#🚨ರಾಮೇಶ್ವರಂ ಕೆಫೆ ವಿರುದ್ಧ FIR ದಾಖಲು😱 ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಊಟದಲ್ಲಿ ಹುಳ ಕಂಡುಬಂದ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಆ ಹುಳದ ಜೊತೆಗೆ ಕೆಫೆ ಮಾಲೀಕರು ಸುಳ್ಳು ದೂರು ನೀಡಿ ಗ್ರಾಹಕನಿಗೆ ಮಾನಹಾನಿ ಮಾಡಿದ ಆರೋಪದಡಿ ಮಾಲೀಕರಾದ ದಿವ್ಯಾ ರಾಘವೇಂದ್ರ ರಾವ್, ರಾಘವೇಂದ್ರ ರಾವ್ ಮತ್ತು ಮ್ಯಾನೇಜರ್ ಸುಮಂತ್ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಬೆಂಗಳೂರು ವಿಮಾನ ನಿಲ್ದಾಣದ ಡಿಪಾರ್ಚರ್ ಪ್ರದೇಶದಲ್ಲಿರುವ ರಾಮೇಶ್ವರಂ ಕೆಫೆಯ ಊಟದಲ್ಲಿ ಹುಳ ಕಂಡುಬಂದಿತ್ತು. ಆಘಾತಗೊಂಡ ಯುವಕರು ತಕ್ಷಣ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ವಿಡಿಯೋ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿತ್ತು.
ಆದರೆ ಇದೇ ಸಮಯಕ್ಕೆ ಕೆಫೆಗೆ ಅನಾಮಧೇಯ ಕರೆ ಬಂದಿದ್ದು, ಹಣಕ್ಕೆ ಬೇಡಿಕೆ ಇಡಲಾಗಿತ್ತು. ಈ ಕರೆಯನ್ನು ವಿಡಿಯೋ ಮಾಡಿದ ಯುವಕರೇ ಮಾಡಿದ್ದಾರೆಂದು ಭಾವಿಸಿದ ಕೆಫೆ ಮಾಲೀಕರು ತಕ್ಷಣ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಅವರು ಯುವಕರ ಮೇಲೆ ಬ್ಲ್ಯಾಕ್‌ಮೇಲ್ ಮತ್ತು ಹಣಕ್ಕೆ ಬೇಡಿಕೆ ಇಟ್ಟ ಆರೋಪ ಹೊರಿಸಿದ್ದರು.ಯುವಕರು ಆ ದೂರನ್ನು ವಿರೋಧಿಸಿದ್ದು, 'ನಾವು ವಿಡಿಯೋ ಮಾಡಿದ್ದು ನಿಜವಾದ ಘಟನೆಯನ್ನು ಜನರಿಗೆ ತಿಳಿಸಲು ಮಾತ್ರ. ಯಾವುದೇ ಹಣಕ್ಕೆ ಬೇಡಿಕೆ ಇಟ್ಟಿಲ್ಲ' ಎಂದು ಅವರು ಹೇಳಿದರು. ಪ್ರಕರಣವನ್ನು ಮೊದಲು ವಿಮಾನ ನಿಲ್ದಾಣ ಠಾಣೆಯಿಂದ ವೈಯಾಲಿಕಾವಲ್ ಠಾಣೆಗೆ ವರ್ಗಾಯಿಸಲಾಯಿತು. ವೈಯಾಲಿಕಾವಲ್ ಪೊಲೀಸರು ತನಿಖೆ ನಡೆಸಿದಾಗ, ಹಣಕ್ಕೆ ಬೇಡಿಕೆ ಇಟ್ಟ ಕರೆಯ ಸಂಖ್ಯೆಯು ವಿಡಿಯೋ ಮಾಡಿದ ಯುವಕರದ್ದಲ್ಲ ಎಂಬುದು ಖಚಿತವಾಯಿತು. ಬೇರೊಬ್ಬರೇ ಬ್ಲ್ಯಾಕ್‌ಮೇಲ್‌ಗೆ ಯತ್ನಿಸಿದ್ದರು ಎಂಬುದು ತಿಳಿದು ಬಂದಿದೆ.
ಈ ಸತ್ಯ ಬಯಲಾದ ಬಳಿಕ ವಿಡಿಯೋ ಮಾಡಿದ ಯುವಕ ತಾನು ಮಾಡದ ತಪ್ಪಿಗೆ ಆರೋಪಿಯಾಗಿದ್ದೇನೆ, ನನ್ನ ಮೇಲೆ ಸುಳ್ಳು ಆರೋಪ ಹೊರಿಸಿ ಮಾನಹಾನಿ ಮಾಡಲಾಗಿದೆ ಎಂದು ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದರು. ಈ ದೂರಿನ ಆಧಾರದ ಮೇಲೆ ರಾಮೇಶ್ವರಂ ಕೆಫೆಯ ಮಾಲೀಕರಾದ ದಿವ್ಯಾ ರಾಘವೇಂದ್ರ ರಾವ್, ರಾಘವೇಂದ್ರ ರಾವ್ ಹಾಗೂ ಮ್ಯಾನೇಜರ್ ಸುಮಂತ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰 #😞 ಮೂಡ್ ಆಫ್ ಸ್ಟೇಟಸ್


