#ಹಣೆಯಲಿ_ಸಿಂಧೂರ
ಹಣೆಯಲಿ ಸಿಂಧೂರ,
ಮೊಗದಲಿಹುದು ಮಂದಾರ...
ಮೂಗಲ್ಲಿ ಮುಗುತ್ತಿ..
ಅದರಲಿಹುದು ಭಯ,ಭಕ್ತಿ..
ಕೊರಳಲ್ಲಿ ಕರಿಮಣಿ..
ಅದು ಸಂಸ್ಕೃತಿಯ ಒಳಗೊಂಡರೆ
ಚಿರ ಋಣಿ..
ಕೈಯಲ್ಲಿ ಗಾಜಿನ ಬಳೆ..
ಹೆಣ್ಣಿನ ಬಾಳಿನೊಳಗೆ ಗಿಜ ಗಿಜ
ಎನ್ನುತಿರುವ ಮೋಜಿನ ಮಳೆ..
ಕಾಲ್ಬೆರಳಿಗೆ ಕಾಲುಂಗುರ..
ಸಪ್ತಪದಿಯ ಸುಯೋಗವೇ
ಇವುಗಳೆಲ್ಲದರ ಬದುಕಿನ ಹಂದರ...!!
#📝ನನ್ನ ಕವಿತೆಗಳು #🖋️ ನನ್ನ ಬರಹ #💓ಮನದಾಳದ ಮಾತು
#📜ಕವಿತೆ #✍ನನ್ನ ಇಷ್ಟದ ಕವಿತೆ
00:07

