“ಕೊಡಿರಿ, ಆಗ ನಿಮಗೂ ಕೊಡುವರು; ಜಡಿದು ಅಲ್ಲಾಡಿಸಿ ಹೊರಚೆಲ್ಲುವ ಹಾಗೆ ತುಂಬಾ ಅಳತೆಯನ್ನು ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು” ಅಂದನು.
ಲೂಕ 6:38
ಹೌದು ನಮ್ಮಲ್ಲಿ ಅನೇಕರಿಗೆ ಕೊಡುವುದು ಎಂದರೆ ಸ್ವಲ್ಪ ಕಷ್ಟದ ಕೆಲಸವೇ ಆಗಿರಬಹುದು, ಆದರೆ ಈ ಸಂದೇಶವನ್ನು ಓದಿದ ನಂತರ ನಿಮ್ಮಲ್ಲಿ ಒಂದು ಬದಲಾವಣೆ ಬರುತ್ತದೆ ಕೊನೆಯವರೆಗೂ ಓದಿ..
ಕೊಡುವುದು ಎಂದರೆ..
ಸಹಾಯ ಮಾಡುವುದು ಮಾತ್ರವಲ್ಲ, ನಮ್ಮ ಮಾತಿನಿಂದಾಗಲಿ ನಮ್ಮ ಕ್ರಿಯೆಗಳಿಂದಾಗಲಿ ನಮ್ಮ ನಡೆಯಿಂದಾಗಲಿ ನಮ್ಮ ನುಡಿಯಿಂದಾಗಲಿ ನಾವು ಮಾಡುವ ಎಲ್ಲಾ ಕೆಲಸಗಳಿಂದ ಸರಿಯಾದ ಅಳತೆಯಲ್ಲಿ ಕೊಡಬೇಕಾಗಿದೆ..
ನಮ್ಮಲ್ಲಿ ಅನೇಕರು, ತನ್ನ ಸಹೋದರರಿಗೆ ಆಗಿರಲಿ ತನ್ನ ಸ್ನೇಹಿತನಿಗೆ ಆಗಿರಲಿ ತನ್ನ ನೆರೆ ಹೊರೆಯವರಿಗೆ ಆಗಿರಲಿ, ನಾವು ಯಾವ ಅಳತೆಯಲ್ಲಿ ಕೊಡುತ್ತಿದ್ದೇವೆ ಎಂದು ನೋಡೋಣ...
ನಮ್ಮಲ್ಲಿ ಅನೇಕರು ಸಹಾಯವನ್ನು ಕೇಳುವಾಗ ನಮ್ಮಲ್ಲಿ ಸಹಾಯ ಮಾಡಲು ಸಾಧ್ಯವಿದ್ದರೂ ಸಹಾಯ ಮಾಡುವುದಿಲ್ಲ, ನಮ್ಮಲ್ಲಿ ಕೊಡಲು ಇದ್ದರೂ ಕೂಡ ಕೊಡಲು ಬಯಸುವುದಿಲ್ಲ..
ಈ ಲೋಕದಲ್ಲಿ ದೇವರು ಒಬ್ಬೊಬ್ಬರನ್ನು ಒಂದೊಂದು ರೀತಿಯಲ್ಲಿ ಸೃಷ್ಟಿಸಿರುತ್ತಾರೆ. ಆದರೆ ಎಲ್ಲವನ್ನು ದೇವರೇ ನಡೆಸುತ್ತಾರೆ ಆತನಿಗೆ ಕೊಡಲು ಗೊತ್ತಿರುತ್ತದೆ ಆದರಿಂದ ಕಸಿದು ಮತ್ತೊಬ್ಬನಿಗೆ ಕೊಡಲು ಗೊತ್ತಿರುತ್ತದೆ, ಇದ್ದವನಿಂದ ಕಸಿದು ಇಲ್ಲದವನಿಗೆ ಕೊಡಲು ಸಾಧ್ಯವಿದೆ..
ಆದರೆ ದೇವರ ವಾಕ್ಯ ಹೇಳುತ್ತದೆ "ನೀವು ಕಳೆದುಕೊಳ್ಳುವ ಅಳತೆಯಲ್ಲೇ ನಿಮಗೂ ಕೊಡಲಾಗುವುದು ಎಂದು" ನಾವು ಈ ವಾಕ್ಯವನ್ನು ಗಮನಿಸೋಣ ಹಾಗಾದರೆ ನಮಗೆ ಯಾವ ಅಳತೆಯಲ್ಲಿ ದೇವರು ಕೊಡುತ್ತಾರೆ ಈ ವಾಕ್ಯ ನಮ್ಮ ಜೀವಿತದಲ್ಲಿ ಅನೇಕ ಸಂದರ್ಭದಲ್ಲಿ ನೆರವೇರಿರಬಹುದು ಇನ್ನು ಮೇಲೆಯಾದರೂ ನಾವು ಬದಲಾಗೋಣ ಸರಿಯಾದ ಅಳತೆಯಲ್ಲಿ ಮಾತ್ರವಲ್ಲ ಅಳತೆಗೂ ಮೀರಿ ಕೊಡುವವರು ಆಗೋಣ..
ನಮ್ಮಲ್ಲಿ ಅನೇಕರು ಸ್ವಾರ್ಥಿಗಳಾಗಿ ತಮಗಾಗಿ ತಮ್ಮ ಕುಟುಂಬಕ್ಕಾಗಿ ಜೀವಿಸುತಿರುತ್ತಾರೆ. ಮತ್ತೊಬ್ಬರು ಸಹಾಯವನ್ನು ಕೇಳುವಾಗ ಅನೇಕ ಕಾರಣಗಳನ್ನು ಹೇಳುತ್ತಾರೆ.
ಮತ್ತು ಅನೇಕರು.. ಸ್ವಾರ್ಥಿಗಳಾಗಿ ಇರುವುದು ಮಾತ್ರವಲ್ಲದೆ ತನ್ನ ನೆರೆ ಹೊರೆಯವನ ಬಗ್ಗೆ, ತನ್ನ ಸ್ನೇಹಿತನ ಬಗ್ಗೆ, ತನ್ನ ಸಹೋದರನ ಬಗ್ಗೆ ಸುಳ್ಳು ತೀರ್ಪು ಕೊಡುತ್ತಿರಬಹುದು..
ನನ್ನ ಪ್ರೀತಿಯ ಸ್ನೇಹಿತರೆ! ಸಹೋದರ ಸಹೋದರಿಯರೇ!! ನೀವು ಸುಳ್ಳು ತೀರ್ಪು ಕೊಡುವಾಗ ನಿಮಗೂ ಸುಳ್ಳು ತೀರ್ಪು ಆಗುವುದು ನೀವು ಮತ್ತೊಬ್ಬರ ಬಗ್ಗೆ ನಿಮ್ಮ ಸ್ನೇಹಿತರ ಬಗ್ಗೆ ನಿಮ್ಮ ಸಹೋದರನ ಬಗ್ಗೆ ಸುಳ್ಳಾಗಿ ತಪ್ಪಾಗಿ ಹೇಳುವಾಗ ಅಥವಾ ಚಾಡಿ ಹೇಳುವಾಗ ನಿಮಗೂ ಕೂಡ ಅದೇ ರೀತಿಯಲ್ಲಿ ಅಳತೆಗು ಮೀರಿ ತೀರ್ಪು ಆಗುವುದು..
ಈ ಸಂದೇಶವನ್ನು ಓದಿದ ಅನೇಕರಿಗೆ ಇದರಲ್ಲಿ ಸತ್ಯ ನಿಮಗೆ ಮನವರಿಕೆ ಆಗಿರಬಹುದು.. ಇನ್ನು ಮೇಲೆಯಾದರೂ ನಾವು ಕೊಡುವಾಗ ಸರಿಯಾದ ಅಳತೆಯಲ್ಲಿ ಕೊಡೋಣ ತೀರ್ಪು ಕೊಡುವಾಗ ನೆರೆಯವನ ಬಗ್ಗೆ ಹೇಳುವಾಗ ಸರಿಯಾದ ರೀತಿಯಲ್ಲಿ ಹೇಳೋಣ..
ಆಗ ಪರಲೋಕದಲ್ಲಿರುವ ನಮ್ಮ ತಂದೆ ನಮ್ಮೆಲ್ಲರಿಗೂ ಸರಿಯಾದ ರೀತಿಯಲ್ಲಿ ಅಳತೆಗೂ ಮೀರಿ ಕೊಡುತ್ತಾನೆ, ತೀರ್ಪು ಕೊಡುವಾಗ ಆತನ ನ್ಯಾಯ ವಿಚಾರಣೆಯಲ್ಲಿ ಸರಿಯಾದ ನ್ಯಾಯ ಕೊಡುತ್ತಾನೆ..
ಈ ವಾಕ್ಯದ ಮೂಲಕ ದೇವರು ನಿಮ್ಮನ್ನು ಆಶೀರ್ವದಿಸಲಿ
ನೀವು ಆಶೀರ್ವದಿಸಲ್ಪಟ್ಟರೆ ಅನೇಕರಿಗೆ ಇದನ್ನು #ಶೇರ್ ಮಾಡಿ
#bible #stanypinto #karnatakachristasanghatane #bibleverse #biblestudy #biblequotes #bible #bibleverseoftheday #bible #KCSPRAYER #📚 ಬೈಬಲ್✝️ #😍 ನನ್ನ ಸ್ಟೇಟಸ್ #🙏 ಭಕ್ತಿ ವಿಡಿಯೋಗಳು 🌼


