ಮನದಿ ದುಃಖ ತುಂಬಿದೆ ಯಾರೊಡನೆ ಹೇಳಲಿ ಹತ್ತಿರದಲ್ಲಿ ಅವಳಿಲ್ಲದೆ ಜೀವನ ಬೇಜಾನ್ ಬೋರಾಗಿದೆ
ಮನದಿ ದುಃಖ ತುಂಬಿದೆ ಯಾರೊಡನೆ ಹೇಳಲಿ ಹತ್ತಿರ ಕರೆದು ಮುತ್ತನ್ನಿಟ್ಟು ಸಮಾಧಾನಿಸಲು ಅವಳಿಲ್ಲ
ಮನದಿ ದುಃಖ ತುಂಬಿದೆ ಯಾರೊಡನೆ ಹೇಳಲಿ ಹಣೆಯ ಸವರಿ ಸಾಂತ್ವನ ಹೇಳಲು ಅವಳಿಲ್ಲ
ಮನದಿ ದುಃಖ ತುಂಬಿದೆ ಯಾರೊಡನೆ ಹೇಳಲಿ ಹೇಳಲಾರಿಲ್ಲದೆ ಒಬ್ಬಂಟಿ ನಾ
ಅವಳಿಲ್ಲದ ನಾಳೆಗಳ ನಾ ಹೇಗೆ ಕಲ್ಪಿಸಲಿ ಬಾಳಲಿ
ಮರೆಯಲು ಕಾರಣ ಹುಡುಕುತ್ತಿರುವೆ ನಾನು
ಮರಳಿ ನೆನಪಾಗುತ್ತಿರುವೆ ನೀನು
ನನ್ನ ಒಲವಿಗಿಂದು ಕಂಕಣಬಲ ಬಂತು
ಅವಳ ನೆನಪುಗಳಿಗಿನ್ನು ಮರಣಶಂಕೆ ಆರಂಭ
ಉಸಿರಾಟವೇ ಮರತಂತಿದೆ ಹೃದಯದೊಳಗೆ ಕಂಪನ
ಬದುಕುವುದೇ ಮನಸು ಅವಳಿಲ್ಲದೆ ನೆನಪಿಲ್ಲದೆ
ಬಾರದ ಮರುಹುಟ್ಟಿಗೆ ಬದುಕುವ ಕಲೆಗೊತ್ತು
ನೀನೊಲಿದು ಬಂದಿದ್ದರೆ ಪ್ರೀತಿಗೆ ಬೆಲೆಯಿತ್ತು
ನೀನಿಲ್ಲದೆಯೂ ಬದುಕಿನಲಿ ಬದುಕುವೆ ನಾ ನನಗಾಗಿ
ನೀನೊಪ್ಪದೆ ಹೋದ ಪ್ರೀತಿಯ ನೆನಪಿಗಾಗಿ
#ಅವಳ ನೆನಪಲ್ಲಿ #ಮೌನ ಮನದ ಪ್ರತಿಬಿಂಬ #ಎರಡು ಹೃದಯಗಳು #ಮನದ ಮಾತು ಬರಹದಲ್ಲಿ #ನನ್ನ ಪ್ರಪಂಚ ❣️

