#💔ಖ್ಯಾತ ಹಿರಿಯ ನಟ ಆಸ್ಪತ್ರೆಗೆ ದಾಖಲು😭 ಬಾಲಿವುಡ್ ಖ್ಯಾತ ಹಿರಿಯ ನಟ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.ಮೂಲಗಳ ಪ್ರಕಾರ 89 ವರ್ಷದ ನಟ ಧರ್ಮೇಂದ್ರ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಟುಂಬದ ಮೂಲಗಳು ಶನಿವಾರ ತಿಳಿಸಿವೆ.ಈ ವಾರದ ಆರಂಭದಲ್ಲಿ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಒಂದೇ ವಾರದ ಅಂತರದಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಈ ಹಿಂದಿನ ವೈದ್ಯಕೀಯ ಪರೀಕ್ಷಾ ವರದಿಗಳು ತಡವಾದ್ದರಿಂದ ಎಲ್ಲಾ ದಿನನಿತ್ಯದ ತಪಾಸಣೆಗಳು ಸರಿಯಾಗಿ ನಡೆಯುವವರೆಗೆ ಅವರು ಅಲ್ಲಿಯೇ ಇರುವುದು ಉತ್ತಮ ಎಂದು ಕುಟುಂಬ ನಿರ್ಧರಿಸಿದೆ. ಅವರಿಗೆ ವಯಸ್ಸಾಗಿದ್ದು, ವೈದ್ಯರಿಂದ ಸರಿಯಾದ ಗಮನದ ಅಗತ್ಯವಿದೆ. ಚಿಂತಿಸಲು ಏನೂ ಇಲ್ಲ" ಎಂದು ಕೌಟುಂಬಿಕ ಮೂಲಗಳು ತಿಳಿಸಿವೆ.


