ShareChat
click to see wallet page
search
#ಮಹಾಭಾರತ #ಪಾಂಡವರು 👌💐🥰 #ಮಹಾಭಾರತ ದ ದ್ರೌಪದಿ ಅಗ್ನಿಜಾತೆಯಾದ ದ್ರೌಪತಿಯ ದೈವೀ ಕಥೆ:- ಮಹಾಭಾರತದಲ್ಲಿ ಪಂಚ ಪಾಂಡವರು ಹಿಂದಿನ ಜನ್ಮದಲ್ಲಿ ದೇವತೆಗಳು ಆಗಿದ್ದ ರು. ತುಂಬಾ ಅಹಂಕಾರ ಪಡುತ್ತಿದ್ದರು. ನಂತರ ಕೋಪ, ತಾಪ, ಶಾಪ ಗಳಿಗೆ ಗುರಿಯಾಗಿ, ಪಶ್ಚಾತಾಪಗೊಂಡ ಅವರು ಹಿಮವತ್ ಪರ್ವತದಲ್ಲಿ ಕಠಿಣ ತಪಸ್ಸು ಮಾಡಿ ವಿಮೋಚನೆ ಮಾಡಿಕೊಂಡು ಧರ್ಮಮಾರ್ಗದಲ್ಲಿ ನಡೆಯುವ ಸಲುವಾಗಿ ಪಾಂಡವರಾಗಿ ಜನ್ಮ ತಾಳಿದ್ದರು. ದ್ರೌಪತಿಯು ಹಿಂದಿನ ಜನ್ಮದಲ್ಲಿ ಕಾಡಿನಲ್ಲಿ ವಾಸಿಸುತ್ತಿದ್ದ ಬಡಬ್ರಾಹ್ಮಣನ ಮನೆಯಲ್ಲಿ ಹುಟ್ಟಿದ್ದಳು. ಒಳ್ಳೆಯ ಗುಣವಂತೆ, ರೂಪವಂತೆ ಆಗಿದ್ದರೂ, ಎಷ್ಟು ಕಾಲವಾದರೂ ಮದುವೆಯಾಗಲಿಲ್ಲ. ಆಗ ಅವಳು ಈಶ್ವರನನ್ನು ಕುರಿತು ಕಠಿಣ ತಪಸ್ಸು ಮಾಡಿದಳು. ಈಶ್ವರನು ಪ್ರತ್ಯಕ್ಷನಾದನು ಅವನನ್ನು ನೋಡಿ ಗಾಬರಿಗೊಳಗಾದಳು, ನಿನಗೆ ಏನು ಬರಬೇಕು ಎಂದು ಈಶ್ವರನು ಕೇಳಲು, ಗಂಡ ಬೇಕು, ಗಂಡ ಬೇಕು, ಅಂತ ಐದು ಸಲ ಹೇಳಿದಳು. ಶಿವನು ತಥಾಸ್ತು ಎಂದು ಹೇಳಿ, ಮುಂದಿನ ಜನ್ಮದಲ್ಲಿ ಒಬ್ಬೊಬ್ಬರಲ್ಲಿ ಒಂದೊಂದು ಗುಣವಿರುವ ಐದು ಜನ ಪತಿಯರನ್ನು ಪಡೆಯುವೆ ಎಂದು ವರ ಕೊಟ್ಟನು. ಇದನ್ನು ಕೇಳಿ ಗಾಬರಿಯಾಗಿ, ಪರಮೇಶ್ವರ ಹೀಗಾದರೆ ಜನಗಳು ನನ್ನ ಪಾತಿವ್ರತ್ಯವನ್ನು ಕುರಿತು ಮಾತನಾಡುತ್ತಾರೆ ಏನು ಮಾಡಲಿ ಎಂದಳು. ಆಗ ಶಿವನು ಐದು ಜನರು ಅಂದರೆ ವ್ಯಕ್ತಿಯಲ್ಲ. ಬೇರೆ ಬೇರೆ ದೇವತೆಗಳ ಅಂಶದಿಂದ ಬಂದಿರುತ್ತಾರೆ. ಆದ್ದರಿಂದ ಅವರೆಲ್ಲಾ ನಿನ್ನ ಪತಿ ಯಾಗುತ್ತಾರೆ. ಮತ್ತೆ ಶಿವನು ಇನ್ನೊಂದು ವರವನ್ನು ಕೊಡುತ್ತಾನೆ. ಐದು ಜನರ ಜೊತೆ ಮದುವೆಯಾದ ಮೇಲೆ ನೀನು ಮಂಗಳಸ್ನಾನ ಮಾಡಿದಾಗಲೆಲ್ಲ ಮರಳಿ ಕನ್ಯತ್ವವ ನ್ನು ಪಡೆಯುವೆ. ಈ ರೀತಿ, ಐದುಜನ ಪತಿಭಾಗ್ಯದ ಜೊತೆಗೆ, ಇನ್ನೊಂದು ವರವನ್ನು ದ್ರೌಪತಿಗೆ ಶಿವನು ಕೊಡುತ್ತಾನೆ. ಹೀಗಾಗಿ ದ್ರೌಪದಿಯು ತನ್ನ ಐದು ಜನರಲ್ಲಿ ಒಬ್ಬರಿಂದ ಮತ್ತೊಬ್ಬರು ಬಳಿ ಹೋಗುವಾಗ ಮಂಗಳ ಸ್ನಾನ ಮಾಡಿ ಆಯಾ ದೇವತೆಯನ್ನು ಆವಾಹನೆ ಮಾಡಿಕೊಂಡು ಹೋಗುತ್ತಿದ್ದಳು. ಹೀಗಾಗಿಯೇ ದ್ರುಪದನು ದ್ರೌಪತಿಯನ್ನು ಐದು ಜನ ಪಾಂಡವರಿಗೆ ಕೊಟ್ಟು ಸಂಭ್ರಮದಿಂದ ವಿವಾಹ ಮಾಡುತ್ತಾನೆ. ಆದರೆ ಒಂದೇ ದಿನವೇ ಐದು ಜನ ಪಾಂಡವರಿಗೂ ಕೊಟ್ಟು ಮದುವೆ ಮಾಡದೆ, ಧಾರ್ಮಿಕ ವಿಧಿ-ವಿಧಾನಗಳಂತೆ ಮೊದಲು ಧರ್ಮರಾಯ , ಎರಡನೇ ದಿನ ಭೀಮ, ಮೂರನೆಯ ದಿನ ಅರ್ಜುನ , ನಾಲ್ಕನೆ ದಿನ ನಕುಲ , ಐದನೆಯ ದಿನ ಸಹದೇವನಿಗೆ ಕೊಟ್ಟು ಅದ್ದೂರಿಯಾಗಿಯೇ ವಿವಾಹ ಮಾಡುತ್ತಾನೆ. ಈ ರೀತಿ ಮದುವೆ ಮಾಡಲು ಕಾರಣ ಆಯಾ ದಿನಗಳಲ್ಲಿ ಆಯಾ ದೇವತೆಗಳ ಅಂಶ ಅವರಲ್ಲಿ ಸೇರಿರುತ್ತದೆ. ದ್ರೌಪತಿ ಮದುವೆ ವ್ಯಕ್ತಿ ಜೊತೆ ಆಗಿರದೆ, ಆಯಾ ದೇವತೆಗಳ ಜೊತೆ ಮಾಡಬೇಕಿತ್ತು . ಇದೆಲ್ಲವೂ ವೇದವ್ಯಾಸರ ಆಣತಿಯಂತೆ ನಡೆಯಿತು. ಇದರಲ್ಲಿ ವೇದವ್ಯಾಸರ ದೂರದೃಷ್ಟಿಯ ಆಲೋಚನೆ ಇರುತ್ತದೆ. ಐದು ಜನ ಪಾಂಡವರು ಒಟ್ಟಾಗಿ ಇದ್ದರೆ ಮಾತ್ರ ಅಧರ್ಮವನ್ನು ನಾಶಮಾಡಬಹುದು. ಹಾಗೆಯೇ ದ್ರೌಪತಿಗಿರುವ ದೈವೀಶಕ್ತಿ ಇನ್ಯಾರಲ್ಲೂ ಇರಲು ಸಾಧ್ಯವಿಲ್ಲ. ಈ ರೀತಿ ವೇದವ್ಯಾಸರು ಶಕ್ತಿದೇವತೆ ದ್ರೌಪತಿಯನ್ನು ಪಂಚಪಾಂಡವರಿಗೆ ಕೊಟ್ಟು ಮದುವೆ ಮಾಡಿಸುವ ಮೂಲಕ ಧರ್ಮದ ಪರಂಪರೆ ಮುಂದುವರೆಸಿದರು. ಸ್ವಯಂವರದಲ್ಲಿ ಅರ್ಜುನನು ಸಭೆಯಲ್ಲಿ ಮೀನಿನ ಕಣ್ಣಿಗೆ ಬಾಣ ಹೊಡೆಯುವುದರ ಮೂಲಕ ದ್ರೌಪತಿಯನ್ನು ವರಿಸಿ ಮದುವೆ ಮಾಡಿಕೊಂಡು ಉಳಿದ ಸಹೋದರರ ಜೊತೆ ಮನೆಗೆ ಬಂದನು. ಒಳಗೆ ಕೆಲಸದಲ್ಲಿ ಮಗ್ನಳಾದ ಕುಂತಿ ಮಕ್ಕಳು 'ಹೆಣ್ಣು' ತಂದಿದ್ದೇವೆ ಎಂದು ಹೇಳಿದ್ದನ್ನು 'ಹಣ್ಣು' ಎಂದು ಕುಂತಿ ಕಿವಿಗೆ ಕೇಳಿಸಿ, ಐದು ಜನರು ಹಂಚಿಕೊಳ್ಳಿ ಎಂದಳು. ನಂತರ ಪಶ್ಚಾತಾಪ ಗೊಂಡು, ತನ್ನಿಂದ ಹೀಗಾಯಿತಲ್ಲ ಎಂದು ಕೊಂಡಿರುವಾಗ ಕೃಷ್ಣನು ಮುಂದೆ ಬಂದು, ಅತ್ತೆ ಇವೆಲ್ಲವೂ ವಿಧಿ ನಿಯಮದಂತೆ ನಡೆದಿದ್ದು. ನೀನು ನೆಪಮಾತ್ರ ಹಿಂದಿನ ಜನ್ಮದಲ್ಲಿ ದ್ರೌಪತಿಯು ಪರಮೇಶ್ವರನ ಪರಮ ಭಕ್ತೆಯಾಗಿದ್ದಳು. ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡು ಧರ್ಮ ಪಾಲಿಸುವ, ಹಾಗೂ ಶಕ್ತಿಶಾಲಿ, ಬಿಲ್ವಿದ್ಯೆ ಪರಿಣತ, ಸುಂದರ ಮತ್ತು ಧೈರ್ಯವಂತನಾದ ಪತಿಬೇಕು ಎಂದು ಶಿವನನ್ನು ಕೇಳಿದಳು. ಆಗ ಶಿವನು ಈ ತರಹ 5 ಗುಣಗಳಿರುವ ಒಬ್ಬನೇ ವ್ಯಕ್ತಿ ಇರುವುದಿಲ್ಲ. ಆದ್ದರಿಂದ ಒಬ್ಬೊಬ್ಬರಲ್ಲಿ ಒಂದೊಂದು ಗುಣವಿರುವ ಐದು ಜನ ಪತಿಯರು ನಿನಗೆ ದೊರೆಯುತ್ತಾರೆ ಎಂದು ಶಿವನು ವರ ಕೊಟ್ಟ ವಿಚಾರವನ್ನ ಕುಂತಿಗೆ ಹೇಳಿದನು. ದುರ್ಯೋಧನ ಮತ್ತು ಶಕುನಿಯ ಕುತಂತ್ರದಿಂದ ಪಗಡೆಯಾಟದಲಿ ಸೋತ ಪಾಂಡವರು ದ್ರೌಪದಿಯ ಸಹಿತ ವನವಾಸಕ್ಕೆ ಹೊರಟು, ನಡೆಯುತ್ತಿರುವಾಗ ಮಧ್ಯದಲ್ಲಿ ಮೈತ್ರೇಯ ಮುನಿಗಳು ಅವರಿಗೆ ಸಿಗುತ್ತಾರೆ.ಧರ್ಮರಾಜನು ಮುನಿಗಳಿಗೆ ನಮಸ್ಕರಿಸಿ, ಮಹರ್ಷಿಗಳೇ ಮುಂದೆ ನಮ್ಮ ಗತಿಯೇನು? ನಮ್ಮ ಆಹಾರದ ವ್ಯವಸ್ಥೆಗೆ ಏನು ಮಾಡೋಣ ಹೇಗೆ ನಡೆಯುತ್ತದೆ ಎಂದು ಕೇಳಿದಾಗ, ಮೈತ್ರೇಯರು, ಧರ್ಮರಾಯ ನೀನು ಯೋಚಿಸುವುದು ಬೇಡ ನಿನ್ನ ಪತ್ನಿ ದ್ರೌಪತಿ ಮಹಾಭಕ್ತಳಾಗಿದ್ದು, ಹಿಂದಿನ ಜನ್ಮದಲ್ಲಿ ಅನ್ನದಾನ ಮಾಡುತ್ತಾ, ಧರ್ಮಗಳನ್ನು ಶ್ರದ್ಧೆಯಿಂದ ಆಚರಿಸಿದಳು. ಅವಳು ಮಾಡಿದ ಪುಣ್ಯದಿಂದ, ಅವಳು ನಿಮ್ಮ ಜೊತೆ ಇದ್ದರೆ ಯಾವತ್ತಿಗೂ ನಿಮಗೆ ಊಟಕ್ಕೆ ತೊಂದರೆಯಾ ಗುವುದಿಲ್ಲ ಎಂದು ಧೈರ್ಯ ತುಂಬಿದರು. ಧೃತಿ, ಕ್ಷಮಾ, ದಮೋಸ್ತೇಯಂ, ಶೌಚಂ ಇಂದ್ರಿಯನಿಗ್ರಹ ! ಧೀರ್ವಿದ್ಯಾ ಸತ್ಯಮ ಕ್ರೋಧೋ ದಶಕಮ್ ಧರ್ಮಲಕ್ಷ್ಮಣಂ ಧೈರ್ಯ, ಕ್ಷಮಾಗುಣ ,ಮನಸ್ಸಿನ ಹಿಡಿತ, ಕಳ್ಳತನ ಮಾಡದಿರುವುದು,ಶುಚಿತ್ವ, ಇಂದ್ರಿಯಗಳ ನಿಯಂತ್ರಣ, ಬುದ್ಧಿ, ವಿದ್ಯೆ, ಸತ್ಯತೆ ಮತ್ತು ಕೋಪಿಸಿಕೊಳ್ಳದಿರುವು ದು ಈ ಹತ್ತು ಧರ್ಮದ ಲಕ್ಷಣಗಳು. ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಮಹಾಭಾರತ - ShareChat