ರಾಜ್ಯದ ಜನರಿಗೆ KMF ಗುಡ್‌ನ್ಯೂಸ್: ಇನ್ಮುಂದೆ 10 ರೂಪಾಯಿಗೆ ಸಿಗಲಿದೆ ನಂದಿನಿ ಹಾಲು, ಮೊಸರು!
ಬೆಂಗಳೂರು: ಹಾಲು ಸೇರಿದಂತೆ ಇತರ ಹಾಲಿನ
ಇತರ ಉತ್ಪನ್ನಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ರಾಜ್ಯದ ಜನತೆಗೆ ಕೆಎಂಎಫ್ ಗುಡ್‌ನ್ಯೂಸ್ ನೀಡಿದೆ.ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾಮಂಡಳ (KMF) ರಾಜ್ಯದ ಸಾಮಾನ್ಯ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದ್ದು, ಬೆಲೆ ಏರಿಕೆಯ ನಡುವೆ ಕಂಗಾಲಾಗಿದ್ದ ಸಾಮಾನ್ಯ ಜನರಿಗೆ ನಂದಿನಿ ಬ್ರ್ಯಾಂಡ್‌ನ ಹಾಲು ಮತ್ತು ಮೊಸರು ಇನ್ಮುಂದೆ ಕೇವಲ 10 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಾಂಕೇತಿಕವಾಗಿ ಹಾಲಿನ ಸಣ್ಣ ಪ್ಯಾಕೆಟ್‌ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು. ಈ ನೂತನ ಯೋಜನೆಯ ಮೂಲಕ ಕೆಎಂಎಫ್
ಗ್ರಾಹಕಸ್ನೇಹಿ ಕ್ರಮಕ್ಕೆ ಮುಂದಾಗಿದೆ.
ಕೆಎಂಎಫ್‌ನ ಈ ಯೋಜನೆಯಿಂದ ಬ್ಯಾಚುಲರ್‌ಗಳಿಗೆ, ಮನೆಯಲ್ಲಿ ಒಬ್ಬರೇ
ಇರುವವರಿಗೆ ಹೆಚ್ಚು
ಅನುಕೂಲ ಆಗಲಿದೆ.
10 ರೂಪಾಯಿಗೆ ಹಾಲು ಮಾತ್ರವಲ್ಲ!
ವಿಶೇಷ ಸಂಗತಿ ಏನೆಂದರೆ, ಕೆಎಂಎಫ್ ಹತ್ತು ರೂಪಾಯಿ ಬೆಲೆಗೆ ಕೇವಲ ಹಾಲು ಮಾರಾಟ ಮಾಡೋಕೆ ಮಾತ್ರ ಮುಂದಾಗಿದ್ದಲ್ಲ. ಇದರ ಜೊತೆಗೆ 10 ರೂಪಾಯಿಗೆ ಮೊಸರು ಕೂಡ ಗ್ರಾಹಕರಿಗೆ ಸಿಗಲಿದೆ. 160 ml ಪಾಕೆಟ್ ಹಾಲು 10 ರೂಪಾಯಿಗೆ ಲಭ್ಯವಾಗಲಿದ್ದು, ಜೊತೆಗೆ 140 ml ಪಾಕೆಟ್ ಮೊಸರು 10 ರೂಪಾಯಿಗೆ ಸಿಗಲಿದೆ. ಈ ಮೊದಲು 200 ml ಹಾಲಿನ ಪಾಕೆಟ್, ಮೊಸರು ಸಿಗ್ತಾ ಇತ್ತು,
ಈಗ 160 ml, 140 ml ಪಾಕೆಟ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಇನ್ನು, ಹಾಲು, ಮೊಸರಿನ ಪ್ಯಾಕೆಟ್‌ಗಳೊಂದಿಗೆ ಮಾವಿನ ಲಸ್ಸಿ, ಸ್ಟ್ರಾಬೆರಿ ಲಸ್ಸಿ ಕೂಡ ಗ್ರಾಹಕರಿಗೆ ಸಿಲಿದೆ. 15 ರೂಪಾಯಿಗೆ ಮಾವಿನ ಲಸ್ಸಿ, ಸ್ಟ್ರಾಬೆರಿ ಲಸ್ಸಿ ಲಭ್ಯವಾಗಲಿದ್ದು, ಶೀಘ್ರದಲ್ಲೇ ಎಲ್ಲಾ ನಂದಿನಿ ಮಳಿಗೆಗಳಿಗೆ ಹತ್ತು ರೂಪಾಯಿ ಹಾಲು, ಮೊಸರು ಸರಬರಾಜು ಆಗಲಿದೆ.
ಆ ಮೂಲಕ ಕಡಿಮೆ ದರದಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಮೂಲಕ ಕೆಎಂಎಫ್ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಈ ಹೊಸ ಯೋಜನೆ ರೂಪಿಸಿದೆ.
#NEWUPDATE #BENGALURU #KMF #NANDINIPRODUCTS #CUSTOMERFRIENDLY


