ShareChat
click to see wallet page
search
#😮ದಲಿತ ಯುವಕನ ಪ್ರೀತಿಸಿ ಮದುವೆ; ಗರ್ಭಿಣಿ ಮಗಳನ್ನೇ ಕೊಚ್ಚಿ ಕೊಂ* ತಂದೆ😱 ಹುಬ್ಬಳ್ಳಿ: ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಮಗಳನ್ನು ಸ್ವಂತ ತಂದೆ ಹಾಗೂ ಆತನ ಕುಟುಂಬದ ಸದಸ್ಯರು ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದ ಹೃದಯ ವಿದ್ರಾವಕ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರ ಗ್ರಾಮದಲ್ಲಿ ರವಿವಾರ ನಡೆದಿದೆ.ಇನಾಂ ವೀರಾಪೂರ ಗ್ರಾಮದ ಮಾನ್ಯಾ ಎಂಬ ಯುವತಿ ಅದೇ ಗ್ರಾಮದ ವಿವೇಕಾನಂದ ದೊಡ್ಡಮನಿ ಎಂಬ ದಲಿತ ಯುವಕನನ್ನು ಕುಟುಂಬದ ವಿರೋಧದ ನಡುವೆಯೂ ಮೇ ತಿಂಗಳಲ್ಲಿ ಮದುವೆಯಾಗಿದ್ದರು.ಮದುವೆಯ ನಂತರ ಪ್ರಾಣಭಯದಿಂದ ಹಾವೇರಿಯಲ್ಲಿ ನೆಲೆಸಿದ್ದ ದಂಪತಿ, ಇತ್ತೀಚೆಗೆ ತಮ್ಮ ಸ್ವಗ್ರಾಮಕ್ಕೆ ಮರಳಿ ವೈವಾಹಿಕ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಭಾನುವಾರ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವಿವೇಕಾನಂದ ಹಾಗೂ ಅವರ ತಂದೆಯ ಮೇಲೆ ಮಾನ್ಯಾಳ ಕುಟುಂಬದವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಯುವಕನ ಮನೆಗೆ ತೆರಳಿ ಮಾನ್ಯಾ, ವಿವೇಕಾನಂದನ ತಾಯಿ ರೇಣವ್ವ ಸೇರಿದಂತೆ ಕುಟುಂಬದ ಇತರ ಸದಸ್ಯರ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ. ಕುಟುಂಬದ ಮರ್ಯಾದೆ ಹಾಳು ಮಾಡಿದ್ದಾಳೆ ಎಂಬ ಕಾರಣಕ್ಕೆ ಆರು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯಾಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದ್ದು, ತಲೆ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಅವರನ್ನು ಚಿಕಿತ್ಸೆಗಾಗಿ ನಗರದ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾನ್ಯಾ ಹಾಗೂ ಅವರ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಲ್ಲೆಯಲ್ಲಿ ಗಾಯಗೊಂಡಿರುವ ವಿವೇಕಾನಂದನ ತಾಯಿ ರೇಣವ್ವ ಹಾಗೂ ದೊಡ್ಡಪ್ಪ ಅವರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲 #😞 ಮೂಡ್ ಆಫ್ ಸ್ಟೇಟಸ್
😮ದಲಿತ ಯುವಕನ ಪ್ರೀತಿಸಿ ಮದುವೆ; ಗರ್ಭಿಣಿ ಮಗಳನ್ನೇ ಕೊಚ್ಚಿ ಕೊಂ* ತಂದೆ😱 - ದಲಿತಯುವಕನ ಪ್ರೀತಿಸಿ ಮದುವೆ; ಗರ್ಭಿಣಿಮಗಳನ್ನೇ aradhya@eation   ಕೊಚ್ಚಿ ಕೊಂ* ತಂದೆ( యుచేశనన్ను ಪ್ರೀತಿಸಿ ದಲಿತ ಹುಬ್ಬಳ್ಳ: ಮದುವೆಯಾದ   ಕಾರಣಕ್ಕೆ   ಮಗಳನ್ನು   ಸ್ವಂತ ತಂದೆ   ಹಾಗೂ   ಆತನ   ಕುಟುಂಬದ   ಸದಸ್ಯರು ಮಾರಕಾಸ್ತ್ರಗಳಿಂದ ಸೇರಿ నెడిసి జల్లి ಕೊಲೆಗೈದ ಹೃದಯ ವಿದ್ರಾವಕ ಘಟನೆ ಹುಬ್ಬಳ್ಳಿ ವೀರಾಪೂರ   ಗ್ರಾಮದಲ್ಲಿ ತಾಲೂಕಿನ ఇనాం ನಡೆದಿದೆ ಇನಾಂ ರವಿವಾರ ವೀರಾಪೂರ మన్యా ಗ್ರಾಮದ ಯುವತಿ అది ಎಂಬ ಗ್ರಾಮದ   ವಿವೇಕಾನಂದ   ದೊಡ್ಡಮನಿ ಎಂಬ ಯುವಕನನ್ನು  ಕುಟುಂಬದ ವಿರೋಧದ ದಲಿತ ತಿಂಗಳಲ್ಲಿ ನಡುವೆಯೂ 3e ಮದುವೆಯಾಗಿದ್ದರು. ದಲಿತಯುವಕನ ಪ್ರೀತಿಸಿ ಮದುವೆ; ಗರ್ಭಿಣಿಮಗಳನ್ನೇ aradhya@eation   ಕೊಚ್ಚಿ ಕೊಂ* ತಂದೆ( యుచేశనన్ను ಪ್ರೀತಿಸಿ ದಲಿತ ಹುಬ್ಬಳ್ಳ: ಮದುವೆಯಾದ   ಕಾರಣಕ್ಕೆ   ಮಗಳನ್ನು   ಸ್ವಂತ ತಂದೆ   ಹಾಗೂ   ಆತನ   ಕುಟುಂಬದ   ಸದಸ್ಯರು ಮಾರಕಾಸ್ತ್ರಗಳಿಂದ ಸೇರಿ నెడిసి జల్లి ಕೊಲೆಗೈದ ಹೃದಯ ವಿದ್ರಾವಕ ಘಟನೆ ಹುಬ್ಬಳ್ಳಿ ವೀರಾಪೂರ   ಗ್ರಾಮದಲ್ಲಿ ತಾಲೂಕಿನ ఇనాం ನಡೆದಿದೆ ಇನಾಂ ರವಿವಾರ ವೀರಾಪೂರ మన్యా ಗ್ರಾಮದ ಯುವತಿ అది ಎಂಬ ಗ್ರಾಮದ   ವಿವೇಕಾನಂದ   ದೊಡ್ಡಮನಿ ಎಂಬ ಯುವಕನನ್ನು  ಕುಟುಂಬದ ವಿರೋಧದ ದಲಿತ ತಿಂಗಳಲ್ಲಿ ನಡುವೆಯೂ 3e ಮದುವೆಯಾಗಿದ್ದರು. - ShareChat