ShareChat
click to see wallet page
search
Airtel ಬೊಂಬಾಟ್‌ ಪ್ಲಾನ್‌: ಒಂದೇ ರೀಚಾರ್ಜ್‌ನಲ್ಲಿ ಎರಡು ಲಾಭ ಪಡೆಯಲು ಈ ಯೋಜನೆ ಅತ್ಯುತ್ತಮ! ಭಾರ್ತಿ Airtel ಟೆಲಿಕಾಂ ತನ್ನ ಗ್ರಾಹಕರಿಗೆ ಆಕರ್ಷಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ನೀಡಿರುವ ಜೊತೆಗೆ ಕೆಲವು ಬೊಂಬಾಟ್‌ ಪೋಸ್ಟ್‌ಪೇಯ್ಡ್ ಯೋಜನೆಗಳ ಆಯ್ಕೆಯನ್ನು ಸಹ ಲಭ್ಯ ಮಾಡಿದೆ. ಆ ಪೈಕಿ ಏರ್‌ಟೆಲ್‌ ಕಂಪನಿಯ 699 ರೂ.ಗಳ Postpaid ರೀಚಾರ್ಜ್‌ ಪ್ಲಾನ್‌ ಬಳಕೆದಾರರ ಗಮನ ಸೆಳೆದಿವೆ. ಈ ಪೋಸ್ಟ್‌ಪೇಯ್ಡ್‌ ಪ್ಲಾನ್‌ನಲ್ಲಿ ಡೇಟಾ ಪ್ರಯೋಜನಗಳ ಜೊತೆಗೆ ಆಯ್ದ OTT ಚಂದಾದಾರಿಕೆಯ ಸೌಲಭ್ಯಗಳು ಸಹ ಸಿಗುತ್ತವೆ. ಹೀಗಾಗಿ ಈ ಪ್ಲಾನ್‌ ಹೆಚ್ಚು ಡಿಮ್ಯಾಂಡ್‌ನಲ್ಲಿ ಕಾಣಿಸಿಕೊಂಡಿದೆ. ಹಾಗಾದರೇ Airtel ಕಂಪನಿಯ 699 ರೂ.ಗಳ ಪೋಸ್ಟ್‌ಪೇಯ್ಡ್‌ ಯೋಜನೆಗಳ ಪ್ರಯೋಜನಗಳ ಬಗ್ಗೆ ನೋಡೋಣ ಬನ್ನಿ. Airtel 699 ರೂ.ಗಳ Postpaid ಪ್ಲಾನ್ ಪ್ರಯೋಜನಗಳ ಮಾಹಿತಿ: Airtel ಟೆಲಿಕಾಂನ ಈ 699 ರೂ.ಗಳ ಯೋಜನೆಯು ಇನ್ಫಿನಿಟಿ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಪ್ಲಾನ್‌ ಆಗಿದೆ. ಈ ಯೋಜನೆಯ ಶುಲ್ಕ 699 ರೂ.ಗಳು ಆಗಿದ್ದು ಇದರಲ್ಲಿ ಕುಟುಂಬದ ಇಬ್ಬರು ಸದಸ್ಯರು ಪ್ರಯೋಜನ ಪಡೆಯಬಹುದಾಗಿದೆ. ಅಂದರೆ ಪ್ರತಿ ಸದಸ್ಯರಿಗೆ 350 ರೂ.ಗಳು ವೆಚ್ಚವಾಗುತ್ತದೆ. ಇನ್ನು ಈ ಏರ್‌ಟೆಲ್‌ ಸಂಸ್ಥೆಯ Postpaid ಪ್ಲಾನಿನಲ್ಲಿ ಬಳಕೆದಾರರಿಗೆ ಅನಿಯಮಿತ ವಾಯ್ಸ್ ಕರೆಗಳ ಸೌಲಭ್ಯ ಸಿಗಲಿದೆ ಜೊತೆಗೆ ಪ್ರತಿದಿನ 100 SMS ಪ್ರಯೋಜನ ಕೂಡಾ ಲಭ್ಯವಾಗಲಿದೆ. ಅಲ್ಲದೇ ಈ ಯೋಜನೆಯ ಪ್ರಾಥಮಿಕ ಬಳಕೆದಾರರು 75GB ಡೇಟಾ ಸೌಲಭ್ಯ ಪಡೆಯುತ್ತಾರೆ ಹಾಗೂ ದ್ವಿತೀಯ ಬಳಕೆದಾರರಿಗೆ 30GB ಡೇಟಾ ಸೌಲಭ್ಯ ಸಿಗುತ್ತದೆ. Airtel 699 ರೂ.ಗಳ Postpaid ಪ್ಲಾನಿನ ಹೆಚ್ಚುವರಿ ಸೌಲಭ್ಯಗಳು: Airtel ಟೆಲಿಕಾಂನ ಈ 699 ರೂ.ಗಳ Postpaid ಯೋಜನೆಯು ಕೆಲವು ಆಡ್ ಆನ್ ಪ್ರಯೋಜನಗಳನ್ನು ಕೂಡ ಪಡೆದಿದೆ. ಈ ಪ್ಲಾನಿನಲ್ಲಿ ಆರು ತಿಂಗಳ ಕಾಲ ಅಮೆಜಾನ್ ಪ್ರೈಮ್ ಸದಸ್ಯತ್ವ ದೊರೆಯುತ್ತದೆ ಹಾಗೂ ಒಂದು ವರ್ಷದ ಕಾಲ ಜಿಯೋ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಸಿಗಲಿದೆ. ಹಾಗೆಯೇ ಆರು ತಿಂಗಳ ಕಾಲ 100GB ಕ್ಲೌಡ್ ಸ್ಟೋರೇಜ್ ಹೊಂದಿರುವ ಗೂಗಲ್ ಒನ್ ಪ್ರಯೋಜನ ದೊರೆಯುತ್ತದೆ. ಇದಲ್ಲದೇ ಕೆಲವು OTT ಪ್ಲಾಟ್‌ಫಾರ್ಮ್‌ಗಳಿಗೆ ಆಕ್ಸಸ್ ನೀಡುವ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂ ಸೌಲಭ್ಯ, ಬ್ಲೂ ರಿಬ್ಬನ್ ಬ್ಯಾಗ್ ಪ್ರಯೋಜನ ಹಾಗೂ ಉಚಿತ ಹಲೋ ಟ್ಯೂನ್ಸ್ ಆಕ್ಸಸ್ ನಂತಹ ಪ್ರಯೋಜನಗಳು ಲಭ್ಯವಾಗಲಿವೆ. ಇದಲ್ಲದೇ ಏರ್‌ಟೆಲ್‌ ಟೆಲಿಕಾಂ 999 ರೂ.ಗಳ ಬೆಲೆಯಲ್ಲಿ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆಯ ಆಯ್ಕೆ ಸಹ ನೀಡಿದೆ. ಈ ಯೋಜನೆಯಲ್ಲಿ ಸಹ ಇಬ್ಬರು ಸದಸ್ಯರು ಪ್ರಯೋಜನ ಪಡೆಯಬಹುದಾಗಿದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನಿಯಮಿತ ವಾಯ್ಸ್ ಕರೆಗಳ ಜೊತೆಗೆ ದಿನನಿತ್ಯ 100 SMS ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಯೋಜನೆಯ ಪ್ರಾಥಮಿಕ ಸದ್ಯಸರಿಗೆ 90GB ಡೇಟಾ ಸೌಲಭ್ಯ ಪಡೆಯುತ್ತಾರೆ ಹಾಗೂ ದ್ವಿತೀಯ ಸದ್ಯಸರಿಗೆ 30GB ಡೇಟಾ ಸೌಲಭ್ಯ ಸಿಗುತ್ತದೆ. ಉಳಿದಂತೆ ಈ ಪ್ಲಾನಿನಲ್ಲಿ ಆರು ತಿಂಗಳ ಕಾಲ ಅಮೆಜಾನ್ ಪ್ರೈಮ್ ಸದಸ್ಯತ್ವ ದೊರೆಯುತ್ತದೆ ಹಾಗೂ ಒಂದು ವರ್ಷದ ಕಾಲ ಜಿಯೋ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಸಿಗಲಿದೆ. ಏರ್‌ಟೆಲ್‌ ಟೆಲಿಕಾಂ ಸಂಸ್ಥೆಯ 1199 ರೂ.ಗಳ ಹಾಗೂ 1399 ರೂ.ಗಳ Postpaid ಯೋಜನೆಗಳು ಮೂರು ಸದಸ್ಯರಿಗೆ ಆಡ್‌ ಆನ್ ಸಿಮ್ ಸೌಲಭ್ಯ ಒಳಗೊಂಡಿವೆ. ಇನ್ನು ಈ ಎರಡು ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಯೋಜನೆಗಳು ಸಹ ಡೇಟಾ ಸೌಲಭ್ಯ, ಅನಿಯಮಿತ ವಾಯ್ಸ್‌ ಕರೆ ಸೌಲಭ್ಯ, SMS ಪ್ರಯೋಜನ ಹಾಗೂ OTT ಚಂದಾದಾರಿಕೆ ಪ್ರಯೋಜನಗಳನ್ನು ಹೊಂದಿವೆ. #TECHNOLOGY #BHARTIAIRTEL #POSTPAIDRECHARGEPLAN #UNLIMITEDBENEFITS
TECHNOLOGY #BHARTIAIRTEL #POSTPAIDRECHARGEPLAN #UNLIMITEDBENEFITS - 9airtel 9airtel - ShareChat