#🌟ಹನುಮ ಜಯಂತಿಯ ಶುಭಾಶಯಗಳು🙏 🌸 #💐ಮಂಗಳವಾರದ ಶುಭಾಶಯಗಳು ಹನುಮ ಜಯಂತಿಯನ್ನು ಹಿಂದೂ ಸಂಪ್ರದಾಯದಲ್ಲಿ ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತದೆ. ಡಿಸೆಂಬರ್ 3 ರಂದು ಹನುಮದ್ವೃತಂ ಇದೆ, ಇದು ಹನುಮ ಜಯಂತಿಯ ಆಚರಣೆಯಾಗಿದೆ. ಆದರೆ, ವಿವಿಧ ಪ್ರದೇಶಗಳಲ್ಲಿ ಹನುಮ ಜಯಂತಿಯನ್ನು ಬೇರೆ ದಿನಾಂಕಗಳಲ್ಲಿ ಆಚರಿಸುತ್ತಾರೆ. ಹನುಮನ ಪೂಜೆ ಮತ್ತು ಪುನಸ್ಕಾರಗಳನ್ನು ನಿರ್ದಿಷ್ಟವಾಗಿ ಮಂಗಳವಾರ ಮತ್ತು ಶನಿವಾರದಂದು ಮಾಡಲಾಗುತ್ತದೆ. ಹನುಮನ ಸ್ಮರಣೆಯಿಂದ, ಪೂಜೆಯಿಂದ ಮತ್ತು ದರ್ಶನದಿಂದ ಜೀವನಕ್ಕೆ ಮಹತ್ವದ ಲಾಭಗಳು ದೊರೆಯುತ್ತವೆ. ಅವುಗಳೆಂದರೆ ಶಕ್ತಿ, ಭಕ್ತಿ ಮತ್ತು ಯುಕ್ತಿ. ಈ ಮೂರು ಅಂಶಗಳು ಜೀವನದಲ್ಲಿ ಇದ್ದರೆ, ಜೀವನವು ಸಾಫಲ್ಯತೆಯನ್ನು ಪಡೆಯುತ್ತದೆ ಎಂದು ಹೇಳಲಾಗುತ್ತದೆ.ಹನುಮ ಜಯಂತಿಯ ಆಚರಣೆಗೆ ಎರಡು ಪ್ರಮುಖ ಸಂದರ್ಭಗಳಿವೆ. ಒಂದು ಚೈತ್ರ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಮತ್ತೊಂದು ಸಂದರ್ಭವು ಹನುಮನು ರಾವಣನ ಆಸ್ಥಾನಕ್ಕೆ ಸೀತೆಯ ಅನ್ವೇಷಣೆಯಲ್ಲಿ ಹೋಗಿ, ಸೀತೆಯನ್ನು ಗುರುತಿಸಿ ಬಂದ ವಿಜಯೋತ್ಸವದ ನೆನಪಿಗೆ. ಈ ಎರಡೂ ಸಂದರ್ಭಗಳಲ್ಲಿ ಹನುಮ ಜಯಂತಿಯನ್ನು ಆಚರಿಸುವ ಪದ್ಧತಿ ನಮ್ಮ ಸಂಪ್ರದಾಯದಲ್ಲಿದೆ. #🙏 ಭಕ್ತಿ ವಿಡಿಯೋಗಳು 🌼 #💪 ಜೈ ಹನುಮಾನ್ 🚩 #🔱 ಭಕ್ತಿ ಲೋಕ


