ShareChat
click to see wallet page
search
#⚔️ಭೀಮಾ ಕೋರೆಗಾವ್⚔️ ವಿಜಯ ದಿನ🗡️ ✊ " ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು " ✍️ #babasahebambedkar #ಭೀಮಾ_ಕೋರೆಗಾಂವ ಯುದ್ದ #ಮರೆಮಾಚಲ್ಪಟ್ಟ ಶೌರ್ಯದ ಪುನರುಚ್ಚಾರ ಭೀಮಾ ಕೋರೆಗಾಂವ್ ಎಂದರೆ ಕೇವಲ ಒಂದು ಯುದ್ಧ ಒಂದು ಸ್ಥಳವಲ್ಲ ಅದು ದಲಿತ #ಬಹುಜನರ ಸ್ವಾಭಿಮಾನ ಶೌರ್ಯ ಮತ್ತು ಮನುವಾದದ ವಿರುದ್ಧದ ಪ್ರತಿರೋಧ ನೀಡಿದ ಇತಿಹಾಸ ಈ ಇತಿಹಾಸವನ್ನು ಸಮಾಜದ ಮುಂದಿಟ್ಟ ಮಹತ್ವದ ನಾಯಕರೆಂದರೆ ಪರಮಪೂಜ್ಯ ಬೋಧಿಸತ್ವ #ಬಾಬಾಸಾಹೇಬ್ #ಡಾ_ಬಿ_ಆರ್_ಅಂಬೇಡ್ಕರ್ ಅವರು 🙏 ಭೀಮಾ ಕೋರೆಗಾಂವ ಯುದ್ದ 1818ರ ಜನವರಿ 1 ರಂದು ಪೇಶ್ವೆಗಳ ಮನುವಾದಿ ಆಡಳಿತದ ವಿರುದ್ಧ ಮಹಾರ್ ಸೈನಿಕರು ಶೋಷಣೆ ದೌರ್ಜನ್ಯ ಅಸಮಾನತೆ ಅಹಂಕಾರಕ್ಕೆ ವಿರುದ್ಧ ನಿಂತು ಧೈರ್ಯ ದಿಂದ ಹೋರಾಡಿ ಜಯ ಸಾಧಿಸಿದರು. ಆದರೆ ಈ ಶೌರ್ಯಮಯ ಇತಿಹಾಸವನ್ನು ಸಮಾಜದ ಮುಖ್ಯ ಪ್ರವಾಹದಲ್ಲಿ ಮರೆಮಾಚಲಾಯಿತು #ಜಾತಿ_ಕನ್ನದಕ್ ಜಾತಿವಾದಿ ಇತಿಹಾಸಕಾರರು ತಿಳಿಸಲಿಲ್ಲ ಆದರೆ 1927–28ರಲ್ಲಿ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಭೀಮಾ ಕೋರೆಗಾಂವ್ ವಿಜಯಸ್ತಂಭವನ್ನು ಅಧ್ಯಯನ ಮಾಡಿ ಅಲ್ಲಿ ಕೆತ್ತಲಾದ ವೀರ ಮಹಾರ್ ಸೈನಿಕರ ಹೆಸರುಗಳ ಮೂಲಕ ಈ ಯುದ್ಧದ ನಿಜವಾದ ಅರ್ಥವನ್ನು ಜನತೆಗೆ ತಿಳಿಸಿದರು. ಅವರು ಇದನ್ನು ಅಸ್ಪೃಶ್ಯತೆಯ ವಿರುದ್ಧದ ಸ್ವಾಭಿಮನ ಯುದ್ಧವನ್ನು ಜಗತ್ತಿಗೆ ಪರಿಚಯಿಸಿದರು. ಅದರಿಂದಲೇ ಜನವರಿ 1 #ಶೌರ್ಯದಿನ ಆಗಿ ಈಗ ಭೀಮಾ ಕೋರೆಗಾಂವ್ ಆತ್ಮಗಾರ್ವ ಸ್ವಾಭಿಮಾನದ ಶಾಶ್ವತ ಸಂಕೇತವಾಗಿದೆ ವಿಶ್ವಕ್ಕೆ ಸಾಕ್ಷಿಯಾಗಿದೆ #bhimakoregaon #drbrambedkar #jaibhim #namobuddhay #ಜೈಭೀಮ್ ಜೈಭೀಮ್ ನಮೋ ಬುದ್ಧಾಯ
⚔️ಭೀಮಾ ಕೋರೆಗಾವ್⚔️ ವಿಜಯ ದಿನ🗡️ ✊ - ShareChat