#🔴Bharat Bandh: ಫೆಬ್ರವರಿ 1 ರಂದು ಭಾರತ್ ಬಂದ್ ಘೋಷಣೆ🔴
ಫೆಬ್ರವರಿ 1ಕ್ಕೆ ಭಾರತ್ ಬಂದ್ ಕರೆ: ಶಾಲಾ-ಕಾಲೇಜು ರಜೆ ಇರುತ್ತಾ? ಬಂದ್ ಘೋಷಣೆಗೆ ಅಸಲಿ ಕಾರಣವೇನು?
ಮತ್ತೊಂದು ಭಾರತ್ ಬಂದ್ (Bharat Bandh) ಬಾಗಿಲಿಗೆ ಬಂದು ನಿಂತಿದೆ. ಫೆಬ್ರವರಿ 1 ರಂದು ದೇಶಾದ್ಯಂತ ಬೃಹತ್ ಪ್ರತಿಭಟನೆ ಮತ್ತು ಬಂದ್ ಆಚರಿಸಲು ಹಲವಾರು ಸಂಘಟನೆಗಳು ಕರೆ ನೀಡಿವೆ. ಈ ಬಾರಿಯ ಬಂದ್ ಪೆಟ್ರೋಲ್ ಬೆಲೆ ಏರಿಕೆಗೋ ಅಥವಾ ರೈತರ ಸಮಸ್ಯೆಗೋ ಅಲ್ಲ, ಬದಲಿಗೆ ಇದು ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಒಳಗೆ ನಡೆಯುತ್ತಿರುವ ‘ಜಾತಿ ಸಂಘರ್ಷ’ದ ಕಿಡಿ!
ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಹೊರಡಿಸಿದ ಹೊಸ ಮಾರ್ಗಸೂಚಿಗಳು ಈಗ ದೇಶಾದ್ಯಂತ ಭಾರೀ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಒಂದು ಕಡೆ ಕರ್ಣಿ ಸೇನೆಯಂತಹ ಸಂಘಟನೆಗಳು ರಸ್ತೆಗಿಳಿದು ಹೋರಾಟಕ್ಕೆ ಕರೆ ನೀಡಿದ್ದರೆ, ಮತ್ತೊಂದು ಕಡೆ ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿಗಳ ನಡುವೆ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ


