20 ಸಾವಿರ ರೂ.ಒಳಗೆ ಲಭ್ಯ ಇರುವ ಬೆಸ್ಟ್ ಸ್ಮಾರ್ಟ್‌ಫೋನ್‌ಗಳಿವು,ಸಾಮಾನ್ಯ ಬಳಕೆಗೆ ಉತ್ತಮ!
ನೀವು ಹೊಸ ಫೋನ್ ಖರೀದಿ ಮಾಡಲು ಮುಂದಾಗಿದ್ದರೆ ಅದರಲ್ಲೂ ಇಪ್ಪತ್ತು ಸಾವಿರದ ಒಳಗೆ ಬೆಸ್ಟ್ ಫೋನ್ ಹುಡುಕುತ್ತಿದ್ದಾರೆ ನಾವು ಇಲ್ಲಿ ಕೆಲವುಫೋನ್‌ಗಳನ್ನು ಲಿಸ್ಟ್‌ಮಾಡಿದ್ದೇವೆ. ಈ ಫೋನ್‌ಗಳು ಅತ್ಯುತ್ತಮ ಕ್ಯಾಮೆರಾ ಫೀಚರ್ಸ್ ಹಾಗೂ ಪ್ರಬಲ ಪ್ರೊಸೆಸರ್ ಆಯ್ಕೆ ಪಡೆದಿವೆ.
1.ಮೋಟೋ G67 ಪವರ್ (Moto G67 Power):
ಈ ಫೋನ್ ಸ್ನ್ಯಾಪ್‌ಡ್ರಾಗನ್ 7s ಜನ್ ಪ್ರೊಸೆಸರ್ ಬಲದೊಂದಿಗೆ 28 GB RAM, 50 MP + 8 MP ರಿಯರ್ ಕ್ಯಾಮೆರಾ32 MP ಮುಂಭಾಗದ ಕ್ಯಾಮೆರಾ7000 mAh ಸಾಮರ್ಥ್ಯದ ಬ್ಯಾಟರಿ ಹಾಗೂ 30W ಟರ್ಬೊ ಪವರ್ ಚಾರ್ಜಿಂಗ್ ನೊಂದಿಗೆ 6.7 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದಿದೆ.
2.ಒಪ್ಪೋ ಕೆ13 5G (Oppo K13 5G):
ಈ ಫೋನ್ ಸ್ನ್ಯಾಪ್‌ಡ್ರಾಗನ್ 6 ಜನ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, 48 GB RAM ಹೊಂದಿದೆ. ಇದರ ಜೊತೆಗೆ 50 MP + 2 MP ಹಿಂಬದಿಯ ಕ್ಯಾಮೆರಾ16 MP ಮುಂಭಾಗದ ಕ್ಯಾಮೆರಾ ಆಯ್ಕೆ ಪಡೆದಿದ್ದು, 7000 mAh ಹಾಗೂ 80 ಡಬ್ಲ್ಯೂ ಸೂಪರ್ ವೂಕ್ ಚಾರ್ಜಿಂಗ್ ಬೆಂಬಲ ಪಡೆದಿದೆ.
3.ಮೋಟೋ G96 5G (Moto G96 5G):
ಈ ಫೋನ್ ಅನ್ನು 16 ಜುಲೈ, 2025 ರಲ್ಲಿ ಲಾಂಚ್ ಮಾಡಲಾಯಿತು. ಸ್ನಾಪ್‌ಡ್ರಾಗನ್ 7s ಜನ್ ಪ್ರೊಸೆಸರ್‌ನಲ್ಲಿ ರನ್ ಆಗಲಿದ್ದು, 28 GB RAM, 50 MP + 8 MP ಹಿಂಬದಿಯ ಕ್ಯಾಮೆರಾ, 32 MP ಮುಂಭಾಗದ ಕ್ಯಾಮೆರಾದೊಂದಿಗೆ 5500 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಫೋನ್ P-OLED ಡಿಸ್‌ಪ್ಲೇ ಹೊಂದಿದೆ.
4.ವಿವೋ ಟಿ4ಎಕ್ಸ್ (Vivo T4X):
ಮೀಡಿಯಾಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಬಲ ಪಡೆದಿರುವ ಈ ಫೋನ್ 6 GB RAM ಹಾಗೂ 50 MP + 2 MP ಹಿಂಬದಿಯ ಕ್ಯಾಮೆರಾ8 MP ಮುಂಭಾಗದ ಕ್ಯಾಮೆರಾ 6500 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ. ಇದರ ಜೊತೆಗೆ 6.72 ಇಂಚಿನ ಫುಲ್ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದಿದೆ.
5.ರಿಯಲ್‌ಮಿ P4 (Realme P4):
ಮೀಡಿಯಾಟೆಕ್ ಡೈಮೆನ್ಸಿಟಿ 7400 ಅಲ್ಟ್ರಾ ಪ್ರೊಸೆಸರ್‌ನಲ್ಲಿ ಕೆಲಸ ಮಾಡುವ ಈ ಫೋನ್ 6 GB RAM, 50 MP + 8 MP ಹಿಂಬದಿಯ ಕ್ಯಾಮೆರಾ, 16 MP ಮುಂಭಾಗದ ಕ್ಯಾಮೆರಾ ಹಾಗೂ 7000 mAh ಸಾಮರ್ಥ್ಯ ಪಡೆದಿದೆ. ಹಾಗೆಯೇ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ.
6.ಮೊಟೊರೊಲಾ ಎಡ್ಜ್ 60 ಫ್ಯೂಷನ್ (Motorola Edge 60 Fusion):
ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7400 ಪ್ರೊಸೆಸರ್‌ನಲ್ಲಿ ಕಾಣಿಸಿಕೊಂಡಿದ್ದು, 8 GB RAM,
50 MP + 13 MP ಹಿಂಭಾಗದ ಕ್ಯಾಮೆರಾ, 32 MP ಮುಂಭಾಗದ ಕ್ಯಾಮೆರಾ ಆಯ್ಕೆ ಪಡೆದಿದೆ. ಇದರ ಜೊತೆಗೆ 5500 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು 68W ಟರ್ಬೊ ಪವರ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಈ ಫೋನ್ P-OLED ಡಿಸ್‌ಪ್ಲೇ ಹೊಂದಿದೆ.
#LATEST #TECHNOLOGY #BESTSMARTPHONES #UNDER20K #STRONGPROCESSORS #BESTCAMERAFEATURES


