ತದೆ . ಸದರ ಕಟ್ಟಡಗಳಿಗೆ ಆರ್ಕಿಟೆಕ್ಟ್ ಶ್ರೀ ವಿವೇಕ ಎಲ್ . ಪವಾರ , ಬಿ . ಆರ್ಕ , ಮನೆ . ನಂ . 94 , ವಿಜಯನಗರ , ಹುಬ್ಬಳ್ಳಿ , ಮೋಬೈಲ್ ನಂ . 9845253299 ಇವರು ಇರುತ್ತಾರೆ . ಆರ್ಕಿಟೆಕ್ಟ್ ಶ್ರೀ ವಿವೇಕ ಎಲ್ , ಪವಾರ , ಬಿ . ಆರ್ಕ , ಇವರ ಉಸ್ತುವಾರಿಯಲ್ಲಿ ಯು ಬಿ ಹಿಲ್ ಪ್ರದೇಶದಲ್ಲಿ ನಿರ್ಮಾಣ ಮಾಡಿದ ವಸತಿ ಅಪಾರ್ಟಮೆಂಟ್ ಸಹ ಸರ್ಮಪಕವಾಗಿ ನಿರ್ವಹಿಸದೇ ಇರುವುದು ಕಂಡುಬಂದಿದ್ದರಿಂದ ಸದರಿ ಅಪಾರ್ಟಮೆಂಟ್‌ಗೆ ನೀಡಿದ ಕಟ್ಟಡ ಪರವಾನಿಗೆಯನ್ನು ಕೆ . ಎಂ . ಸಿ ಕಾಯ್ದೆಯನ್ವಯ ಉಪನಿರ್ದೇಶಕರು ನಗರ ಯೋಜನೆ . ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಧಾರವಾಡ ಇವರು ರದ್ದುಪಡಿಸಿದ್ದು , ಸದರಿ ಆರ್ಕಿಟೆಕ್ಷರವರಿಗೆ ಪಾಲಿಕೆಯಿಂದ ನೀಡಿದ ಲೈಸನ್ಸ್ ರದ್ದುಪಡಿಸಿ ಇವರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಉಪನಿರ್ದೇಶಕರು ನಗರ ಯೋಜನೆ , ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಧಾರವಾಡ ಇವರ ಪತ್ರ ಸಂಖ್ಯೆ ; ಹುಧಾಮಪಾ / 51 / 11 / ನ . ಯೋ / ಕೆ . ಪ / 2018 - 19 / 468 ದಿನಾಂಕ : 22 / 03 / 2019 ರನ್ವಯ ಕೋರಿರುತ್ತಾರೆ . ಮೇಲ್ಕಾಣಿಸಿದ ಅಂಶಗಳ ಹಿನ್ನಲೆಯಲ್ಲಿ ಶ್ರೀ ವಿವೇಕ ಎಲ್ , ಪವಾರ , ಬಿ . ಆರ್ಕ , ಇವರಿಗೆ ಈ ಕಚೇರಿಯಿಂದ ಸನ್ 2015 - 20ನೇ ಸಾಲಿನ ಅವಧಿಗೆ ನೀಡಲಾದ “ ಆರ್ಕಿಟೆಕ್ಸ್ ” ಲೈಸನ್ಸ್ ನಂ . ಎಚ್ಡಿಎಂಸಿ / 60 / 05 / 600 / 2016 - 17 ದಿನಾಂಕ : 22 / 11 / 2016 ನೇದ್ದನ್ನು ರದ್ದು ಪಡಿಸುವುದು ಸೂಕ್ತವೆಂದು ಪರಿಗಣಿಸಿ , ದಿನಾಂಕ : 20 / 03 / 2019 ರಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ . ಸದರಿಯವರನ್ನು ರದ್ದುಪಡಿಸಲಾಗಿದೆ . ಆದ್ದರಿಂದ ಇನ್ನೂಮುಂದೆ ಸಾರ್ವಜನಿಕರು ಸದರಿಯವರೊಂದಿಗೆ ಕಟ್ಟಡ ಪರವಾನಿಗೆ ವಿಷಯದ ಕುರಿತಂತೆ ಹಾಗೂ ನಿರ್ಮಾಣ ಮಾಡಲು ವಿನ್ಯಾಸ ಅನುಮೋದನೆ ಹಾಗೂ ಇನ್ನಿತರ ಯಾವದೇ ರೀತಿಯ ತಾಂತ್ರಿಕ ವ್ಯವಹಾರಗಳನ್ನು ಮಾಡಬಾರದೆಂದು ಈ ಮೂಲಕ ಸಾರ್ವಜನಿಕರ ಒಳಿತಿಗಾಗಿ ಪ್ರಕಟಿಸಲಾಗಿದೆ . ಮುಂದುವರೆದು ಹುಬ್ಬಳ್ಳಿ - ಧಾರವಾಡ ಅವಳಿನಗರ ವ್ಯಾಪ್ತಿಯಲ್ಲಿ ಸದರಿ ಆರ್ಕಿಟೆಕ್ಸ್ ರವರಾದ ಶ್ರೀ ವಿವೇಕ ಎಲ್ , ಪವಾರ , ಬಿ . ಆರ್ಕ , ಮನೆ . ನಂ . 94 , ವಿಜಯನಗರ , ಹುಬ್ಬಳ್ಳಿ , ಮೋಬೈಲ್ ನಂ . 9845253299 ಇವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿರುವ ಹಾಗೂ ಮಾಡಲಾಗುತ್ತಿರುವ ಯಾವುದಾದರೂ ಕಟ್ಟಡಗಳಲ್ಲಿ ಲೋಪದೋಷಗಳು ಕಂಡುಬಂದಿದ್ದಲ್ಲಿ , ಕಟ್ಟಡಗಳು ದುಸ್ಟಿಯಲ್ಲಿದ್ದಲ್ಲಿ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸುವ ಸಲುವಾಗಿ ಅಕ್ಕ ಪಕ್ಕದ ಮನೆ ಮಾಲಿಕರುಗಳು ಅಥವಾ ಸಾರ್ವಜನಿಕರುಗಳು ಮತ್ತು ಕಟ್ಟಡದ ಮಾಲಿಕರುಗಳು ಆಕ್ಷೇಪಣೆಗಳು ಏನಾದರು ಇದ್ದಲ್ಲಿ ತುರ್ತಾಗಿ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿಗಳಿಗೆ ಹಾಗೂ ನಗರಯೋಜನಾ ಶಾಖೆಯ ಗಮನಕ್ಕೆ ತರಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ . ಅಧೀಕ್ಷಕ ಜ434 ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ , ಹುಬ್ಬಳ್ಳಿ - ShareChat
23.4k ವೀಕ್ಷಿಸಿದ್ದಾರೆ
10 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post