ShareChat
click to see wallet page
search
ಪ್ರಕೃತಿಯಂತೆ, ಬದುಕಿನಂತೆ, ಹಂಚಿಕೊಳ್ಳುವ ಮನೋಭಾವನೆ ಹೊಂದಿದಾಗಲೇ ಶಾಶ್ವತ ಬದುಕು ಸಾಧ್ಯ/!!! ಅದೊಂದು ತೆಂಗಿನಮರ. ಮನುಜರ ಮಧ್ಯೆ ಬೆಳೆದಿದ್ದರೂ, ಅವನಿಂದ ತನ್ನಿಗೆ ಯಾವುದೇ ಲಾಭವಿಲ್ಲವೆಂದು ಅದು ಅರಿತುಕೊಂಡಿತ್ತು. ಏಕೆಂದರೆ ಮನುಜನು ಸದಾ ಸ್ವಾರ್ಥಪರ, ತನ್ನ ಅಗತ್ಯ ಪೂರೈಸದಿದ್ದರೆ ಮರವನ್ನು ಕೊಚ್ಚಿ ಹಾಕುವವನೇ. ಆ ಕಾರಣದಿಂದ ಮರವು ನದಿಯತ್ತ ವಾಲಿಕೊಂಡಿತು. ಮರದ ಹಠ ಅಷ್ಟೇನೋ, ತನ್ನ ತೆಂಗಿನಕಾಯಿ ಮನುಜನ ಕೈಗೂ ಸೇರಬಾರದು, ಪ್ರಾಣಿಗಳ ಬಾಯಿಗೂ ಸೇರಬಾರದು. ಆದರೆ ಆ ಹಠದ ನಡುವೆಯೇ ಮರದ ಕೊಂಬೆಗಳ ಮೇಲೆ ಗೂಡು ಕಟ್ಟಿದ್ದ ಹಕ್ಕಿಗಳ ಮೊಟ್ಟೆಗಳು ನದಿಗೆ ಬಿದ್ದುಹೋಗುತ್ತಿರುತ್ತವೆ. ಮರ ತನ್ನ ಬದುಕಿನ ತವಕದಲ್ಲಿ, ಇತರರ ಜೀವವನ್ನೇ ಅಪಾಯಕ್ಕೆ ತಳ್ಳುತ್ತಿತ್ತು. ಮರವು ತನ್ನ ಅಸ್ತಿತ್ವಕ್ಕಾಗಿ ದಿನವೂ ಬೇರುಗಳನ್ನು ನದಿಯತ್ತ ಸಾಗಿಸುತ್ತಿತ್ತು. ಮಳೆಗಾಲದಲ್ಲಿ ಭೋರ್ಗರೆವ ನದಿ, ಬೇಸಗೆಯಲ್ಲಿ ಒಣಗುತ್ತಿತ್ತಾದರೂ ಅದರ ನಂಬಿಕೆ ನದಿಯಲ್ಲೇ. ಬದುಕಬೇಕೆಂಬ ಹಂಬಲದಲ್ಲಿ ಅದು ನಿರಂತರ ನದಿಯತ್ತ ತಲೆಬಾಗುತ್ತಲೇ ಇತ್ತು. ಆದರೆ ಕಾಲ ಬದಲಾಯಿತು. ಒಮ್ಮೆ ಭೀಕರ ಮಳೆಯಾಗಿ, ನದಿಗೆ ಪ್ರವಾಹವಾಯಿತು. ನದಿಯ ಸೆಳೆತದಲ್ಲಿ ಮರದ ಕೆಳಭಾಗದ ಮಣ್ಣು ಕೊಚ್ಚಿಕೊಂಡು ಹೋಯಿತು. ಮರವು ತನ್ನ ಹಠದೊಂದಿಗೆ ಕೊನೆಗೂ ನೆಲ ಕಳೆದುಕೊಂಡು ಬಿದ್ದು, ಸಮುದ್ರ ಸೇರಿ ಅಳಿದುಹೋಯಿತು. ಮರದ ಬದುಕಿನ ಹಂಬಲ, ಅದರ ಹಠ, ಕೊನೆಯಲ್ಲಿ ಅದನ್ನೇ ನಾಶಮಾಡಿತು. ಜೀವನದಲ್ಲಿ ಹಠ, ಸ್ವಾರ್ಥ, ಕೇವಲ ನನ್ನ ಅಸ್ತಿತ್ವವೇ ಮುಖ್ಯ ಎಂಬ ಮನೋಭಾವವು ಕೊನೆಗೆ ನಾಶಕ್ಕೆ ಕಾರಣವಾಗುತ್ತದೆ. ರಾಂ‌ ಅಜೆಕಾರು ಕಾರ್ಕಳ http://ramajekar.travel.blog/2025/09/19/daily-stories-8/ #ಕ್ಯಾಪ್ಟನ್ಸಿಯಲ್ಲಿ ತಮ್ಮ ಸ್ಪೂರ್ತಿ ಯಾರೆಂದು ತಿಳಿಸಿದ ಶುಭಮನ್ ಗಿಲ್ #🙏ರವಿ. ಡಿ.ಚನ್ನಣ್ಣನವರ್ IPS ಆಫೀಸರ್ ಯುವಕರ ಸ್ಪೂರ್ತಿ🙏🙏 #ಸ್ಪೂರ್ತಿ ಚಿಲುಮೆ #ಇದು ನಿಜವಾದ ಕ್ರೀಡಾ ಸ್ಪೂರ್ತಿ #ಸ್ಪೂರ್ತಿ ಸೆಲೆ
ಕ್ಯಾಪ್ಟನ್ಸಿಯಲ್ಲಿ ತಮ್ಮ ಸ್ಪೂರ್ತಿ ಯಾರೆಂದು ತಿಳಿಸಿದ ಶುಭಮನ್ ಗಿಲ್ - @Ram Aekaroficial @Ram Aekaroficial - ShareChat