#🎦ಕನ್ನಡ ಚಿತ್ರರಂಗದಿಂದ ಖ್ಯಾತ ನಟಿ ಬ್ಯಾನ್ 😲 ರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆದ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾದಲ್ಲಿ ಮಾತ್ರ ಯಾಕೆ ಅಭಿನಯಿಸುತ್ತಿಲ್ಲ? ಅವರನ್ನು ಕನ್ನಡ ಸಿನಿಮಾ ರಂಗದಿಂದ ಬ್ಯಾನ್ ಮಾಡಿದ್ದಾರಾ? ಎಂಬ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ರಶ್ಮಿಕಾ ಅವರೇ ಇದೀಗ ಉತ್ತರ ನೀಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಕೊಡಗಿನ ಮೂಲದವರಾಗಿದ್ದು, ತಮ್ಮ ವೃತ್ತಿ ಜೀವನ, ಶಿಕ್ಷಣ ಎಲ್ಲ ಆರಂಭಿಸಿದ್ದು ಬೆಂಗಳೂರಿನಲ್ಲಿ. ಇತ್ತೀಚಿನ ಕೆಲವರ್ಷದಿಂದ ಅವರು ಕನ್ನಡದ ಯಾವುದೇ ಚಿತ್ರ ಮಾಡಿಲ್ಲ. ಹೀಗಾಗಿ ಅವರನ್ನು ಸ್ಯಾಂಡಲ್ವುಡ್ನಲ್ಲಿ ಬ್ಯಾನ್ ಮಾಡಿರಬಹುದೇ? ಎಂಬ ಅನುಮಾನ ಮೂಡುತ್ತಿದೆ. ಈ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಸ್ಪಷ್ಟನೆ ನೀಡಿದ್ದಾರೆ.


