ಬಾಲಿವುಡ್ ಕಿಂಗ್ ಶಾರುಖ್ ಖಾನ್ ತಮ್ಮ ಪತ್ನಿ ಗೌರಿ ಖಾನ್ ಅವರನ್ನು ತುಂಬಾ ಪ್ರೀತಿಸುತ್ತಾರೆ, ಅವರಿಬ್ಬರೂ ಅಕ್ಟೋಬರ್ 25, 1991 ರಂದು ವಿವಾಹವಾದರು. ಗೌರಿ ಜೀವನದಲ್ಲಿ ಬಂದ ನಂತರ, ಶಾರುಖ್ ಖಾನ್ ಚಲನಚಿತ್ರಗಳು ಮತ್ತು ವೃತ್ತಿಜೀವನದ ಕಡೆಗೆ ತಮ್ಮ ಸಂಪೂರ್ಣ ಗಮನವನ್ನು ನೀಡಿದರು.ಶಾರುಖ್ ಖಾನ್ ಅವರ ಹೆಸರು ಕೆಲವು ನಟಿಯರೊಂದಿಗೆ ತಳಕು ಹಾಕಿಕೊಂಡಿತ್ತು. ಆದರೆ ಗೌರಿ ಜೊತೆಗಿನ ಸಂಬಂಧ ಹದಗೆಡಿಸಲು ಸಾಧ್ಯವಾಗಲಿಲ್ಲ. 'ಡಾನ್ 2' ಚಿತ್ರೀಕರಣದ ಸಮಯದಲ್ಲಿ ವಿವಾಹಿತ ಶಾರುಖ್ ಮತ್ತು ಪ್ರಿಯಾಂಕಾ ಚೋಪ್ರಾ ನಡುವೆ ಸಂಬಂಧದ ವದಂತಿಗಳು ಶುರುವಾಗಿದ್ದವು. ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ತನಗಿಂತ 16 ವರ್ಷ ಹಿರಿಯ ವಯಸ್ಸಿನ ಶಾರುಖ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವದಂತಿ ಜೋರಾಗಿತ್ತು. ಆ ಸಮಯದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಶಾರುಖ್ ಖಾನ್ ಹೆಚ್ಚಾಗಿ ಒಟ್ಟಿಗೆ ಸುತ್ತಾಡುತ್ತಿದ್ದರು. ಈ ಬಗ್ಗೆ ಪತ್ನಿ ಗೌರಿ ಖಾನ್ ಕೂಡ ಚಿಂತಿತರಾಗಿದ್ದರಂತೆ ಎನ್ನಲಾಗಿತ್ತು. ನಟಿ ಪ್ರಿಯಾಂಕಾ ಚೋಪ್ರಾಗೆ ಗೌರಿ ಖಾನ್ ಖಡಕ್ ಆಗಿಯೇ ವಾರ್ನಿಂಗ್ ಕೊಟ್ಟಿದ್ದರಂತೆ. ಕರಣ್ ಜೋಹರ್ ಗೌರಿ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಇಬ್ಬರಿಗೂ ಸ್ನೇಹಿತರಾಗಿದ್ದರು. ಶಾರುಖ್ ವಿಚಾರದಲ್ಲಿ ಕರಣ್ ಗೌರಿ ಪರವಾಗಿ ನಿಂತರೂ ಎನ್ನಲಾಗುತ್ತದೆ.ಶಾರುಖ್ ಜೊತೆಗಿನ ವದಂತಿಯ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಹಲವಾರು ಸಿನಿಮಾಗಳಿಂದ ಹೊರಗಿಡಲಾಗಿತ್ತು. #👉 ಶಾರುಖ್ ಖಾನ್ ಜೊತೆ ಸ್ಟಾರ್ ನಟಿ ಅಫೇರ್😱


