#💔ಬಾಲಿವುಡ್ ಖ್ಯಾತ ನಟ ನಿಧನ : ಕಂಬನಿ ಮಿಡಿದ ಚಿತ್ರರಂಗ😭 ಮುಂಬೈ: ಹಿಂದಿ ಚಲನಚಿತ್ರರಂಗದ ಹಿರಿಯ ಹಾಸ್ಯನಟ ಗೋವರ್ಧನ್ ಆಸ್ರಾನಿ (84) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಐದು ದಿನಗಳ ಕಾಲ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಐದು ದಶಕಗಳಿಗೂ ಹೆಚ್ಚಿನ ಕಾಲ ಬಾಲಿವುಡ್‌ಗೆ ಸೇವೆ ಸಲ್ಲಿಸಿದ ಆಸ್ರಾನಿ ಅವರು 'ಶೋಲೆ' ಚಿತ್ರದ ಜೈಲರ್ ಪಾತ್ರದಿಂದ ಖ್ಯಾತಿ ಗಳಿಸಿದ್ದರು.ಗೋವರ್ಧನ್ ಆಸ್ರಾನಿ ಜನವರಿ 1, 1940 ರಂದು ಜೈಪುರದಲ್ಲಿ ಸಿಂಧಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಕಾರ್ಪೆಟ್ ಅಂಗಡಿ ನಡೆಸುತ್ತಿದ್ದರು, ಆದರೆ ಆಸ್ರಾನಿ ಕುಟುಂಬ ವ್ಯವಹಾರದಲ್ಲಿ ಆಸಕ್ತಿ ತೋರಿಸಲಿಲ್ಲ. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಸೇಂಟ್ ಕ್ಸೇವಿಯರ್ ಶಾಲೆಯಲ್ಲಿ ಪೂರ್ಣಗೊಳಿಸಿದರು ಮತ್ತು ನಂತರ ಜೈಪುರದ ರಾಜಸ್ಥಾನ ಕಾಲೇಜಿನಿಂದ ಪದವಿ ಪಡೆದರು. #😞 ಮೂಡ್ ಆಫ್ ಸ್ಟೇಟಸ್ #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰

