#💔ಲಿಫ್ಟ್‌ನಲ್ಲಿ ಸಿಲುಕಿ KGF ನಿರ್ದೇಶಕನ ಪುತ್ರ ದುರ್ಮರಣ😭 ಹೈದರಾಬಾದ್ : ಕೆಜಿಎಫ್ ಚಾಪ್ಟರ್ 2 ಸಹ-ನಿರ್ದೇಶಕ ಕೀರ್ತನ್ ನಾಡಗೌಡ ಅವರ ನಾಲ್ಕು ವರ್ಷದ ಪುತ್ರ ಲಿಫ್ಟ್‌ನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.ಕೀರ್ತನ್ ಗೌಡ ಮೂರು ದಿನಗಳ ಹಿಂದೆ ಹೈದರಾಬಾದ್ ಗೆ ಕುಟುಂಬ ಸಮೇತ ತೆರಳಿದ್ದರು. ಈ ವೇಳೆ ನಾಲ್ಕು ವರ್ಷದ ಪುತ್ರ ಸೋನಾರ್ಷ್ ನನ್ನು ಹೈದರಾಬಾದ್ ಗೆ ಕರೆದೊಯ್ದಿದ್ದರು.ಆಕಸ್ಮಿಕವಾಗಿ ಲಿಫ್ಟ್ ನಲ್ಲಿ ಸಿಲುಕಿದ ಸೋನಾರ್ಷ್ ಸಾವನ್ನಪ್ಪಿದ್ದಾನೆ.
ಕೀರ್ತನ್ ಮತ್ತು ಅವರ ಪತ್ನಿ ಸಮೃದ್ಧಿ ಪಟೇಲ್ ಅವರ ಪುತ್ರ ಚಿರಂಜೀವಿ ಸೋನಾರ್ಷ್ ಕೆ. ನಾಡಗೌಡ ಲಿಫ್ಟ್ ನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಪುತ್ರನನ್ನು ಕಳೆದುಕೊಂಡ ನಿರ್ದೇಶಕರ ಕುಟುಂಬ ಕಣ್ಣೀರಿಟ್ಟಿದ್ದಾರೆ.
#😞 ಮೂಡ್ ಆಫ್ ಸ್ಟೇಟಸ್ #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰

