ShareChat
click to see wallet page
search
#😭ಖ್ಯಾತ ಗಾಯಕ ನಿಧನ 💔 ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪಂಜಾಬಿ ಖ್ಯಾತ ಗಾಯಕ ರಾಜ್ ವೀರ್ ಜವಾಂಡಾ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.ಆಸ್ಪತ್ರೆಯಲ್ಲಿ ಸುಮಾರು ಎರಡು ವಾರಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ನಿಧನರಾದರು. ಅವರಿಗೆ 35 ವರ್ಷ ವಯಸ್ಸಾಗಿತ್ತು.ತಮ್ಮ ಭಾವಪೂರ್ಣ ಧ್ವನಿ ಮತ್ತು ಹಿಟ್ ಹಾಡುಗಳಿಗೆ ಹೆಸರುವಾಸಿಯಾಗಿದ್ದ ಗಾಯಕ, ಕಳೆದ ತಿಂಗಳ ಕೊನೆಯಲ್ಲಿ ಪಿಂಜೋರ್ ಬಳಿ ನಡೆದ ರಸ್ತೆ ಅಪಘಾತದ ನಂತರ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ರಾಜವೀರ್ ಅವರ ಸ್ಥಿತಿ ಸುಧಾರಿಸಲಿಲ್ಲ. ಪಂಜಾಬ್ ವಿಧಾನಸಭಾ ಸದಸ್ಯ ಪ್ರತಾಪ್ ಸಿಂಗ್ ಬಜ್ವಾ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿಯನ್ನು ದೃಢಪಡಿಸಿದರು. ಬಿಜೆಪಿ ಪಂಜಾಬ್ ಉಪಾಧ್ಯಕ್ಷ ಫತೇಹ್ ಜಂಗ್ ಸಿಂಗ್ ಬಜ್ವಾ ಕೂಡ ರಾಜವೀರ್ ಜವಾಂದ ಅವರ ನಷ್ಟಕ್ಕೆ ಸಂತಾಪ ಸೂಚಿಸಿದರು. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰 #😞 ಮೂಡ್ ಆಫ್ ಸ್ಟೇಟಸ್
😭ಖ್ಯಾತ ಗಾಯಕ ನಿಧನ 💔 - ShareChat
00:09