ShareChat
click to see wallet page
search
#ಕನ್ನಡ_ಕವನಗಳು #ಶೀರ್ಷಿಕೆ:#ಒಲವೆ_ನಿನಗಾಗಿ_ಕಾದಿರುವೆ ****************************** ಹಣೆಯಲಿ ಬರೆಯದ ನಿನ್ನಾ ಹೆಸರನ್ನು ಹೃದಯದಲ್ಲಿ ಬರೆದು ನಿನಗಾಗಿ ಕಾದಿರುವೆ ಕನಸಲೂ ಮನಸಲೂ ನಿನ್ನಾ ನಗುವನ್ನು ಪದೆ ಪದೆ ನೆ‌ನೆಯುತ್ತಾ ಮನಸಾರೆ ಸಂತೋಷ ಪಡುತ್ತಿರುವೆ ನಿನ್ನಾ ಜೊತೆಯಲ್ಲಿನಾ ನೆನಪುಗಳ ರಾಶಿಯಲ್ಲಿ ಮುಳುಗೊಗಿ ನನ್ನನೆ ನಾ ಮರೆತೊಗಿರುವೆ ನಿನ್ನೊಲವ ಮಾತ್ರ ಭಯಸುತಲಿ ಹೃದಯದಲ್ಲಿ ನಿನ್ನ‌ನೆ ಆರಾಧಿಸುತ್ತಾ ನಿನಗಾಗಿ ಕಾದಿರುವೆ ಜನುಮ ಜನುಮಕೂ ನನ್ನ ಜೀವವೆ ನೀನೆಂದು ಉಸಿರಲಿ ಬೆರೆಸಿರುವೆ ಬೆರೆಸಿಕೊಂಡಿರುವೆ ಒಲವೆ ನನಗೆ ತಿಳಿಯದೆ ನಿನ್ನಾ ಮುದ್ದು ಮನಸ್ಸನು ಮನಸಾರೆ ಪ್ರೇಮಿಸಿ ನಿನ್ನನೆ ಪ್ರೀತಿಸುತ್ತಿರುವೆ ಚೆಲುವೆ ನೀ ನೀಡಿದಾ ಮುತ್ತುಗಳ ಪ್ರಣಯದ ದಾರದಲ್ಲಿ ಪೋಣಿಸಿ ಮುತ್ತಿನ ಹಾರವ ಹಾಕುವೆ ಮನಸಾರೆ ಕನಿಕರಿಸಬಾರದೆ ಒಲವೆ ಮನಸಿನಾಳದಲ್ಲಿ ನಿನ್ನದೆ ಸುಂದರ ಕನಸುಗಳಿಗೆ ನಿನ್ನಾ ಒಲವಿಂದಾನೆ ಜೀವ ಬಂದು ನನಸಾಗಿ ಹೊರಬರಲು ತವಕಿಸುತಿವೆ ನೀ ನನ್ನ ಜೊತೆಯಾಗಿ ಒಲವನ್ನು ಕನಿಕರಿಸಿ ನಾ ಕಂಡಾ ಕನಸುಗಳ ನನಸಾಗಿಸಬಾರದೆ ಚೆಲುವೆ ನಿನ್ನಾ ಪ್ರೀತಿಗೆ ಅನುಕ್ಷಣವು ಕಾಯುತ್ತಿರುವ ಜೀವ ನನ್ನದು ಚೂರಾದರು ಮನಸಿನಲ್ಲಿರುವಾ ಪ್ರೀತಿಯ ಹೇಳಬಾರದೆ ಚೆಲುವೆ ನಿನ್ನ ಮೇಲಿನ ಪ್ರೀತಿ ನನ್ನ ಜೀವಂತವಾಗಿ ಕುರುಡು ಮಾಡಿದೆ ಮತ್ತೆ ನಾ ಪ್ರೀತಿಯ ಕಣ್ ತೆರೆಯಬೇಕೆಂದರೆ ಅದು ನಿನ್ನ ಪ್ರೀತಿಯಿಂದಲೆ ಸಾದ್ಯ ಮನವೆ ... ನಿನ್ನಾ ನಗಿಸಲು ನಾ ವಿಧೂಷಕನು ಅಲ್ಲಾ ನಿನ್ನಾ ಬಣ್ಣಿಸಲು ಕವಿಯೂ ನಾನಲ್ಲಾ ನಿನ್ನಾ ಮನಸಾರೆ ಪ್ರೀತಿಸೊದು ಬಿಟ್ಟರೆ ನನಗೇನೂ ಗೊತ್ತಿಲ್ಲಾ #📜ಕವಿತೆ #📝ನನ್ನ ಕವಿತೆಗಳು #😍 ನನ್ನ ಸ್ಟೇಟಸ್ #🖋️ ನನ್ನ ಬರಹ #💓ಮನದಾಳದ ಮಾತು
📜ಕವಿತೆ - ShareChat