#🌸🙏ವಿನಾಯಕ ಚತುರ್ಥಿ🙏🌸
ಒಂದು ಮಳೆಯ ಕಥೆ
ನಾನೊಬ್ಬ ರೈತ. ತುಳುನಾಡಿನ ಹಳ್ಳಿಯ ಮಣ್ಣೇ ನನ್ನ ಬದುಕು, ಬೆವರು ನನ್ನ ಸಂಪತ್ತು, ಸಂಸ್ಕೃತಿಯೇ ನಮ್ಮ ಸಂತೋಷ. ಬೇಸಿಗೆ ಬಿಸಿಯು ಕರಗಿದಾಗ, ಮುಂಗಾರು ಮೋಡಗಳು ಕಣ್ಣಿಗೆ ಬೀಳುತ್ತವೆ ಆಗ ಭೂಮಿಗೂ ನಮ್ಮ ಮನಸ್ಸಿಗೂ ತಂಪು. ಗದ್ದೆ ನಾಟಿಗೆ ಕೈಹಾಕಿದಾಗ ಪಾಡ್ದನಗಳ ನಾದ ಕೇಳಿಬರುತ್ತದೆ. ಕೈಯಲ್ಲಿ ನೀರು ಹಾರಿಸಿ ನಾವೆಲ್ಲ ಖುಷಿಯಿಂದ ನಗುತ್ತೇವೆ ಇದು ನಮ್ಮ ಹಳ್ಳಿಯ ಹಬ್ಬ, ನಮ್ಮ ಜೀವದ ಉತ್ಸವ.
ಆದರೆ ಪ್ರಕೃತಿಯ ಚಿತ್ತ ಯಾರಿಗೂ ಅರ್ಥವಾಗದು. ಒಂದು ದಿನ ಮಧ್ಯಾಹ್ನ ಮೂರು ಗಂಟೆ, ಆಕಾಶ ಕತ್ತಲಾಗಿ ಗುಡ್ಡದ ಮೇಲೆ ಸಿಡಿಲು ಬಡಿದಿತು. ಕ್ಷಣಕ್ಕೊಂದು ನಿಶ್ಶಬ್ದ, ನಂತರ ಅಸಹ್ಯ ಮಳೆಯ ಅಬ್ಬರ. ತೋಡುಗಳು ಉಕ್ಕಿ ಹರಿದು, ತಮ್ಮ ಹಾದಿಯನ್ನೇ ಬದಲಿಸಿದವು. ಮನೆಯಲ್ಲಿ ನಿಲ್ಲಿಸಿದ್ದ ಕಾರು ಐನೂರು ಮೀಟರ್ ದೂರಕ್ಕೆ ಕೊಚ್ಚಿಹೋಯಿತು.
ಆ ಧಾರಾಕಾರ ಮಳೆಯಲ್ಲಿ ಅಜ್ಜಿಯೊಬ್ಬಳು ಹೊರಗೆ ಹೋಗಿ ಮರದ ದಿಮ್ಮಿಗೆ ಸಿಕ್ಕಿ ಜೀವ ಕಳೆದುಕೊಂಡರು. ಹತ್ತಕ್ಕೂ ಹೆಚ್ಚು ಮನೆಗಳು ಧರೆಗುರುಳಿದವು, ಹಲವು ದನಗಳು ಕಾಣೆಯಾಗಿದವು. ತುಳುನಾಡಿನ ಜನರು ಹೇಳಿದ್ರು
“ಇದು ಸಾಮಾನ್ಯ ಮಳೆ ಅಲ್ಲ, ಮೇಘಸ್ಫೋಟ.”ಈ ಘಟನೆ ನಮಗೊಂದುಮೊದಲ ಅನುಭವ ದ ಪಾಠವಾಗಿತ್ತು.
ನಾವೆಲ್ಲ ಮಳೆ ಎಂದರೆ ನಮ್ಮ ಖುಷಿಪಟ್ಟವರು, ಖುಷಿಪಡುವ ಪ್ರವೃತ್ತಿಯವರು, ಆದರೆ ಆ ಮಳೆ ನೋವಿನ ನೆನಪಾಗಿ ಉಳಿಯಿತು. ಭೂಮಿಯ ತಾಯಿ ತೇವಗೊಂಡರೂ, ನಮ್ಮ ಮನಸ್ಸುಗಳು ಆ ದಿನ ಮಂಕಾದವು. ಆದರೂ, ನಾವು ರೈತರು ನಾಳೆಯ ನಂಬಿಕೆಯಿಂದ ಮತ್ತೆ ಗದ್ದೆ ಹತ್ತುತ್ತೇವೆ ಏಕೆಂದರೆ ಮಣ್ಣು ನಮ್ಮ ದೇವರು, ಮಳೆ ನಮ್ಮ ಜೀವನ.
ರಾಂ ಅಜೆಕಾರು ಕಾರ್ಕಳ
http://ramajekar.travel.blog/2025/10/25/daily-stories-19/ #ಶನಿವಾರ #ಶುಭ ಶನಿವಾರ #ಶುಭ ಶನಿವಾರ #ಶುಭ ಶನಿವಾರ
#TulunadRainVibes #UdupiMonsoonMagic #TulunadMalgale #RainyTulunadu #UdupiMossMood #TuluLandShowers #MonsoonInTulunadu #CoastalRainCharm #UdupiRainDiaries #TulunaduWeatherWhispers


