ShareChat
click to see wallet page
search
ತಾಂಬೂಲ ಕಾಣಿಕೆ ತಂದಿಹೆ ಮಂಜಾಂಬಿಕೆ ತಾಯಿ ಅರಸಿನ ಕುಂಕುಮ ಹೂವ ತಂದಿಹೆ ದೇವಿ ಮಹಾಮಾಯೆ ||ತಾಂಬೂಲ|| #🙏ನಮಸ್ಕಾರ #🙏 ಭಕ್ತಿ ವಿಡಿಯೋಗಳು 🌼 #ದೇವಿ #ದೇವರು #ನನ್ನ ದೇವರು ಶಬರಿಗಿರಿಯ ಮೇಲೆ ನೆಲೆಸಿಹ ಭುವನೇಶ್ವರಿ ತಾಯೆ ಮನದಲಿ ಅಯ್ಯನ ಸ್ಮರಣೆ ಮಾಡುತ ಕುಳಿತ ಸುಂದರಿಯೆ ||ಶಬರಿಗಿರಿಯ|| ಪಚ್ಚೆ, ಪಚ್ಚೆ ||ತಾಂಬೂಲ|| ಚಾಮುಂಡಿ ಎಂದರು ನಿನ್ನ ಮಹಿಷಾಪುರದಲ್ಲಿ ಮೂಕಾಂಬಿಕೆ ಎಂದು ಕರೆದರು ಕೋಲಾಪುರದಲ್ಲಿ ‌‌ ‌‌‌ ||ಚಾಮುಂಡಿ|| ಕಾಯುವೆ ವಿವಿಧ ರೂಪವ ತಳೆದು ಭಕ್ತರ ಕುಲವನ್ನು ಶ್ರೀಪದ ಪಂಕಜ ಧ್ಯಾನವ ಮಾಡಲು ತರುವೆ ಜಯವನ್ನು ನೀಗುವೆ ಈ ಭವದ ಭಯವನ್ನು ತರುವೆ ನಿಜ ನೆಮ್ಮದಿ ಶಾಂತಿಯನು ಸಕಲ ವೇದ ಅತುಲ ನಾದ ತಾರೆ ಅಖಿಲ ಲೋಕ ನಿಖಿಲ ನಾದ ಸಾರೆ ಕಮಲ ಕನ್ಯೆ ವಿಮಲ ಧನ್ಯೆ ,ಧನ್ಯೆ ನಿತ್ಯವು ಸತ್ಯವು ನೀ ||ತಾಂಬೂಲ|| ತಾಯೆ ನಿನ್ನ ರೂಪವ ಕಂಡೆ ನಂದಿನಿ ಕಟಿಯಲ್ಲಿ ಮಾಯೆ ನಿನ್ನ ಕಾಂತಿಯ ಕಂಡೆ ಮಲ್ಲದ ನೆಲದಲ್ಲಿ||ತಾಯೆ|| ಎಲ್ಲರ ಧರ್ಮವು ಸಮಾನವೆಂದು ಸಾರುವ ಯೋಗಿನಿಯೆ ನ್ಯಾಯ ನೀತಿಯ ರಕ್ಷಿಸುವಂತಹ ಸತ್ಯಸ್ವರೂಪಿಣಿಯೆ ಭವದ ಕಡಲನ್ನು ದಾಟಿಸು ಬಿಡದೆ ದಡವನ್ನು ಸೇರಿಸು ಮನದಿ ಕವಿದ ಸಕಲ ಅಂಧಕಾರ ತಾಯೆ ನೀನು ಒಲಿದು ಸರಿಸು ದೂರ ಜ್ಞಾನ ಬೆಳಕ ನೀನು ಬೀರಿ ನೇರ ಅನುಗ್ರಹ ಮಾಡಮ್ಮ ||ತಾಂಬೂಲ||