ಚಿತ್ರಕ್ಕೊಂದು ಬರಹ
ಶೀರ್ಷಿಕೆ : " ಚೆಲುವಿಗೆ ಚೆಲುವು "
ಇರುಳ ಇಬ್ಬನಿ ಮಿಂದಿರಲು
ಮುಂಜಾನೆ ಕಿರಣಗಳ ಸೋಕಿ
ಅರಳಿ ನಿಂತಿದೆ ಮೊಗ್ಗೊಂದು
ಖುಷಿ ಖುಷಿಯಿಂದ
ಕಿಟಕಿಯಲ್ಲಿ ಇಣುಕಿ ನೋಡಿ
ಮೊಗ್ಗರಳಿದ ಆನಂದವು
ಸದ್ದು ಮಾಡದೆ ನೋಡುತ್ತಾ
ಏನೆಂದು ಕೇಳಿದಳು ಮೌನದಲ್ಲಿ
ಪೆದ್ದು ಪೆದ್ದಾಗಿ ನಾಚಿಕೆಯಲಿ
ಮುದ್ದು ಮುದ್ದು ಮುಂಜಾನೆಯಲಿ
ಕಣ್ಣುಜ್ಜಿ ನಿಂತ ಚೆಲುವೆ
ಬೆರಗು ಬೆರಗಾದ ನೋಟದಲ್ಲಿ
ಮೃದುವಾಗಿ ಅಂಗೈಲಿ ನೇವರಿಸಿ
ಬಿಗಿದಪ್ಪುತ ಮುಡಿವಾಸೆಯಲಿ
ಕೋಪಿಸಿಕೊಳ್ಳದಿರು ಎನ್ನುತ
ಹೂವ ಕಿತ್ತಳು ನೋವಾಗದಂತೆ
ಮುದ್ದಿಟ್ಟ ಮುಂಗುರುಳು ಬಾಚಿ
ಹೆರಳ ವಯ್ಯಾರದಿ ಹೆಣೆದು
ಹೂಮಾಲೆಯ ಮುಡಿದರಲು
ಕನ್ನಡಿ ಚೆಲುವೆ ತಾನೆಂದಿತು
ಚೆಲುವಿನ ಚಿತ್ತಾರದ ಹೂವು
ಸದ್ದಿಲ್ಲದೆ ಸವಿದ ಸೌಂದರ್ಯ
ನಾಚಿದ್ದ ಚೆಲುವು ಸಿಂಗಾರವು
ಕನ್ನಡಿಯೊಳಗಿನ ಸುಂದರಿಯು
✍️…ನಿಮ್ಮವನೆ ನವೀನ್ Crazy😎 #❤❤❤❤


