ShareChat
click to see wallet page
search
#🚨 ಕಿಚ್ಚ ಸುದೀಪ್‌ ಮೇಲೆ ಗಂಭೀರ ಆರೋಪ ಮಾಡಿದ ಧ್ರುವಂತ್‌!🚨 ಧ್ರುವಂತ್‌ ಕಿಚ್ಚ ಸುದೀಪ್‌ ಅವರ ಮೇಲೆ ಆರೋಪಗಳನ್ನು ಮಾಡಿರುವ ಅನ್‌ಸೀನ್‌ ವಿಡಿಯೋ ಕ್ಲಿಪ್‌ ಒಂದು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಟಾರ್ಗೆಟ್‌ ಮಾಡಿ ಕಿಚ್ಚ ಸುದೀಪ್‌ ಅವರು ಸ್ಪೇಸ್‌ ಕೊಡಲ್ಲ ಎಂದು ಧ್ರುವಂತ್‌ ಅಭಿಷೇಕ್‌ ಬಳಿ ಹೇಳಿಕೊಂಡಿದ್ದ ದೃಶ್ಯ ಈ ವಿಡಿಯೋದಲ್ಲಿದೆ..ಇಷ್ಟು ದಿನ ತೆಪ್ಪಗಿದ್ದ ಧ್ರುವಂತ್ ಇದೀಗ ರೊಚ್ಚಿಗಿದ್ದಾರೆ. ದಿನವೂ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿ ವೀಕ್ಷಕರ ಆಕ್ರೋಶಕ್ಕೆ ಗುರಿಯಾಗಿದ್ದರು. ಇದೀಗ ಕಿಚ್ಚ ಸ್ಪೇಸ್‌ ಕೊಡಲ್ಲ ಅಂತ ಆರೋಪಿಸಿದ್ದಾರೆ.ರಕ್ಷಿತಾ ವಿಚಾರ ಬಂದಾಗ ಮಾತ್ರ ಸುದೀಪ್‌ ಸರ್‌, ಓಪನ್‌ ಆಗಿ ನಿಮಗೆ ಏನ್‌ ಅನಿಸುತ್ತೆ ಹೇಳಿ ಅಂತ ಅವರಿಗೆ ಸ್ಪೇಸ್‌ ಕೊಡ್ತಾರೆ.. ಅದೇ ರೀತಿ ನನಗೆ ಯಾವಾಗ ಅವರು ಮಾತಾಡೋಕೆ ಟೈಮ್‌ ಕೊಡ್ತಾರೋ ಅವಾಗ್ಲೇ ನಾನು ಮಾತಾಡ್ತೀನಿ.. ಆದ್ರೆ ನಮಗೆ ಅವರು ಸ್ಪೇಸ್‌ ಕೊಡಲ್ಲ.. ಎಲ್ಲಿ ಮಾತಾಡ್ಬಿಡ್ತೀನಿ ಅಂತ ಹೀಗೆ ಮಾಡ್ತಾರೆ ಎಂದು ಧೃವಂತ್‌ ಆರೋಪ ಮಾಡಿದರು.ಅಲ್ಲದೆ, ಕಳೆದ ಸಂಚಿಕೆಯಲ್ಲಿ ನೆಕ್ಸ್ಟ್‌ ನೀವೆ ಮನೆಯಿಂದ ಹೊರ ಹೋಗೋದು ಅಂತ ಗಿಲ್ಲಿ ಧ್ರುವಂತ್‌ಗೆ ಹೇಳಿದ್ದ ಮಾತು ಸತ್ಯವಾಗುತ್ತಾ ಅಂತ ಕಾಯ್ದು ನೋಡಬೇಕಿದೆ.. ಒಂದು ವೇಳೆ ಈ ವಿಚಾರ ಕಿಚ್ಚನ ಗಮನಕ್ಕೆ ಬಂದ್ರೆ ವೀಕೆಂಡ್‌ನಲ್ಲಿ ಯಾವ ರೀತಿ ಕ್ಲಾಸ್‌ ತಗೋತಾರೆ ಅನ್ನೋದೆ ಕುತೂಹಲಕಾರಿ.. #🤴ಕಿಚ್ಚ ಸುದೀಪ್😍 #🆕ಲೇಟೆಸ್ಟ್ ಅಪ್ಡೇಟ್ಸ್ 📰 #🍿ಸ್ಯಾಂಡಲ್ ವುಡ್ #📰ಇಂದಿನ ಅಪ್ಡೇಟ್ಸ್ 📲
🚨 ಕಿಚ್ಚ ಸುದೀಪ್‌ ಮೇಲೆ ಗಂಭೀರ ಆರೋಪ ಮಾಡಿದ ಧ್ರುವಂತ್‌!🚨 - ShareChat
00:09