ShareChat
click to see wallet page
search
#🙏ಶನೇಶ್ವರ ಪಾವಗಡದ ಶನೇಶ್ವರ ದೇವಾಲಯ ನವಗ್ರಹಗಳಲ್ಲಿ ಶನಿ ಅತ್ಯಂತ ಪ್ರಬಲ. ಶನಿಯನ್ನು ಮಹಾತ್ಮ, ಎಂದು ಕರೆಯುತ್ತಾರೆ ಶನೀಶ್ವರ ಎಂದು ಕರೆಯುವ ಪರಿಪಾಠವಿದೆ. ಜನ ಸಾಮಾನ್ಯರಿಗೆ ಶನಿ ದೇವರ ಬಗ್ಗೆ ಎಲ್ಲಿಲ್ಲದ ಭಯ. ಈ ಭಯ ಶನೀಶ್ವರನ ಬಗ್ಗೆ ಭಕ್ತಿ ಬೆಳೆಯಲು ಕಾರಣವಾಗಿದೆ. ‘ಶನಿ ನಿಮ್ಮ ಹೆಗಲೇರಿದ್ದಾನೆ... ಪಾವಗಡಕ್ಕೆ ಹೋಗಿ ಆ ಮಹಾತ್ಮನಿಗೆ ಪೂಜೆ ಸಲ್ಲಿಸಿ ಅವನ ಕೃಪೆಗೆ ಪಾತ್ರರಾಗಿ’ ಎಂದು ಜ್ಯೋತಿಷಿಗಳು ಸಲಹೆ ಕೊಡುತ್ತಾರೆ. ‘ಎಲ್ಲ ಅನಿಷ್ಟಗಳಿಗೂ ಶನೀಶ್ವರನೇ ಕಾರಣ’ ಎಂಬ ಮಾತು ಜನ ಮಾನಸದಲ್ಲಿದೆ. ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ಶನೀಶ್ವರನ ದೇವಸ್ಥಾನಗಳಿದ್ದರೂ ತುಮಕೂರು ಜಿಲ್ಲೆಯ ಪಾವಗಡ ಪ್ರಮುಖ ಶನಿ ದೇವರ ಕ್ಷೇತ್ರ. 1955ರಲ್ಲಿ ಆಂಧ್ರಪ್ರದೇಶದ ಕಲ್ಯಾಣದುರ್ಗ ಬಳಿಯ ಶ್ರೀಧರಘಟ್ಟದ ಅವಧೂತರಾದ ಶ್ರೀಧರಸ್ವಾಮಿಗಳು ಪಾವಗಡದಲ್ಲಿ ಶನೀಶ್ವರನನ್ನು ಸ್ಥಾಪಿಸಿದರು. ಪಾವಗಡದಲ್ಲಿ ಶನಿಮಹಾತ್ಮೆ ಪೌರಾಣಿಕ ನಾಟಕ ಪ್ರದರ್ಶನವೇ ಈ ದೇವಸ್ಥಾನ ಆರಂಭಕ್ಕೆ ಪ್ರೇರಣೆ. ಐದು ದಶಕ ಕಳೆಯುವಷ್ಟರಲ್ಲಿ ಪಾವಗಡದ ಶನೀಶ್ವರ ಸನ್ನಿಧಿಯ ಪ್ರಭಾವ ರಾಜ್ಯದ ಉದ್ದಗಲ ದಾಟಿ ಹೊರ ರಾಜ್ಯಗಳಿಗೂ ವಿಸ್ತರಿಸಿತು. ಶನಿ ದೋಷ ನಿವಾರಣೆ ಮತ್ತು ಇಷ್ಟಾರ್ಥ ಸಿದ್ಧಿಗಾಗಿ ಪಾವಗಡಕ್ಕೆ ಹೋಗಿ ಶನಿ ದೇವರನ್ನು ಆರಾಧಿಸುವ ಪರಿಪಾಠ ಆರಂಭವಾಯಿತು. ಜನ ಸಾಮಾನ್ಯರು, ರಾಜಕಾರಣಿಗಳು, ಸಿನಿಮಾ ತಾರೆಯರು, ಉದ್ಯಮಿಗಳು... ಹೀಗೆ ಸಮಾಜದ ಎಲ್ಲ ವರ್ಗಗಳ ಜನರೂ ಶನೀಶ್ವರನ ಕೃಪೆಗಾಗಿ ಪಾವಗಡಕ್ಕೆ ಬರುತ್ತಾರೆ. ಪಾವಗಡದ ಮತ್ತೊಂದು ಆಕರ್ಷಣೆ ವಿಶಿಷ್ಟ ಶಕ್ತಿದೇವತೆ ಸೀತಲಾದೇವಿ ಮತ್ತು ಸೀತಲಾ ಯಂತ್ರ. ಕಲ್ಲಿನಲ್ಲಿ ಕೆತ್ತಿರುವ ಸೀತಲಾ ಯಂತ್ರ ಉತ್ತರ ಭಾರತದ ಪುರಿಯ ಜಗನ್ನಾಥ ಸನ್ನಿಧಿಯಲ್ಲಿದೆ. ದಕ್ಷಿಣ ಭಾರತದಲ್ಲಿ ಅದು ಪಾವಗಡದ ಶನಿದೇವರ ಸನ್ನಿಧಿಯಲ್ಲಿದೆ. ಪಾವಗಡ ಮರಾಠರ ಮುರಾರಿ ರಾಯನ ಆಳ್ವಿಕೆಗೆ ಒಳಪಟ್ಟಿತ್ತು. ಈ ಬೆಟ್ಟ ಪ್ರದೇಶದ ಊರಿಗೆ ಮರಾಠರಿಂದಲೇ ಪಾವಗಡ ಎಂಬ ಹೆಸರು ಬಂದಿದೆ. ಇತಿಹಾಸ ಪ್ರಸಿದ್ಧ ಏಳು ಸುತ್ತಿನ ಕೋಟೆಯನ್ನು ಪಾಳೇಗಾರ ಬಾಲಪ್ಪ ನಾಯಕರು ಕಟ್ಟಿಸಿದರು. ಆನಂತರದಲ್ಲಿ ಹೈದರಾಲಿ ಕಾಲದಲ್ಲಿ ಕೋಟೆ ಪುನರುಜ್ಜೀವನಗೊಂಡಿತು ಎನ್ನಲಾಗಿದೆ. ಪಾವಗಡಕ್ಕೆ ಪಾವನ ಗಡ, ಪಾಮಕೊಂಡ ಎಂಬ ಹೆಸರುಗಳಿದ್ದವು. ಶನೀಶ್ವರ ದೇವಸ್ಥಾನದಲ್ಲಿ ಸತ್ಯನಾರಾಯಣ, ದತ್ತಾತ್ರೇಯ, ರಾಜರಾಜೇಶ್ವರಿ ದೇವತೆಗಳ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ನಿತ್ಯ ಬೆಳಿಗ್ಗೆ 5.30ರಿಂದ ರಾತ್ರಿ 8ಗಂಟೆ ವರೆಗೆ ನಿರಂತರ ಪೂಜೆ ಇರುತ್ತದೆ. ಶನಿ ತ್ರಯೋದಶಿ ದಿನ ದೇವರಿಗೆ ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ಫೆಬ್ರುವರಿ ತಿಂಗಳ ಹುಣ್ಣಿಮೆಯಂದು ಸ್ವಾಮಿಯ ಬ್ರಹ್ಮರಥೋತ್ಸವ ನಡೆಯುತ್ತದೆ. ಶ್ರಾವಣ ಮಾಸದ ಎಲ್ಲ ಶನಿವಾರಗಳಂದು ಇಲ್ಲಿ ನಡೆಯುವ ವಿಶೇಷ ಪೂಜೆಗೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. #kannadaviral #kannadareels #kannadamotivationalwords #kannadamotivation #kannadaquotesandsayings #kannadaquotes #facebookreelsviral #trendingreels #trendingreelsvideo #ᴋᴀɴɴᴀᴅᴀsᴏɴɢs #🙏 ಸ್ವಾಮಿ ಶ್ರೀ ಶನೇಶ್ವರ #☀️ಸೂರ್ಯ ಪುತ್ರ ಶ್ರೀ ಶನೇಶ್ವರ ಸ್ವಾಮಿ☀️ #🙏🙏 ಜೈ ಶ್ರೀ ಶನಿ ದೇವ 🙏🙏 #🙏ಶನಿ ದೇವಾಯ ನಮಃ
🙏ಶನೇಶ್ವರ - ಶನಿಮಹಾತ್ಮ ದೇವಾಲಯ ಪಾವಗಡದ ವರ್ಷದಷ್ಟು ಪುರಾತನ ಚರಿತ್ರೆ ಇದೆ 500 Conpavasaurattiaru WW Facebool ಏಫ್ಯಾ ದ ಮೊದಲ ಶನಿಮಹಾತ್ಮ ದೇವಾಲಯ ಶನಿಮಹಾತ್ಮ ದೇವಾಲಯ ಪಾವಗಡದ ವರ್ಷದಷ್ಟು ಪುರಾತನ ಚರಿತ್ರೆ ಇದೆ 500 Conpavasaurattiaru WW Facebool ಏಫ್ಯಾ ದ ಮೊದಲ ಶನಿಮಹಾತ್ಮ ದೇವಾಲಯ - ShareChat