ಐಷಾರಾಮಿ ಎಂದರೆ ಏನು ?
ಇತ್ತೀಚಿನ ದಿನಗಳಲ್ಲಿ ಐಷಾರಾಮಿ ವ್ಯಾಖ್ಯಾನವನ್ನು ಬದಲಾಯಿಸಲಾಗಿದೆ.
60 ರ ದಶಕದಲ್ಲಿ ಕಾರು ಒಂದು ಐಷಾರಾಮಿ ಆಗಿತ್ತು.
70 ರ ದಶಕದಲ್ಲಿ ದೂರದರ್ಶನವು ಒಂದು ಐಷಾರಾಮಿಯಾಗಿತ್ತು.
80 ರ ದಶಕದಲ್ಲಿ ಟೆಲಿಫೋನ್ ಒಂದು ಐಷಾರಾಮಿಯಾಗಿತ್ತು.
90 ರ ದಶಕದಲ್ಲಿ ಕಂಪ್ಯೂಟರ್ ಒಂದು ಐಷಾರಾಮಿ ...
ಐಷಾರಾಮಿ ಅಂದರೆ ಇನ್ನು ಮುಂದೆ ಹಡಗಿನಲ್ಲಿ ವಿಹಾರಕ್ಕೆ ಹೋಗುವುದಲ್ಲ ಮತ್ತು ಹೆಸರಾಂತ ಬಾಣಸಿಗರಿಂದ ತಯಾರಿಸಿದ ಆಹಾರವನ್ನು ಸೇವಿಸುವುದಲ್ಲ.
ನಿಮ್ಮ ಸ್ವಂತ ಹಿತ್ತಲಿನಲ್ಲಿ ಬೆಳೆದ ತಾಜಾ ಸಾವಯವ ಆಹಾರವನ್ನು ತಿನ್ನುವುದು ಐಷಾರಾಮಿ.
ಐಷಾರಾಮಿ ಎಂದರೆ ನಿಮ್ಮ ಮನೆಯಲ್ಲಿ ಎಲಿವೇಟರ್ (ಯಂತ್ರದ ಮೆಟ್ಟಿಲು) ಇರುವುದು ಅಲ್ಲ.
ಐಷಾರಾಮಿ ಎಂದರೆ 3-4 ಅಂತಸ್ತಿನ ಮೆಟ್ಟಿಲುಗಳನ್ನು ಕಷ್ಟವಿಲ್ಲದೆ ಏರುವ ಸಾಮರ್ಥ್ಯ.
ಐಷಾರಾಮಿ ಎಂದರೆ ದೊಡ್ಡ ಶೀತಲೀಕರಣ ಯಂತ್ರವನ್ನು ಖರೀದಿಸುವ ಸಾಮರ್ಥ್ಯವಲ್ಲ. ಐಷಾರಾಮಿ ಎಂದರೆ ಯಾವ ಹೊತ್ತಿನ ಆಹಾರ ಆ ಹೊತ್ತಿಗೆ ಹೊಸದಾಗಿ ಅಡಿಗೆ ಮಾಡಿ ದಿನಕ್ಕೆ 2-3 ಬಾರಿ ತಿನ್ನುವ ಸಾಮರ್ಥ್ಯ.
ಐಷಾರಾಮಿ ಎಂದರೆ ಮನೆಯಲ್ಲಿ ಚಿತ್ರಮಂದಿರದ ವ್ಯವಸ್ಥೆಯನ್ನು ಹೊಂದುವುದಲ್ಲ ಮತ್ತು ಹಿಮಾಲಯದ ಅನ್ವೇಶಣೆ ಯಾತ್ರೆ ವೀಕ್ಷಿಸುವುದಲ್ಲ.
ಐಷಾರಾಮಿ ಎಂದರೆ ಹಿಮಾಲಯದ ಅನ್ವೇಶಣೆ ಯಾತ್ರೆಯನ್ನು ಭೌತಿಕವಾಗಿ ಅನುಭವಿಸುವುದು. #ನಮ್ಮ ಸಂಸ್ಕೃತಿ # #ನಮ್ಮ ಸಂಸ್ಕೃತಿ. #ನಮ್ಮ ಕರುನಾಡನ ಸಂಸ್ಕೃತಿ
ಅಮೇರಿಕಾದ ಐಷಾರಾಮಿ ಆಸ್ಪತ್ರೆಯಿಂದ ಅತ್ಯಂತ ದುಬಾರಿ ಚಿಕಿತ್ಸೆ ಪಡೆಯುವುದಲ್ಲ.
ಹಾಗಾದರೆ ಈಗ ಐಷಾರಾಮಿ ಎಂದರೇನು?
ಆರೋಗ್ಯವಾಗಿರುವುದು, ಸಂತೋಷವಾಗಿರುವುದು, ಪ್ರೀತಿಯ ಕುಟುಂಬವನ್ನು ಹೊಂದುವುದು, ಪ್ರೀತಿಯ ಸ್ನೇಹಿತರೊಂದಿಗೆ ಇರುವುದು, ಮಾಲಿನ್ಯರಹಿತ ಸ್ಥಳದಲ್ಲಿ ವಾಸಿಸುವುದು.
ಐಷಾರಾಮಿ ಎಂದರೆ ಶುದ್ಧ ಗಾಳಿ, ಶುದ್ಧ ನೀರು, ಸೂರ್ಯನ ಬೆಳಕು, ನಗು ಮತ್ತು .......
ಈ ಎಲ್ಲಾ ಸಂಗತಿಗಳು ಅಪರೂಪವಾಗಿ ಮಾರ್ಪಟ್ಟಿವೆ. ಮತ್ತು ಇವು ನಿಜವಾದ "ಐಷಾರಾಮಿ".
ಐಷಾರಾಮಿ ಜೀವನವನ್ನು ಹೊಂದಿರಿ !!
(ವಾ) #ನಮ್ಮ ಸಂಸ್ಕೃತಿ #ನಮ್ಮ ತುಳುನಾಡು ನಮ್ಮ ಸಂಸ್ಕೃತಿ #