https://www.hosakannada.com/news/a-versatile-talent-who-blossomed-in-the-lap-of-art-shravya-altaru/
#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #😎ಡಿ ಬಾಸ್ #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #📺 ಟಿವಿ ಸೀರಿಯಲ್ ಸ್ಟೇಟಸ್ 😍 #SCTV ಕನ್ನಡ

ಕಲಾಧರೆಯ ಮಡಿಲಲ್ಲಿ ಅರಳಿದ ಬಹುಮುಖ ಪ್ರತಿಭೆ: ಶ್ರಾವ್ಯ ಅಲ್ತಾರು
ಲೇಖನ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ ಸಂಸ್ಕೃತಿ ಮತ್ತು ಕಲೆಯ ನೆಲೆಬೀಡಾದ ನಮ್ಮ ಕರಾವಳಿ ತೀರದ ಮಣ್ಣಿನಲ್ಲಿ ಅದೆಷ್ಟೋ ಪ್ರತಿಭೆಗಳು ಮೌನವಾಗಿಯೇ ಸಾಧನೆಯ ಶಿಖರ ಏರುತ್ತಿವೆ. ಅಂತಹ ಸಾಲಿನಲ್ಲಿ ಭರವಸೆಯ ಕಿರಣವಾಗಿ ಮೂಡಿಬಂದವರು ಕುಮಾರಿ ಶ್ರಾವ್ಯ ಅಲ್ತಾರು. ಬ್ರಹ್ಮಾವರ ಸಮೀಪದ ಅಲ್ತಾರಿನ ಕೃಷ್ಣ ಹಾಗೂ ಶಶಿಕಲಾ ದಂಪತಿಗಳ ಸುಪುತ್ರಿಯಾದ ಶ್ರಾವ್ಯ, ಬಾಲ್ಯದಿಂದಲೇ ಕಲೆಯನ್ನೇ ಉಸಿರಾಗಿಸಿಕೊಂಡವರು. ನೃತ್ಯ ಮತ್ತು ಗಾಯನದ ಅಪೂರ್ವ ಸಂಗಮ ಶ್ರಾವ್ಯ ಅವರದ್ದು ಕೇವಲ ಒಂದು ಕಲೆಗೆ ಸೀಮಿತವಾದ ವ್ಯಕ್ತಿತ್ವವಲ್ಲ. ಇವರು ಎಷ್ಟು ಲಯಬದ್ಧವಾಗಿ ಹೆಜ್ಜೆ […]

